ಸಮಾಜಮುಖಿ ಚಿಂತನೆಗಳೆ ದೊರೆಸಾನಿ ಕತೆಗಳಾಗಿವೆ – ಶಿವಶಂಕರ ಮುತ್ತಗಿ

Must Read

ಹುನಗುಂದ :ಸ್ಥಳೀಯ ಹೊನ್ನ ಕುಸುಮ ಸಾಹಿತ್ಯ ವೇದಿಕೆಯಿಂದ ತಿಂಗಳ ಬೆಳಕು ಕಾರ್ಯಕ್ರಮದಡಿಯಲ್ಲಿ ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ‘ಹವೇಲಿಯ ದೊರೆಸಾನಿ’ ಕಥಾ ಸಂಕಲನದ ವಿಮರ್ಶೆ ದಿ. ೧೬ ರಂದು ವಿಜಯ ಮಹಾಂತೇಶ ಪ.ಪೂ ಕಾಲೇಜಿನಲ್ಲಿ ನೆರವೇರಿತು

ಅಧ್ಯಕ್ಷತೆ ವಹಿಸಿದ ಎಸ್. ಎಸ್. ಮುಡಪಲದಿನ್ನಿಯವರು ಮಾತನಾಡಿ ಈ ಭಾಗದ ಮಣ್ಣಿನ ವಾಸನೆ ಈ ಕತೆಗಳಲ್ಲಿವೆ ಓದುಗರ ಮನಸ್ಸನ್ನು ಹಿಡಿದಿಡುವಲ್ಲಿ ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಯಶಸ್ವಿಯಾಗಿದ್ದಾರೆಂದು ಅಭಿಪ್ರಾಯಪಟ್ಟರು.

ಕಥಾಸಂಕಲನದ ವಿಮರ್ಶಕರಾಗಿ ಶಿವಶಂಕರ ಮುತ್ತಗಿಯವರು ಮಾತನಾಡಿ ಹವೇಲಿ ದೊರೆಸಾನಿ ಕಥಾ ಸಂಕಲನದಲ್ಲಿ ೮ ಕತೆಗಳಿವೆ ಬುದ್ದನ ಅಷ್ಟಾಂಗ ಯೋಗದಂತೆ ಮಾನವನಿಗೆ ಉನ್ನತ ಸಂದೇಶಗಳನ್ನು ನೀಡುವ ಉತ್ತಮ ಕತೆಗಳಾಗಿವೆ ಸಮಾಜಮುಖಿ ಚಿಂತನೆಗಳು ಈ ಕತೆಗಳುದ್ದಕ್ಕೂ ಕಾಣಬಹುದು ಜನಸಾಮಾನ್ಯರು ಓದಿ ಅರ್ಥೈಸಿಕೊಳ್ಳುವ ಕತೆಗಳಿರುವುದು ವಿಶೇಷ ಹವೇಲಿ ದೊರೆಸಾನಿ ಕಥಾ ಕ್ಷೇತ್ರದಲ್ಲಿ ಗಮನಿಸುವಂಥ ಕೃತಿಯಾಗಲು ಮಲ್ಲಿಕಾರ್ಜುನ ಶೇಲ್ಲಿಕೇರಿಯವರು ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.

ಸಿ ಎಸ್ ಚೌಡಾಪೂರವರು ಮಾತನಾಡಿ ಹವೇಲಿ ದೊರೆಸಾನಿ ಕತೆಗಳು ಮಾನವನ ಬದುಕನ್ನು ಉನ್ನತ ಮಟ್ಟಕ್ಕೇರಿಸುವ ಶಕ್ತಿಯನ್ನು ಹೊಂದಿವೆ ಇದೊಂದು ಉತ್ತಮ ಕೃತಿ ಎಂದು ವಿವರಿಸಿದರು.

ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿ ಕನ್ನಡ ಕಥಾ ಪ್ರಚಾರಕ್ಕೆ ೧೨೫ ವರ್ಷಗಳಾಗಿವೆ ಕತೆಗಳನ್ನು ರಚಿಸುವ ಪ್ರಕ್ರಿಯೆಯಲ್ಲಿ ತೊಡಗಿರುವುದು ನನಗೆ ಹೆಮ್ಮೆ ಎನಿಸುತ್ತದೆ ವಾಸ್ತವಿಕತೆಯ ಜೊತೆಗೆ ಕಲ್ಪನೆಗಳು ಕತೆಗಾರರಿಗೆ ಬಹಳ ಅವಶ್ಯಕ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ನಂತರ ನಡೆದ ಸಂವಾದದಲ್ಲಿ ಹುನಗುಂದದ ಹಿರಿಯ ಸಾಹಿತಿ ಜಿ ವಿ ದೇಶಪಾಂಡೆ ಬಾಗಲಕೋಟೆಯ ಸಾಹಿತಿ ಎಸ್ ಎಸ್ ಹಳ್ಳೂರ, ಶಿಕ್ಷಕಿ ಗೀತಾ ತಾರಿವಾಳ, ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡರು
ಗೀತಾ ತಾರಿವಾಳ, ಪ್ರಾರ್ಥಿಸಿದರು ಶಿಕ್ಷಕ ಮುತ್ತು ವಡ್ಡರ ನಿರೂಪಿಸಿದರು ಮಹಿಬೂಬ ಚಿತ್ತರಗಿ ವ೦ದಿಸಿದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group