- Advertisement -
ಬೀದರ – ಬೀದರನಲ್ಲಿ ಇಂದು ನಡೆದ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಪರೀಕ್ಷೆ ಬರೆಯುಲು ಯತ್ನ ಮಾಡಿದ ನಕಲಿ ಅಭ್ಯರ್ಥಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಬಿಜಾಪುರ ಮೂಲದ ಪಶು ವೈದ್ಯ ಎನ್ನಲಾದ ನಕಲಿ ಅಭ್ಯರ್ಥಿ ಪೊಲೀಸ್ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಹೋದಾಗ ಪೊಲೀಸ್ ರಿಗೆ ಸಿಕ್ಕಿ ಬಿದ್ದಿದ್ದಾನೆ. ಇಂದು ರಾಜ್ಯಾದ್ಯಂತ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ನಡೆದಿತ್ತು ಆದ್ರೆ ಗಡಿ ಜಿಲ್ಲೆ ಬೀದರ್ ನಲ್ಲಿ ನಿಜವಾದ ಅಭ್ಯರ್ಥಿ ಪರೀಕ್ಷೆ ಬರೆಯದೆ ಅವರ ಪರವಾಗಿ ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯಲು ಯತ್ನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬೀದರ್ ನ ಓಲ್ಡ್ ಸಿಟಿಯಲ್ಲಿರುವ ಬಾಲಕಿಯರ ಪ್ರೌಢ ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆ ಬರೆಯಲು ನಕಲಿ ಅಭ್ಯರ್ಥಿ ಯತ್ನ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ನಗರ ಠಾಣೆಯ ಪೊಲೀಸರು ನಕಲಿ ಅಭ್ಯರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.