ಸ್ನೇಹ ಸಂಗಮ ಕಾರ್ಯ ಕ್ರಮದ ಪೂರ್ವ ಭಾವೀ ಸಭೆ

0
512

ಮುನವಳ್ಳಿ: ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಎಸ್. ಪಿ ಜೆ. ಜಿ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸನ್ 1986-87 ನೆಯ ಸಾಲಿನ ಎಸ್.ಎಸ್.ಎಲ್.ಸಿ.. ಹಾಗೂ ಸನ್ 1988-89 ನೆಯ ಸಾಲಿನ ಪಿ.ಯು.ಸಿ.ಅಧ್ಯಯನ ಮಾಡಿದ ವಿದ್ಯಾರ್ಥಿಗಳು ,ತಮ್ಮ ಅಧ್ಯಯನ ದ ಸವಿನೆನಪಿಗಾಗಿ ” ಅಪರಂಜಿ ಗೆಳೆಯರ ಬಳಗ” ತಂಡವನ್ನು ವ್ಯಾಟ್ಸಪ್ ಗ್ರುಪ್ ರಚಿಸಿ ಅದರಲ್ಲಿ ಹಳೆಯ ಮಿತ್ರ ಮಂಡಳಿ ಸೇರಿಸುವ ಪ್ರಯತ್ನ ದಲ್ಲಿ ಪ್ರಗತಿ ಕಂಡು ತನ್ಮೂಲಕ “ಸ್ನೇಹ ಸಂಗಮ ಕಾರ್ಯಕ್ರಮ” ಆಚರಿಸುವ ಕುರಿತು ಪೂರ್ವ ಭಾವಿ ಸಭೆಯು ಇಂದು ರವಿವಾರ ದಿ.24 ರಂದು ಮುನವಳ್ಳಿ ಶ್ರೀ ಶಿವಲಿಂಗೇಶ್ವರ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ಯನ್ನು ಜಯದೇವ ಅಷ್ಟಗಿಮಠ ವಹಿಸಿದ್ದರು. ಭವಾನಿ ಖೊಂದುನಾಯ್ಕ ಕಾರ್ಯಕ್ರಮವನ್ನು ನಿರೂಸಿದರು.

ಗುರುನಾಥ ಪತ್ತಾರ ಕಾರ್ಯಕ್ರಮ ಆಯೋಜನೆ ಕುರಿತು ವಿಚಾರ ಮಂಡಿಸಿದರು.ಈ ಸಂದರ್ಭದಲ್ಲಿ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ತಮ್ಮ ತಮ್ಮ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮವನ್ನು ದಿನಾಂಕ 09/01/2022 ರಂದು ರವಿವಾರ ಶ್ರೀ ಕುಮಾರೇಶ್ವರ ಆಲೂರ ಮಠದಲ್ಲಿ ಮಾಡಲು ನಿರ್ಧರಿಸಲಾಯಿತು ಹಾಗೂ ಕಲಿಸಿದ ಎಲ್ಲಾ ಗುರುಗಳನ್ನು ಗೌರವಿಸಲು. ಮತ್ತು ಮುಂದಿನ ಸಭೆಯನ್ನು ನವ್ಹಂಬರ ಎರಡನೇ ವಾರದಲ್ಲಿ ನಡೆಸಲು ಸಭೆಯು ತೀರ್ಮಾನಕ್ಕೆ ಬರಲಾಯಿತು. ಜೊತೆಗೆ ಇನ್ನೂ ಸೇರಬಹುದಾದ ಸ್ನೇಹಿತರ ಮಾಹಿತಿಯನ್ನು ಶೀಘ್ರವಾಗಿ ಕಲೆ ಹಾಕಲು ಯೋಜನೆ ರೂಪಿಸಲಾಯಿತು. ಮುಂದಿನ ಸಭೆಯನ್ನು ನವೆಂಬರ್ ತಿಂಗಳಲ್ಲಿ ಜರುಗಿಸುವುದಾಗಿ ತಿಳಿಸಲಾಯಿತು.

ಈ ಸಭೆಯಲ್ಲಿ ಜಯದೇವ ಅಷ್ಠಗಿಮಠ. ಶ್ರೀಶೈಲ ಹೀರೆಮಠ. ಗುರುನಾಥ ಪತ್ತಾರ .ಭವಾನಿ ಖೊಂದುನಾಯ್ಕ .ಬಸಯ್ಯ ವಿರುಪೈನವರಮಠ . ಯಲ್ಲಪ್ಪ ಕಡಕೋಳ. ಈರಯ್ಯ ಘಟವಾಳಿಮಠ .ಅನಿಲ ಕಿತ್ತೂರ. ಹೇಮಾ ಹೊನ್ನಳ್ಳಿ .ಶೋಭಾ ಜೇವೂರ . ಭಾರತಿ ಸರ್ವಿ.ರಜನಿ ನಾಯ್ಕ .ಲಲಿತಾ ದೈವಜ್ಞ ಭಾಗವಹಿಸಿದ್ದರು. ಸಭೆಯ ಕೊನೆಗೆ ಗುರುನಾಥ ಪತ್ತಾರ ವಂದಿಸಿದರು.