ಕವನ: ಪಕ್ಷಿಯ ಪ್ರಪಂಚ

Must Read

ಪಕ್ಷಿಯ ಪ್ರಪಂಚ

ಯಾವಾಗಲೂ ಎಲ್ಲರ ನಿಂದಿಸುವ
ಓ ಮನುಜನೇ
ಇಗೋ ನೋಡಿದು ನಮ್ಮದು
ಪ್ರಾಣಿ ಪಕ್ಷಿಯ ಪ್ರಪಂಚ

ಯಾರ ಆಸರೆಯೂ ಇಲ್ಲ
ಊಟವಿಲ್ಲದಿದ್ದರೂ ಮುಖದಲ್ಲಿ
ಮಂದಹಾಸ ಮರೆಮಾಚಿಲ್ಲ
ನನ್ನದು ಪ್ರಾಣಿ ಪಕ್ಷಿಯ ಪ್ರಪಂಚ

ಅಲ್ಲಿಂದ ಇಲ್ಲಿಂದ ಎಲ್ಲಿಂದಲೋ
ಹೊಂದಿಸಿ ತಂದ ಊಟ
ಮರದ ಪೊಟರೆಗಳಲ್ಲಿ ಹೊಂದಿಸುತ
ನಾಳೆಯೊಂದರ ಬಗ್ಗೆ ಯೊಚಿಸುವುದೇ
ನನ್ನ ಪ್ರಪಂಚ

ಓ ಮನುಜನೇ ನಿನಗೆ ಕೈ ಮುಗಿದು
ಯಾಚಿಸುವೆ ನನ್ನ ಪ್ರಪಂಚವ
ದೂರಗೊಳಿಸದಿರು ನಾ ಬೀಡು ಬಿಟ್ಟ ಆ ಮರ
ಅಲುಗಿಸದೆ ಉರುಳಿಸದಿರು…..

ಎಲ ಎಲವೋ ಮನುಜ ನೀನೊಂದು
ವಿಷ ಜಂತು ನಾನಿದ್ದ ಆ ಪೊಟರೆ ಧ್ವಂಸಗೊಳಿಸಿದೆ
ಕಾಡೊಂದು ಹಾಳುಗೆಡವಿದೆ ಇದು ಸರಿಯೇ ಮನುಜ ನೀನೇ ಹೇಳೆಯಾ…


ರಾಹುಲ್ ಸರೋದೆ ‍
ಗಂಗಾವತಿ – 583227
Mo : 948244873

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group