ಕನ್ನಡ ಜಾನಪದ ಪರಿಷತ್ತಿನ ಗದಗ ಜಿಲ್ಲೆಯ ಘಟಕದ ನೂತನ ಅಧ್ಯಕ್ಷ  ಆಯ್.ಬಿ.ಬೆನಕೊಪ್ಪ

Must Read
ದಿ ೦೪.೧೨.೨೦೨೫ ರಂದು ಕನ್ನಡ ಜಾನಪದ ಪರಿಷತ್ತು (ರಿ)ಬೆಂಗಳೂರು ಗದಗ ಜಿಲ್ಲೆಯ ಘಟಕದ ಪದಗ್ರಹಣ ಸಮಾರಂಭ ಉದ್ಘಾಟನಾ ಕಾರ್ಯಕ್ರಮ

ಜಾನಪದ ಸಾಹಿತ್ಯಾಸಕ್ತರು, ಆಧುನಿಕ ಕನ್ಯೆ, ಮಿಲನ, ಪುನರ್ಜನ್ಮ,ಶ್ವೇತಾಂಬರ ಇತ್ಯಾದಿ ಸಾಹಿತ್ಯ ಕ್ರೃತಿಗಳ ಸ್ರೃಜಕರು,’ಉತ್ತರಾಂಚಲದ ಅಂಚಿನಲ್ಲಿ ನಾನು ಕೃಷ್ಣ’ ಪ್ರವಾಸ ಕಥನ ಕರ್ತೃ, ವೃತ್ತಿಜೀವನ ಪ್ರಾಮಾಣಿಕವಾಗಿ ಪೂರೈಸಿ ಶಿಕ್ಷಣ ಕ್ಷೇತ್ರದಲ್ಲಿ ಉಪ ನಿರ್ದೇಶಕರಾಗಿ ಅಮೂಲ್ಯ ಸೇವೆಗೈದು ನಿವೃತ್ತರಾದವರು, ಶಿರಹಟ್ಟಿ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಗೋಷ್ಠಿ ಉದ್ಘಾಟಿಸಿ ಉಪನ್ಯಾಸಗೈದವರು, ಮೂಲತಃ ಗ್ರಾಮೀಣ ಪ್ರದೇಶದ ಜನಾಂಗದ ಸಂಸ್ಕೃತಿಯನ್ನರಿತು ಅದರಂತೆ ಬದುಕಿದವರು, ಹಂತಿ ಹೊಡೆದು ಹಂತಿ ಪದ ಹಾಡಿದವರು,ಹತ್ತಿಬಿಡಿಸಿ ಹಾಡುತ್ತಲಿರುವ ಹಾಡುಗಾರರು, ಸಸಿ ನೆಟ್ಟು ಖುಷಿ ಪಟ್ಟವರು, ಮದುವೆ ಮಂಗಲ ಕಾರ್ಯಗಳಲ್ಲಿ ಸೋಬಾನೆ ಪದ ಕೇಳಿ,ಕುಟ್ಟುವ ಬೀಸುವ ಪದಗಳನ್ನಾಲಿಸುತ್ತಾ, ‘ಆದಾವ ನಮ್ಮಜ್ವಾಳ ಉಳಿದಾವ ನಮ್ಮ ಹಾಡು’ ಎಂಬ ಸೊಲ್ಲು ಆಲಿಸಿ ಜಾನಪದದ ಶ್ರೇಷ್ಠತೆಯನ್ನರಿತವರು, ಜಾನಪದ ಸಾಹಿತ್ಯದ ಮಹತ್ವ ಹಾಗೂ ಅದರ ಪ್ರಯೋಜನದ ಸೊಗಡಿನ  ಕುರಿತು ಹಲವಾರು ಸಮಾರಂಭಗಳಲ್ಲಿ ಉಪನ್ಯಾಸಗೈದವರು ಐ ಬಿ ಬೆನಕೊಪ್ಪ ಅವರು.

     ಜನರಿಂದ ಜನಿಸಿ,ಜನರಿಂದ ಪಳಗಿ,ಜನರು ಮನಸ್ಸನ್ನು ಸೂರೆಗೊಂಡವರು,ಜಾನಪದ ಸಾಹಿತ್ಯದ ಉಳಿವಿಗಾಗಿ ಮಕ್ಕಳಲ್ಲಿ ಜಾನಪದ ಸಾಹಿತ್ಯದ ವಿಕಾಸಕ್ಕೆ ಶ್ರಮಿಸುವ ಅತ್ಯಾಸಕ್ತರು ಆಗಿರುವ  ಆಯ್.ಬಿ. ಬೆನಕೊಪ್ಪ ಅವರು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸಿ.ಇ.ಓ. ಆಗಿ ಸೇವಾನಿರತರಾಗಿರುವ ಕ್ರಿಯಾಶೀಲ ಚಲನಾತ್ಮಕ ವ್ಯಕ್ತಿತ್ವವುಳ್ಳವರು.
         ಶ್ರೀಯುತರು ಬಸಪ್ಪ -ಪಾರ್ವತಮ್ಮ ದಂಪತಿಗಳ ಪುಣ್ಯ ಗರ್ಭದಲ್ಲಿ ನವಲಗುಂದ ತಾಲೂಕಿನ ತುಪ್ಪದ ಕುರಹಟ್ಟಿಯ ಅವಿಭಕ್ತ ಕುಟುಂಬದಲ್ಲಿ ೦೧.೦೬.೧೯೬೩ ರಲ್ಲಿ ಜನಿಸಿದರು. ಜನ್ಮಗ್ರಾಮದಲ್ಲಿ ಪ್ರಾಥಮಿಕ, ಶಲವಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಧಾರವಾಡದಲ್ಲಿ ಪದವಿಪೂರ್ವ, ಬಿ.ಎಡ್ ಮತ್ತು ಎಂ.ಎ.ಪದವಿ  ಶಿಕ್ಷಣ ಪೂರೈಸಿದ ಬೆನಕೊಪ್ಪರವರು ರೋಣ ತಾಲೂಕಿನ ಯರೆಬೇಲೇರಿಯ ಪ್ರೌಢಶಾಲೆಯಲ್ಲಿ  ಕಲಾಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ,ಬಿ.ಆರ್. ಸಿ ಕೋ- ಆರ್ಡಿನೇಟರ್ ಆಗಿ,ಬೆಳಗಾವಿಯ ಸರ್ಕಾರಿ ಬಿ.ಎಡ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಗದಗ ಶಹರದ ಬಿಇಓ ಆಗಿ,ಹಾವೇರಿಯ ಡಯಟ್ ಶಿಕ್ಷಣ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾಗಿ, ಸವಣೂರು ಮತ್ತು ಬ್ಯಾಡಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ, ಚಾಮರಾಜನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಡಿಡಿಪಿಆಯ್ ಆಗಿ  ಈಗ ವಿಶ್ರಾಂತ ಜೀವನದಲ್ಲಿಯೂ ಕೂಡಾ  ಗಡಿಯಾರದಂತೆ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಶ್ರೀಯುತರ ನಿಷ್ಠೆ ಪ್ರಾಮಾಣಿಕತೆ ಪ್ರಬುದ್ಧತೆ ಶ್ರದ್ಧೆ ಬಹುಮುಖ ಪ್ರತಿಭೆ ಉದಯೋನ್ಮುಖ ಯುವ ನಾಯಕತ್ವ ಪರಿಗಣಿಸಿ ಡಿಪ್ಲೋಮಾ ಇನ್ ರಿಮ್ಸ್ ಪ್ರಶಸ್ತಿ, ಮೈಸೂರಿನವರು ಕೊಡುವಂತಹ ಎಲ್.ವಿ. ರಾಜಗೋಪಾಲಚಾರಿ ಎಂಡೋಮೆಂಟ್ ಅವಾರ್ಡ್ ಪ್ರಶಸ್ತಿ, ಧಾರವಾಡ ಜಿಲ್ಲಾ ಮಟ್ಟದ ಕ್ರಿಯಾಶೀಲ ಸಂಶೋಧನೆಯಲ್ಲಿ ಪ್ರಥಮ ಬಹುಮಾನ, ಹಾಗೂ ಗದುಗಿನ ಜ.ತೋಂ.ಮಠದ ಪೂಜ್ಯರಿಂದ ವೆಲ್ ರೀಡ್ ಆಫೀಸರ್ ಬಿರುದಾಂಕಿತರಾಗಿರುವ ಬೆನಕೊಪ್ಪ ಅವರು ರಾಜ್ಯ ಮಟ್ಟದ ಎಸ್.ಆರ್.ಜಿ. ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಅನುಪಮ ಸೇವೆ ವೀಕ್ಷಿಸಿರುವ ಕನ್ನಡ ಜಾನಪದ ಪರಿಷತ್ತು(ರಿ) ಬೆಂಗಳೂರಿನ ರಾಜ್ಯಾಧ್ಯಕ್ಷರಾಗಿರುವ ಡಾ.ಎಸ್.ಬಾಲಾಜಿ ಅವರು ಗದಗ ಜಿಲ್ಲೆಯ ಕ.ಜಾ.ಪ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಆದೇಶವಿತ್ತು ಗೌರವಿಸುವ ನಿಮಿತ್ತ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಉದ್ಘಾಟಕರಾಗಿ ಪಾಲ್ಗೊಂಡು ಪದಗ್ರಹಣ ನೆರವೇರಿಸಲು ಗದಗ ನಗರಕ್ಕೆ ಗಣ್ಯರಾಗಿ ಆಗಮಿಸುವ ರಾಜ್ಯಾಧ್ಯಕ್ಷರಿಗೆ ಗದಗ ಜಿಲ್ಲೆಯ ಘಟಕದ ಜಾನಪದ ಸಾಹಿತ್ಯಾಸಕ್ತರು ಹೃತ್ಪೂರ್ವಕವಾಗಿ ಸ್ವಾಗತಿಸುವ ಮೂಲಕ ಶುಭ ಹಾರೈಸಿರುತ್ತಾರೆ.

ಪ್ರೊ. ಶಕುಂತಲಾ.ಚನ್ನಪ್ಪ. ಸಿಂಧೂರ.
ಜಾನಪದ ಸಾಹಿತ್ಯ ಸಂಶೋಧಕರು,
ಗದಗ.

LEAVE A REPLY

Please enter your comment!
Please enter your name here

Latest News

ವಿಮರ್ಶೆಯಲ್ಲಿ ಸ್ತ್ರೀ ಸಾಹಿತ್ಯಕ್ಕೆ ಅನ್ಯಾಯ ; ವಿಚಾರ ಗೋಷ್ಠಿ,

ವಿಮರ್ಶೆಯಲ್ಲಿ ಸ್ತ್ರೀ ಸಾಹಿತ್ಯಕ್ಕೆ ಅನ್ಯಾಯ ಸಂವಾದ ಹಾಗೂ ಸ್ತ್ರೀಸಂವೇದನಗಳ ಬಗ್ಗೆ ಕವಿಗೋಷ್ಠಿ ಕಾರ್ಯಕ್ರವನ್ನು ಹಾಸನ ಜಿಲ್ಲಾ ಬರಹಗಾರರ ಸಂಘದ ವತಿಯಿಂದ ಡಿ. 07 - ಭಾನುವಾರ...

More Articles Like This

error: Content is protected !!
Join WhatsApp Group