ಗುರ್ಲಾಪೂರ- ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮದ ಬೀಟ್ ಅದಿಕಾರಿಯಾದ ಎಮ್ ಡಿ ಹಿರೇಮಠ ಇವರು ಮೆಲಧಿಕಾರಿಗಳ ಆದೇಶದ ಮೇರೆಗೆ ಪೋಲಿಸ ಇಲಾಖೆಯಿಂದ ಗ್ರಾಮದ ಜನರಿಗೆ ಸಿಗುವ ಸೌಲಭದ ಬಗ್ಗೆ ತಿಳಿಸಿದರು.
ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಪೋಲಿಸ ಇಲಾಖೆಯಿಂದ ಹೊರಡಿಸಿರುವ ಪೋಲಿಸ ಜನಸ್ನೇಹಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಅದೂ ಅಲ್ಲದೆ ಮನೆಗಳಿಗೆ ಭೇಟಿ ನೀಡಿ ಫಲಕವನ್ನು ಅವರ ಮನೆಗಳಿಗೆ ಅಂಟಿಸಿ ಅದರಲ್ಲಿ ತಮಗೆ ಯಾವುದೆ ರೀತಿಯ ತೊಂದರೆಯಾದರೆ ತಕ್ಷಣ ಇದರಲ್ಲಿರುವ ನಂಬರಗಳಿಗೆ ಪೋನ ಮಾಡಿ ಸಹಾಯ ಪಡೆಯಬಹುದು ಎಂದು ತಿಳಿಸಿದರು.

