spot_img
spot_img

ಚಿಂತನ ಚಾವಡಿ ಗೋಷ್ಠಿ -3; ಮುತಾಲಿಕ್ ದೇಸಾಯಿ ರಚಿತ ಕೃತಿಗಳ ಅವಲೋಕನ ಮತ್ತು ಚರ್ಚೆ

Must Read

- Advertisement -

ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷದ ನಿಮಿತ್ತ ಹಿರಿಯ ಸಾಹಿತಿಗಳು ಮತ್ತು ಚಿಂತಕರ ವೇದಿಕೆ ವತಿಯಿಂದ ಹಮ್ಮಿಕೊಳ್ಳುತ್ತಿರುವ ಚಿಂತನ ಚಾವಡಿ ಗೋಷ್ಠಿಯ ಮೂರನೇ ಕಾರ್ಯಕ್ರಮ ಶನಿವಾರ ದಿ. 30/10/2021ರಂದು ಬೆಳಗಾವಿಯ ಆಂಜನೇಯನಗರದಲ್ಲಿ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮುತಾಲಿಕ ದೇಸಾಯಿ ರಚಿಸಿರುವ ಕೃತಿಗಳ ಅವಲೋಕನ ಚರ್ಚೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಸ.ರಾ. ಸುಳಕೂಡೆ ವಹಿಸಲಿದ್ದು ಕಾರ್ಯಕ್ರಮದಲ್ಲಿ ಮುತಾಲಿಕ ದೇಸಾಯಿಯವರ ” ಹಕ್ಕಿ ಹಾಡ ಕೇಳ ” ಕವನ ಸಂಕಲನದ ಮೇಲೆ ಪರಿಚಯ ಮತ್ತು ಅವಲೋಕನವನ್ನು ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಅವರು ನೆರವೇರಿಸುವರು.

ಭಾವಗೀತೆಗಳ ಕವನ ಸಂಕಲನ “ಭಾವ ಸುಗಂಧ “ಇದರ ಪರಿಚಯ ಮತ್ತು ಅವಲೋಕನ ಬೆನನ್ ಸ್ಮಿತ್ ಕಾಲೇಜಿನ ಉಪನ್ಯಾಸಕರಾದ ಶ್ರೀಕಾಂತ ಶಾನವಾಡ ರವರು ಮಾಡುವರು. ‘ಹೇ! ಮಾನವ ‘ ನಾಟಕದ ಪರಿಚಯ ಮತ್ತು ಅವಲೋಕನ ನಿವೃತ್ತ ಮುಖ್ಯೋಪಾಧ್ಯಾಯ ಸಿ.ಎಂ. ಬೂದಿಹಾಳ ರವರು ನೆರವೇರಿಸುವರು.

- Advertisement -

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಜಲತ್ಕುಮಾರ್ ಪುಣಜ ಗೌಡ, ಎಸ್ ಎಸ್ ಪಾಟೀಲ್, ಎಸ್.ಆರ್. ಹಿರೇಮಠ , ಅಶೋಕ ಉಳ್ಳೆಗಡ್ಡಿ,ಆರ. ಎಸ್. ಚಾಪಗಾವಿ, ಎಂ ವೈ ಮೆಣಸಿನಕಾಯಿ, ಬಸವರಾಜ ಸುಣಗಾರ,ಶಿವಾನಂದ ತಲ್ಲೂರ, ಸುನೀತಾ ಮೊರಬ , ಮಲ್ಲಿಕಾರ್ಜುನ ಜೋಗುತಿ, ಅನ್ನಪೂರ್ಣ ಹಿರೇಮಠ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸುವರು.

ಕಾರ್ಯಕ್ರಮ 3:30 ಕ್ಕೆ ಶ್ರೀ ಶೇಷಗಿರಿ ಮುತಾಲಿಕ್ ದೇಸಾಯಿ, .”ಪ್ರಾಣೇಶ್”6681, ಸೆಕ್ಟರ್ ನಂ -10,ನಂದಿನಿ ಡೈರಿ ಹತ್ತಿರ ಆಂಜನೇಯನಗರ ಬೆಳಗಾವಿ-590016…ರವರ ರಂಗಮಂಟಪ ದಲ್ಲಿ ಜರುಗಲಿದೆ. ಆಸಕ್ತರು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group