Homeಸುದ್ದಿಗಳುದಿ. ೨೮ ರಂದು ಪತ್ರಿಕಾ ದಿನಾಚರಣೆ

ದಿ. ೨೮ ರಂದು ಪತ್ರಿಕಾ ದಿನಾಚರಣೆ

ಮೂಡಲಗಿ: ತಾಲೂಕಾ ಪತ್ರಕರ್ತರ ಬಳಗ ಹಾಗೂ ಚೈತನ್ಯ ವಸತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ದಿ ೨೮ ರಂದು ಸಾಯಂಕಾಲ ಗಂಟೆಗೆ ಶಾಲಾ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ಧಸಂಸ್ಥಾನ ಮಠದ ಶ್ರೀ ದತ್ತಾತ್ರಯ ಶ್ರೀಪಾದಬೋಧ ಸ್ವಾಮೀಜಿ ವಹಿಸುವರು.ಅರಭಾಂವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ಕ್ಷೇತ್ರ ಸಂಪನ್ಮೂಲ ಕಾರ್ಯಾಲಯದ ವಾಯ್ ಬಿ ಪಾಟೀಲ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಮಹಾಲಿಂಗಪೂರದ ಸಾಹಿತಿ ಹಾಗೂ ಪತ್ರಕರ್ತರಾದ ಮಲ್ಲಿಕಾರ್ಜುನ ಹೆಗ್ಗಳಗಿ ಹಾಗೂ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ,ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ತಹಶೀಲದಾರ ಡಿ ಜಿ ಮಹಾತ, ಬಿಇಓ ಅಜೀತ ಮನ್ನಿಕೇರಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಎಇಓ ಸಂದೀಪ ಚೌಗಲಾ, ಸಿಪಿಐ ವೆಂಕಟೇಶ ಮುರನಾಳ, ಸಹಾಯಕ ಕೃಷಿ ನಿರ್ದೇಶಕ ಎಮ್ ಎಮ್ ನದಾಫ್, ವೈದ್ಯಾಧಿಕಾರಿ ಭಾರತಿ ಕೋಣಿ, ಪಿಎಸೈ ಎಚ್‍ವೈ ಬಾಲದಂಡಿ, ಹೆಸ್ಕಾಂ ಅಧಿಕಾರಿ ಎಮ್ ಎಸ್ ನಾಗನ್ನವರ, ಪ್ರೆಸ್ ಕ್ಲಬ್ ಅಧ್ಯಕ್ಷ ಎಲ್ ವಾಯ್ ಅಡಿಹುಡಿ, ಜನಸೇವಾ ಪತ್ರಕರ್ತರ ಸಂಘದ ಅಧ್ಯಕ್ಷ ಅಕ್ಬರ್ ಪೀರಜಾದೆ, ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಉಮೇಶ ಬೆಳಕೂಡ ಆಗಮಿಸುವರು.

RELATED ARTICLES

Most Popular

error: Content is protected !!
Join WhatsApp Group