ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಪರಿಸರ ಚಿಂತಕ ಡಾ. ಭೇರ್ಯ ರಾಮಕುಮಾರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮುಂದಿನ ಭಾನುವಾರದಂದು ನಡೆಯುವ ಕಾರ್ಯಕ್ರಮದಲ್ಲಿ ಸತ್ಯವತಿ ರಾಘವ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಸಭಾಂಗಣ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಘಟನೆ, ಪರಿಸರ ಸಂರಕ್ಷಣೆ ಹಾಗೂ ಕನ್ನಡ ನಾಡು ನುಡಿ ಪರ ಜಾಗೃತಿ ಸೇವೆಗಾಗಿ ಡಾ. ಭೇರ್ಯ ರಾಮಕುಮಾರ್ ಅವರಿಗೆ ರಾಜ್ಯ ಹೈಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಗಳಾದ ಬಿ. ವೀರಪ್ಪ ಅವರು ಸತ್ಯವತಿ ರಾಘವ ದತ್ತಿ ಪ್ರಶಸ್ತಿ ಪ್ರದಾನ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ದ. ನಿರಂಜನ ವಾ ನಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಾಹಿತಿಗಳಾದದ. ಪುಷ್ಪ ಅಯ್ಯಂಗಾರ್,ಎನ್. ಕೆ. ರಮೇಶ್, ಫೋಟೋ. ಪಿ. ಮಹೇಶ್ ಮುಖ್ಯ ಅತಿಥಿಗಳಾಗಿರುವರು.
1985 ರಲ್ಲಿ ಗ್ರಾಮಾಂತರ ಬುದ್ದಿಜೀವಿಗಳ ಬಳಗ ಎಂಬ ಸಂಸ್ಥೆ ಆರಂಭಿಸಿ ಈ ಸಂಸ್ಥೆಯ ಮುಲಕ 343 ರಾಜ್ಯ ಮಟ್ಟದ ಕವಿಗೋಷ್ಠಿ ಗಳನ್ನು ನಡೆಸಿದ್ದಾರೆ. ಪ್ರತಿಯೊಂದು ಸಾಹಿತ್ಯ ಕಾರ್ಯಕ್ರಮಗಳಲ್ಲೂ ಸಾಮೂಹಿಕ ನೇತ್ರಾದಾನ ಜಾಗೃತಿ ನಡೆಸುವ ಮೂಲಕ ಇದುವರೆಗೆ ಸುಮಾರು ಎಂಟು ಸಾವಿರ ಜನರಿಂದ ನೇತ್ರಾಧಾನಕ್ಕೆ ಒಪ್ಪಿಗೆ ಪತ್ರ ಕೊಡಿಸಿದ್ದಾರೆ. ಪ್ರತಿಯೊಂದು ಕಾರ್ಯಕ್ರಮದಲೂ ತಲಾ ಇನ್ನೂರು ಸಸಿಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಡುನುಡಿ ಕುರಿತಂತೆ ಹಾಗೂ ಪರಿಸರ ಸಂ ರಕ್ಷಣೆ ಕುರಿತಂತೆ ಒಂದು ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಮೈಸೂರು ಜಿಲ್ಲೆಯ ಎಲ್ಲೆಡೆ ಪರಭಾಷಾ ನಾಮಫಲಕಗಳ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡುವ ಮೂಲಕ ಕನ್ನಡ ಪರ ಚಿಂತನೆ ಮುಡಿಸುವಲ್ಲಿ ಶ್ರಮ ವಹಿಸಿದ್ದಾರೆ.
ಇವರ ಸಾಹಿತ್ಯ ಸಂಘಟನೆ, ಕನ್ನಡ ಪರ ಚಿಂತನೆ, ಪರಿಸರ ಪರ ಚಿಂತನೆ ಗಳನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2023 ರ ಸತ್ಯವತಿ ವಿಜಯ ರಾಘವ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.