spot_img
spot_img

ಭರವಸೆ ಈಡೇರಲಿ, ತುಷ್ಟೀಕರಣ ನಿಲ್ಲಲಿ

Must Read

- Advertisement -

ಬೆಂಗಳೂರು – ರಾಜ್ಯದ ಜನರಿಗೆ ಉಚಿತ ಕೊಡುಗೆಗಳ ಮತ್ತು ತುಂಬಾನೇ ತಲೆಗೇರಿದ್ದು ಕಾಂಗ್ರೆಸ್ ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ.

೨೨೪ ವಿಧಾನ ಸಭಾ ಸೀಟುಗಳ ಪೈಕಿ ಕಾಂಗ್ರೆಸ್ ಪಕ್ಷ ೧೩೬ ಸೀಟು ಗೆದ್ದು ಅಖಂಡ ಬಹುಮತ ಸಾಧಿಸಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಬದಲಾವಣೆಯ ಬಿಸಿ ತಟ್ಟಿದೆ. ಬಿಜೆಪಿಗೆ ಕೇವಲ ೬೫ ಸ್ಥಾನಗಳು ಸಿಕ್ಕಿವೆ. ಸುಮಾರು ೧೨೦ ಸ್ಥಾನಗಳಿಗೆ ಸ್ಪರ್ಧಿಸಿ ಕಿಂಗ್ ಮೇಕರ್ ಆಗಲು ಬಯಸಿದ್ದ ಜಾತ್ಯತೀತ ಜನತಾ ದಳ ಕೇವಲ ೧೯ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಸಿಂಗಪೂರನಲ್ಲಿ ಇದ್ದುಕೊಂಡು ಏನೇನೋ ಶರತ್ತುಗಳನ್ನು ಹಾಕುತ್ತಿದ್ದ ದಳಪತಿ ಕುಮಾರಸ್ವಾಮಿಯವರು ಖಾಲಿ ಕೈಗಳಿಂದ ವಾಪಸಾಗಬೇಕಾಗಿದೆ.

ಚುನಾವಣೆಗೆ ಮುಂಚೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಭರಪೂರ ಕೊಡುಗೆಗಳನ್ನು ಘೋಷಣೆ ಮಾಡಿತ್ತು. ಮನೆಯ ಗೃಹಿಣಿಗೆ ರೂ. ೨೦೦೦, ನಿರುದ್ಯೋಗಿಗಳಿಗೆ ರೂ. ೩೦೦೦, ಹತ್ತು ಕೆಜಿ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ…ಇವೇ ಮುಂತಾದ ಭರವಸೆಗಳನ್ನು ಕಾಂಗ್ರೆಸ್ ನೀಡಿದ್ದು ಅದರ ವರಸೆ ಯಶಸ್ವಿಯಾಗಿದೆ. ಜನರು ಮರುಳಾಗಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ. ಇನ್ನು ಈ ಭರವಸೆಗಳನ್ನು ಕಾಂಗ್ರೆಸ್ ಎಷ್ಟರಮಟ್ಟಿಗೆ ಈಡೇರಿಸುತ್ತದೆ ಎಂಬುದನ್ನು ಕಾಲವೇ ತಿಳಿಸಬೇಕು.

- Advertisement -

ಆದಾಗ್ಯೂ ಈ ಉಚಿತ ಭರವಸೆಗಳನ್ನು ಈಡೇರಿಸುವುದು ಕಾಂಗ್ರೆಸ್ ಪಾಲಿಗೆ ಸುಲಭ ತುತ್ತಲ್ಲ. ಈಗಾಗಲೇ ರಾಜಸ್ಥಾನ ದಲ್ಲಿ ಇದೇರೀತಿ ಭರವಸೆಗಳನ್ನು ನೀಡಿ ಅವುಗಳನ್ನು ಈಡೇರಿಸದೇ ಜಾರಿಕೊಂಡಿದೆ. ಅದೇ ರೀತಿ ಕರ್ನಾಟಕದಲ್ಲಿ ಕೂಡ ಆಗುತ್ತದೆ ಎಂಬ ಮಾತಿಗೆ ಕಾಂಗ್ರೆಸ್ ತೀವ್ರವಾಗಿ ಪ್ರತಿಕ್ರಿಯಿಸಿ ತನ್ನ ಭರವಸೆಗಳಿಗೆ ಗ್ಯಾರಂಟಿ ಕಾರ್ಡ್ ಗಳನ್ನೇ ನೀಡಿದೆ. ಅಷ್ಟರಮಟ್ಟಿಗೆ ಅದು ಎಲ್ಲ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದೆ.

ಸದ್ಯಕ್ಕೆ ಕಾಂಗ್ರೆಸ್ ಮುಂದಿರುವುದು ಮುಂದಿನ ಮುಖ್ಯಮಂತ್ರಿ ಆಯ್ಕೆಯ ಸವಾಲು. ಡಿಕೆಶಿ, ಸಿದ್ಧರಾಮಯ್ಯ ಹಾಗೂ ಜಿ. ಪರಮೇಶ್ವರ ಮಧ್ಯೆ ಮುಖ್ಯಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆದಿದ್ದು ಇದನ್ನು ಎಐಸಿಸಿ ಅಧ್ಯಕ್ಷ ಖರ್ಗೆಯವರು ಹಾಗೂ ನೇತಾರ ರಾಹುಲ್ ಗಾಂಧಿಯವರು ಹೇಗೆ ನಿಭಾಯಿಸುತ್ತಾರೋ ನೋಡಬೇಕು. ಒಟ್ಟಿನಲ್ಲಿ ಬಹುಮತದಿಂದ ಆಯ್ಕೆಗೊಂಡ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸ್ಥಾನದ ಜಟಾಪಟಿಯಲ್ಲೇ ಆರೇಳು ತಿಂಗಳು ವ್ಯರ್ಥ ಮಾಡದಿದ್ದರೆ ಸಾಕು ಎಂಬುದು ಜನತಾ ಜನಾರ್ಧನನ ಅಭಿಪ್ರಾಯ.

ಹಾಗೆಯೇ ಉಚಿತ ಬೇಡಿಕೆಗಳ ಈಡೇರಿಸಲು ಕಾಂಗ್ರೆಸ್ ಅನುಸರಿಸುವ ಪದ್ಧತಿಯೇನು, ಕ್ರಮಗಳೇನು ಎಂಬ ಬಗ್ಗೆ ಎಲ್ಲೆಡೆ ಕುತೂಹಲ ಇದೆ. ರಾಜ್ಯದ ಮೇಲೆ ಯಾವುದೇ ಆರ್ಥಿಕ ಹೊರೆಯಾಗದ ಹಾಗೆ, ಜನತೆಯ ಮೇಲೆ ಬೆಲೆಯೇರಿಕೆಯ ಹೊರೆಯಾಗದ ಹಾಗೆ ನಿಭಾಯಿಸಿದರೆ ಸಾಕು. ಅಲ್ಲದೆ ಕಾಂಗ್ರೆಸ್ ನ ತುಷ್ಟೀಕರಣ ನೀತಿ ವಿಜೃಂಭಿಸದೆ ನಿಜವಾದ ಜಾತ್ಯತೀತ ಸರ್ಕಾರ ಜಾರಿಯಲ್ಲಿ ಬರಬೇಕು ಎನ್ನುವುದ ಎಲ್ಲರ ಆಶಯ.

- Advertisement -

ಒಟ್ಟಿನಲ್ಲಿ ನೂತನ ಕಾಂಗ್ರೆಸ್ ಸರ್ಕಾರದ ಮೇಲೆ ಕರುನಾಡ ಜನತೆಯ ಅತೀವ ನಿರೀಕ್ಷೆಗಳಿವೆ ಎಂಬುದು ಮಾತ್ರ ಸುಳ್ಳಲ್ಲ.


ವರದಿ: ಉಮೇಶ ಬೆಳಕೂಡ, ಮೂಡಲಗಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!
Join WhatsApp Group