ಹಗಲೂ ರಾತ್ರಿ ನೋಟ್ ಪ್ರಿಂಟ್ ಮಾಡಿ: ಆರ್ ಬಿ ಐ

Must Read

ಹೊಸದಿಲ್ಲಿ: ದೇಶದಲ್ಲಿ ಚಲಾವಣೆಯಲ್ಲಿರುವ ೨೦೦೦ ರ ನೋಟನ್ನು ಆರ್ ಬಿ ಐ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಹರಿದುಬರುತ್ತಿರುವ ೨೦೦೦ ರ ನೋಟಗಳಿಗೆ ಬದಲಾಗಿ ೫೦೦ ರ ನೋಟುಗಳ ಕೊರತೆ ಎದುರಾಗಿದ್ದು ಹೊಸ ಐನೂರರ ನೋಟು ಮುದ್ರಿಸಲು ದಿನದ ಇಪ್ಪತ್ನಾಲ್ಕು ತಾಸೂ ಕೆಲಸ ಮಾಡಲು ಆರ್ ಬಿ ಐ ನೋಟು ಮುದ್ರಕರಿಗೆ ಸೂಚಿಸಿದೆ.

ಇದೇ ಮೇ ೨೩ ರಿಂದ ದೇಶದಲ್ಲಿ ೨೦೦೦ ರ ನೋಟನ್ನು  ಚಲಾವಣೆಯಿಂದ ಹಿಂದೆ  ತೆಗೆದುಕೊಂಡಿರುವ ಆರ್ ಬಿ ಐ ಕ್ರಮದಿಂದಾಗಿ ಬ್ಯಾಂಕಿಗೆ ನೋಟು ವಿನಿಮಯ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.

ರೂ. ೨೦೦೦ ರ ನೋಟಿಗೆ ಬದಲಾಗಿ ನೀಡಲಾಗುವ ೫೦೦ ನೋಟಿನ ಕೊರತೆ ಕಂಡುಬರುತ್ತಿದೆ. ಈ ಕೊರತೆಯನ್ನು ನೀಗಿಸಲು ರಿಸರ್ವ್ ಬ್ಯಾಂಕು ಯುದ್ದೋಪಾದಿಯಲ್ಲಿ ಹೊಸ ನೋಟು ಮುದ್ರಣ ಮಾಡಬೇಕಾಗಿದೆ. ಸೆ.೩೦ ರವರೆಗೆ ೨೦೦೦ ರ ನೋಟು ವಿನಿಮಯ ಮಾಡಿಕೊಳ್ಳಬೇಕಾಗಿದೆ.

೨೦೧೬ ರಲ್ಲಿ ಮೋದಿ ಸರ್ಕಾರವು ಭಾರತದಲ್ಲಿ ನೋಟು ಅಮಾನ್ಯೀಕರಣ ಕೈಗೊಂಡಾಗ ಕೂಡ ಇದೇ ರೀತಿ ನೋಟು ಮುದ್ರಣ ಕಾರ್ಯ ವೇಗದ ಗತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group