ಬೀದರ – ಕೇಂದ್ರ ಸಚಿವ ಭಗವಂತ ಖೂಬಾ ನನ್ನ ಸೋಲಿಸಲು ಕುತಂತ್ರ ಮಾಡಿದರು, ಆದರೆ ಕ್ಷೇತ್ರದ ಜನತೆ ನನ್ನ ಕೈ ಬಿಡಲಿಲ್ಲ ಎಂದು ಮಾಧ್ಯಮದವರ ಮುಂದೆ ಔರಾದ್ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಪ್ರಭು ಚೌಹಾಣ್ ಬಿಕ್ಕಿ ಬಿಕ್ಕಿ ಅತ್ತರು.
ಹೆತ್ತ ತಾಯಿಗೆ, ಮೋಸ ಮಾಡೊ ಕೆಲಸವನ್ನ ಭಗವಂತ ಖುಬಾ ಮಾಡಿದಾರೆ. ಔರಾದ್‌ನಲ್ಲಿ ೩೦೦ ಜನರನ್ನ ಬಿಟ್ಟು, ನನ್ನ ಸೋಲಿಸಲು ಕುತಂತ್ರ ಮಾಡಿದ್ರು. ಆದ್ರೆ ಔರಾದ್ ಜನ ನನ್ನ ಕೈ ಹಿಡಿದಿದ್ದಾರೆ. ಹಿಂದೆ ಲೋಕಸಬಾ ಚುನಾವಣೆಯಲ್ಲಿ ನಾವೇ ನಿಂತು ಅವರ ಚುನಾವಣೆ ಮಾಡಿದ್ದೆವು. ಆದರೆ ಭಗವಂತ ಖೂಬಾ, ನನ್ನ ವಿರುದ್ದ ಯಾಕೆ ಷಡ್ಯಂತ್ರ ಮಾಡಿದ್ರೋ ಗೊತ್ತಿಲ್ಲಾ ಎಂದು ಪ್ರಭು ಚವ್ಹಾಣ ಕಣ್ಣೀರು ಹಾಕಿದರು.
ಪ್ರಭು ಚೌಹಾಣ್ ಸೋಲಿಸಬೇಕು ಎಂದು ಮನೆ ಮನೆಗೆ ಹೋಗಿ ಭಗವಂತ ಖೂಬಾ ಮತ್ತು ಟೀಂ ಪ್ರಚಾರ ಮಾಡಿದ್ದಾರೆ. ನಾನು ಭಗವಂತ ಖುಬಾಗೆ ಏನೂ ಮೋಸ ಮಾಡದೇ ಇದ್ರೂ, ನನಗೆ ದೋಖಾ ಮಾಡಿದ್ರು. ನಾನು ಸೋಲಬೇಕು ಅಂತಾ, ಭಗವಂತ ಖುಬಾ ಕಾಂಗ್ರೆಸ್‌ಗೆ ಫಂಡಿಂಗ್ ಮಾಡಿದ್ದಾರೆ. ನನಗೆ ಬಹಳ ನೋವಾಗಿದೆ ಎಂದು ಬಿಕ್ಕಿಬಿಕ್ಕಿ ಅತ್ತರು ಪ್ರಭು ಚೌಹಾಣ್
ವರದಿ: ನಂದಕುಮಾರ ಕರಂಜೆ, ಬೀದರ