spot_img
spot_img

ಕನ್ನಡ ಸೇವೆಗೆ ಮತ್ತೊಂದು ಅವಕಾಶ ನೀಡಿ: ಮಂಗಲಾ ಮೆಟಗುಡ್

Must Read

- Advertisement -

ಸವದತ್ತಿಃ “ ನಮ್ಮ ಬದುಕಿನಲ್ಲಿ ಯೋಧ ರೈತ ಮತ್ತು ಕೋರೋನಾ ವಾರಿಯರ‍್ಸ ರನ್ನು ನಾವು ಯಾವತ್ತೂ ಮರೆಯುವ ಹಾಗಿಲ್ಲ. ಇವರಿಗೆ ಮೊಟ್ಟ ಮೊದಲು ನನ್ನ ನಮಸ್ಕಾರಗಳನ್ನು ಸಲ್ಲಿಸುತ್ತ ಕಳೆದ ಅವಧಿಯಲ್ಲಿ ೧೫ ತಾಲೂಕುಗಳಲ್ಲಿ ಸುಮಾರು ೪೪ ತಾಲೂಕಾ ಸಮ್ಮೇಳನ ಹಾಗೂ ೪ ಜಿಲ್ಲಾ ಸಮ್ಮೇಳನ ಯಶಸ್ವಿ ರೀತಿಯಲ್ಲಿ ಜರುಗಿದ್ದು ಎಲ್ಲ ತಾಲೂಕುಗಳ ಅಧ್ಯಕ್ಷರುಗಳ ಸಹಕಾರ ಹಿರಿಯ ಸಾಹಿತಿಗಳ ಎಲ್ಲ ಕನ್ನಡಾಭಿಮಾನಿಗಳ ಸಾಹಿತ್ಯಾಸಕ್ತರ ಎಲ್ಲ ತಾಲೂಕುಗಳ ಪದಾಧಿಕಾರಿಗಳು ಪರಿಷತ್ತಿನ ಸದಸ್ಯರುಗಳ ಸಹಕಾರದಿಂದ ಇವೆಲ್ಲವೂ ಸಾಧ್ಯವಾಗಿವೆ.ನೆಲ ಜಲ ಗಡಿ ರಕ್ಷಣೆಯ ಹೊರಣೆಗಾರಿಕೆಯು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿದ್ದು ನನಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಂಗಲಾ ಮೆಟಗುಡ್ ಹೇಳಿದರು.

ಅಪೂರ್ಣವಾಗಿರುವ ಸಾಹಿತ್ಯಭವನಗಳನ್ನು ಪೂರ್ಣಗೊಳಿಸಬೇಕಾಗಿದೆ. ಈಗಾಗಲೇ ಹಲವು ಪೂರ್ಣಗೊಳ್ಳುವ ಹಂತದಲ್ಲಿವೆ. ಈ ದಿಸೆಯಲ್ಲಿ ಇನ್ನೂ ಹತ್ತು ಹಲವು ಕನಸುಗಳನ್ನು ಹೊತ್ತು ಕನ್ನಡದ ಸೇವೆಯನ್ನು ಮಾಡ ಬಯಸಿರುವೆ ತಮ್ಮೆಲ್ಲರ ಸಹಕಾರ ನನಗೆ ನೀಡುವ ಮೂಲಕ ಮತ್ತೊಂದು ಸಲ ಕನ್ನಡ ಸೇವೆಗೆ ಅವಕಾಶ ನೀಡಿ ಎಂದು ಅವರು ಮನವಿ ಮಾಡಿಕೊಂಡರು.

- Advertisement -

ಅವರು ಸವದತ್ತಿಯ ಬೆಳ್ಳುಬ್ಬಿ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ ಸವದತ್ತಿ ತಾಲೂಕು ಪರಿಷತ್ತಿನ ಮಾಜಿ ಅಧ್ಯಕ್ಷರುಗಳಾದ ಬಿ.ವ್ಹಿ.ನರಗುಂದ; ಹಾಗೂ ಸಿ.ಬಿ.ದೊಡಗೌಡರ ನೇತೃತ್ವದಲ್ಲಿ ಜರುಗಿದ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆ.ಎಲ್.ಇ ಅಂಗ ಸಂಸ್ಥೆಗಳಾದ ಬಿ.ಬಿ.ಮಮದಾಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಚಚಕಂಡಿ.ಎಸ್.ಕೆ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಲೋಹಾರ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಗಾಂವಕರ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಂ.ಎ.ಡೊಂಬರ ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿ.ಬಿ.ದೊಡಗೌಡರ. ನಿಕಟಪೂರ್ವ ಅಧ್ಯಕ್ಷರಾದ ಬಿ.ವ್ಹಿ.ನರಗುಂದ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನಗೌಡ ಪಾಟೀಲ.ಖೋದನ್ನವರ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿ.ಬಿ.ದೊಡಗೌಡರ :”ಸವದತ್ತಿ ತಾಲೂಕಿನಲ್ಲಿ ಮೊದಲಿನಿಂದಲೂ ಹಿರಿಯರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಮುನ್ನಡೆಯುತ್ತ ಬಂದಿವೆ. ಈ ದಿಸೆಯಲ್ಲಿ ಮಂಗಲಾ ಮೆಟಗುಡ್ ಅವರ ಅವಧಿಯಲ್ಲಿ ಸವದತ್ತಿ.ಮುನವಳ್ಳಿ.ಯರಗಟ್ಟಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನಗಳು ಜರುಗಿದವು.ಇಲ್ಲಿನ ಎಲ್ಲ ಹಿರಿಯರ ಸಹಕಾರ ಮಾರ್ಗದರ್ಶನದಲ್ಲಿ ಮುಂದಿನ ತಿಂಗಳ ಚುನಾವಣೆಯಲ್ಲಿ ಮೆಂಗಲಾ ಮೆಟಗುಡ್ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ.” ಎಂದು ತಿಳಿಸಿದರು

- Advertisement -

ಮೋಹನಗೌಡ ಪಾಟೀಲ ಮಾತನಾಡಿ, ಸವದತ್ತಿ ತಾಲೂಕಿನ ಸಾಹಿತ್ಯ ಪರಿಷತ್ತಿನ ಪರಂಪರೆಯನ್ನು ತಿಳಿಸುತ್ತ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯರಾದ ಬಿ.ಕೆ.ಹೊಂಗಲರಿಂದ ಹಿಡಿದು ಉಪನ್ಯಾಸಕ ವೈ.ಎಂ.ಯಾಕೊಳ್ಳಿ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ನಾಗೇಶ ನಾಯಕ್. ವಿಠ್ಠಲ ದಳವಾಯಿಯವರಂತಹ ಬರಹಗಾರರ ಕೊಡುಗೆಯನ್ನು ಸ್ಮರಿಸುತ್ತ ಬಿ.ವ್ಹಿ.ನರಗುಂದ ಗುರುಗಳ ಮಾರ್ಗದರ್ಶನ ಸದಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕಕ್ಕೆ ಇದ್ದು ಮತ್ತೊಂದು ಸಲ ಮಂಗಲಾ ಮೆಟಗುಡ್ ಸಹೋದರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಮಾಡಲು ಎಲ್ಲರೂ ಒಗ್ಗಟ್ಟಿನೊಂದಿಗೆ ಕೈ ಜೋಡಿಸಿ ಅವರ ಗೆಲುವಿನಲ್ಲಿ ನಾವು ಪಾಲ್ಗೊಳ್ಳೋಣ’ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ “ಕನ್ನಡ ಭಾಷೆ ಕನ್ನಡ ಶಾಲೆ ಉಳಿಸಿ ಅಭಿಯಾನದಡಿ ಅನುದಾನ ರಹಿತ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಾಲೆಗಳ ಕ್ಷೇಮಾಭಿವೃದ್ಧಿ ಸಂಘ ಸವದತ್ತಿ ” ಯ ಡಿ. ಎಸ್. ಕೊಪ್ಪದ ಮನವಿ ಮಾಡಿದರು. ಆಗ ತಮ್ಮ ಮನವಿಯ ಕುರಿತು ಸರಕಾರದ ಗಮನಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ.ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ. ಎಂ.ಎಸ್.ಹೊಂಗಲ.ಶಿಕ್ಷಕ ಸಾಹಿತಿ ವ್ಹಿ.ವ್ಹಿ.ಕೊಳಕಿ.ಎಂ.ಪಿ.ಪಾಟೀಲ.ಡಿ.ಎಸ್.ಕೊಪ್ಪದ.ಬಿ.ಎನ್.ಹೊಸೂರ.ಹಿರಿಯರಾದ ಕಿಲ್ಲೇದಾರ.ಬಿ.ಕೆ.ಹೊಂಗಲ.ಅಕ್ಕನ್ನವರ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಿ.ವೈ.ಕರಮಲ್ಲಪ್ಪನವರ.ಎಂ.ಜಿ.ವಟ್ನಾಳ.ವಕೀಲರಾದ ಸೇರಿದಂತೆ ಅಪಾರ ಸಾಹಿತ್ಯಾಭಿಮಾನಿಗಳು ಸೇರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತಗೈಯುವದರೊಂದಿಗೆ ಪ್ರಾಸ್ತಾವಿಕ ನುಡಿಗಳನ್ನು ಡಾ.ವೈ.ಎಂ.ಯಾಕೊಳ್ಳಿಯವರು ಹೇಳುವ ಮೂಲಕ ಕೊನೆಯಲ್ಲಿ ವಂದನಾರ್ಪಣೆಗೈದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group