ಮುನವಳ್ಳಿಃ ಪಟ್ಟಣದ ಶಿಕ್ಷಣ ಪ್ರೇಮಿ ದಿವಂಗತ ವ್ಹಿ.ಪಿ.ಜೇವೂರ ಗುರುಗಳ ೧೦೧ ನೇ ಜಯಂತಿಯ ಉತ್ಸವ ಕಾರ‍್ಯಕ್ರಮ ಕುರಿತು ಚರ್ಚಿಸಲು ಪೂರ್ವಭಾವೀ ಸಭೆಯನ್ನು ಜೆ.ಎಸ್.ಪಿ.,ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಕರೆಯಲಾಗಿತ್ತು.
ಈ ಸಭೆಯಲ್ಲಿ ವ್ಹಿ.ಪಿ.ಜೇವೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಆರ್.ಗೋಮಾಡಿ ಹಿರಿಯ ಶಿಕ್ಷಕರಾದ .ಬಿ.ಬಿ.ನಾವಲಗಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಗೌರವಾನ್ವಿತ ಸದಸ್ಯರಾದ ರಾಜೇಶ್ವರಿ ಪೂಜೇರ, ಜಯಶ್ರೀ ಕುಲಕರ್ಣಿ ನಿಧನದ ಪ್ರಯುಕ್ತ ಆರಂಭದಲ್ಲಿ ಸಂತಾಪ ಸೂಚಿಸಲಾಯಿತು. ನಂತರ ವೀರಣ್ಣ ಕೊಳಕಿಯವರು ಕಳೆದ ವರ್ಷದ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಶಿಕ್ಷಕ ಬಿ.ಬಿ.ಹುಲಿಗೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ನಿಧನರಾದ ಸದಸ್ಯರ ಖಾಲಿ ಹುದ್ದೆಗಳನ್ನು ಅವರ ಕುಟುಂಬದ ಸದಸ್ಯರನ್ನು ಭರ್ತಿ ಮಾಡಿಕೊಳ್ಳುವ ಮೂಲಕ ತುಂಬಿಕೊಳ್ಳುವುದನ್ನು ನಿರ್ಣಯಿಸಲಾಯಿತು.
ಗಣಪತಿ ಭಟ್ ಗುರುಗಳು ಕಳೆದ ವರ್ಷದ ಲೆಕ್ಕ ಪತ್ರದ ಖರ್ಚುವೆಚ್ಚಗಳ ಕುರಿತು ತಿಳಿಸಿದರು. ಈ ವರ್ಷ ಕಾರ್ಯಕ್ರಮದ ಕುರಿತಂತೆ ಜಯದೇವ ಹಂಪಣ್ಣವರ ವೈ.ಬಿ.ಕಡಕೋಳ, ಅನ್ನಪೂರ್ಣ ಲಂಬೂನವರ,ವೈ.ಎಫ್.ಶಾನುಭೋಗ,ಬಾಳು ಹೊಸಮನಿ,ಅನುರಾಧ ಬೆಟಗೇರಿ,ಸುಮಾ ಯಲಿಗಾರ,ಗೌರಿ ಜಾವೂರ,ರಾಧಾ ಕುಲಕರ್ಣಿ ಸೇರಿದಂತೆ ಸದಸ್ಯರು ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ,ಮುಖ್ಯ ಅತಿಥಿಗಳ ಆಯ್ಕೆ, ಕಾರ್ಯಕ್ರಮ ಸಂಯೋಜನೆ ಇತ್ಯಾದಿ ವಿಷಯ ಕುರಿತಂತೆ ತಮ್ಮ ವಿಚಾರಗಳನ್ನು ಮಂಡಿಸಿದರು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪ್ರತಿಭಾ ಪುರಸ್ಕಾರ ಕುರಿತಂತೆ ಶಿವೂ ಕಾಟೆ ಅಜಯ ಕಂಬನ್ನವರ ಚಂದ್ರಶೇಖರ ತುಳಜನ್ನವರ ಸಲಹೆಗಳನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ನೂತನ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವ ಕುರಿತಂತೆ ಚರ್ಚಿಸಲಾಯಿತು. ಶಶಾಂಕ ಪೂಜೇರ,ಮಂಜುನಾಥ ಮಾವಿನಕಟ್ಟಿ, ಎಲ್.ಎಚ್.ವಟ್ನಾಳ, ಪಂಚಪ್ಪ ಜಂಬಗಿ,ಉಮೇಶ ಬಡೆಮ್ಮಿ,ಬಸವರಾಜ ತುಳಜನ್ನವರ ಸೇರಿದಂತೆ ಪ್ರತಿಷ್ಠಾನದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಕ ಬಸನಗೌಡ ಹುಲಿಗೊಪ್ಪ ಸ್ವಾಗತಿಸಿದರು. ವೀರಣ್ಣ ಕೊಳಕಿ ನಿರೂಪಿಸಿದರು.ವೈ.ಬಿ.ಕಡಕೋಳ ವಂದಿಸಿದರು.