ಮುಂಬಯಿನಲ್ಲಿ ಗುಜರಿ ಕೆಲಸ ಮಾಡಿಕೊಂಡು ಇದ್ದ ಪ್ರಭು ಚವ್ಹಾಣ – ರಾಜಶೇಖರ ಪಾಟೀಲ ಲೇವಡಿ

Must Read

ಬೀದರ – ನಮ್ಮ ತಂದೆಯವರ ಬಗ್ಗೆ ಮಾತನಾಡುವ ನೈತಿಕತೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣಗೆ ಇಲ್ಲ ನಮ್ಮ ತಂದೆ ರಾಜಕೀಯದಲ್ಲಿದ್ದಾಗ ಪ್ರಭು ಚವ್ಹಾಣ ಬಾಂಬೆಯಲ್ಲಿ ಗುಜರಿ ಕೆಲಸ ಮಾಡುತ್ತಿದ್ದರು ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ ಲೇವಡಿ ಮಾಡಿದರು.

ಬೀದರನ ವಿಧಾನ ಪರಿಷತ್ ಚುನಾವಣೆ ಇಡೀ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಶಾಸಕ ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಂಬೆ ಸೆ ಔರಾದ ಬಯೊಡಾಟಾ ಬಿಚ್ಚಿಡ್ತಿನಿ ನಿ ಮುಂಬಯಿ ನಲ್ಲಿ ಗುಜರಿ ಕೆಲಸ ಮಾಡಿಕೊಂಡು ಬಂದಿದ್ದೆ ಎಂದು ಏಕವಚನದಲ್ಲಿ ಹರಿಹಾಯ್ದು ಪಾಟೀಲ, ತಮ್ಮ ಕುಟುಂಬದ ಬಗ್ಗೆ ಚಕಾರ ಎತ್ತುತ್ತಿರುವುದು ಸರಿಯಲ್ಲ ಅದರಲ್ಲೂ ಲಿಂಗೈಕ್ಯರಾದ ನಮ್ಮ ತಂದೆ ಬಸವರಾಜ ಪಾಟೀಲರ ಬಗ್ಗೆ ಮಾತನಾಡಿದರೆ ಸಚಿವ ಪ್ರಭು ಚವ್ಹಾಣ ರವರ ಜನ್ಮ ಜಾಲಾಡುತ್ತೇನೆ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಬಗ್ಗೆ ಅವರಿಗೆ ಏನು ಅರ್ಥವಾಗುತ್ತದೆ ಹೇಳಿ ಅವರ ಪಿ ಎ ಹೇಳಿದ್ದನ್ನೇ ಸಭೆಯಲ್ಲಿ ಹೇಳುತ್ತಾರೆ. ಇಷ್ಟು ದಿನ ಅವರು ಬಾಂಬೆಯಲ್ಲಿ ಗುಜರಿ ಕೆಲಸ ಮಾಡಿಕೊಂಡಿದ್ದರು ಎಂದರು

ಚುನಾವಣೆ ಮುಗಿದ ಮೇಲೆ ಈ ಸಚಿವರ ವರ್ಗಾವಣೆ ವಸೂಲಿ ದಂಧೆ ಎಲ್ಲಿ ಇಳಿದಿದೆ ಯಾವ ಅಧಿಕಾರಿ ನಿಮಗೆ ಎಷ್ಟು ತಂದು ಕೊಟ್ಟಿದ್ದಾರೆ ಎಂಬುದು ಎಳೆ ಎಳೆಯಾಗಿ ಬಿಚ್ಚಿ ಇಡುತ್ತೇನೆ ಎಂದೂ ಅವರು ಎಚ್ಚರಿಕೆ ನೀಡಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group