Homeಸುದ್ದಿಗಳುವೃತ್ತಿಯ ಮೇಲೆ ವಿಶ್ವಾಸವಿದ್ದರೆ ಕಷ್ಟದಲ್ಲಿ ಕೈ ಹಿಡಿಯುತ್ತದೆ - ಡಾ. ಅರವಿಂದ

ವೃತ್ತಿಯ ಮೇಲೆ ವಿಶ್ವಾಸವಿದ್ದರೆ ಕಷ್ಟದಲ್ಲಿ ಕೈ ಹಿಡಿಯುತ್ತದೆ – ಡಾ. ಅರವಿಂದ

ಸಿಂದಗಿ- ನಮ್ಮ ವೃತ್ತಿಯ ಮೇಲೆ ನಮಗೆ ಗೌರವ, ನಂಬಿಕೆ, ಭಕ್ತಿ ಮತ್ತು ಶ್ರದ್ಧೆ ಇದ್ದರೆ ನಾವು ಕಷ್ಟದಲ್ಲಿದ್ದಾಗಲೂ ನಮ್ಮ ವೃತ್ತಿ ನಮಗೆ ಕೈ ಹಿಡಿಯುತ್ತದೆ ಎಂದು ಪಟ್ಟಣದ ಸಿ.ಎಂ. ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ ಹೇಳಿದರು.

ಅವರು ಸಿ. ಎಂ. ಮನಗೂಳಿ ಕಾಲೇಜಿನಲ್ಲಿ ಸುಮಾರು 35 ವರ್ಷ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಗುರುವಾರ ಸೇವಾ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಯ ವಿವಿಧ ಅಂಗ ಸಂಸ್ಥೆಗಳು ಹಮ್ಮಿಕೊಂಡ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಯಾವುದೇ ಶೈಕ್ಷಣಿಕ ಸಂಸ್ಥೆಯ ಯಶಸ್ಸು ಅದರ ಶಿಕ್ಷಕರ ಪರಿಣಾಮಕಾರಿತ್ವವನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ, ಅವರು ಜ್ಞಾನವನ್ನು ವರ್ಗಾಯಿಸುವುದು, ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಬೋಧನಾ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯ,ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನವನ್ನು ವರ್ಗಾಯಿಸುವಲ್ಲಿ ನೇರವಾಗಿ ತೊಡಗಿಸಿಕೊಂಡಿರುವುದರಿಂದ ಅವರ ಕೆಲಸದ ತೃಪ್ತಿ ಅವರು ಕಲಿಸುವ ಪಾಠಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಮಕ್ಕಳೊಂದಿಗೆ ಪಾಠ ಮಾಡುವ ಸಂತೋಷ ಯಾವ ಕ್ಷೇತ್ರದಲ್ಲಿಯೂ ಸಿಗದು ಶಿಕ್ಷಕ ವೃತ್ತಿ ಜಗತ್ತಿನ ಎಲ್ಲ ವೃತ್ತಿಗಳಿಗಿಂತ ಅತ್ಯಂತ ಪವಿತ್ರವಾಗಿರುವ ಕಾರ್ಯವಾಗಿದೆ. ಶಿಕ್ಷಕರು ಕಾಟಾಚಾರಕ್ಕಾಗಿ ತಮ್ಮ ಕಾರ್ಯ ಚಟುವಟಿಕೆ ಮಾಡಬಾರದು ಒಂದು ವೇಳೆ ಹಾಗೆ ಮಾಡಿದ್ದಲ್ಲಿ ಅದು ನಮಗೆ ಬದುಕಿನಲ್ಲಿ ನೆಮ್ಮದಿಯನ್ನ ತರಲಾರದು ವೃತ್ತಿಯನ್ನ ಪ್ರೀತಿಸಿ ಆನಂದಿಸಿ ಸೇವೆಯನ್ನ ಮಾಡಬೇಕು ಎಂದರು.

ಈ ವೇಳೆ ಎಚ್. ಜಿ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ. ಆರ್. ಹೆಗ್ಗನದೊಡ್ಡಿ ಅವರು ಮಾತನಾಡಿ, ಡಾ. ಅರವಿಂದ ಮನಗೂಳಿ ಅವರು ಜ್ಞಾನವಂತರು, ಸೃಜನಶೀಲರು ಸಂಸ್ಥೆಯ ಏಳಿಗೆಗೆ ಸದಾ ಶ್ರಮಿಸುತ್ತಿರುವವರು. ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರಾಗಿ, ಮಾರ್ಗದರ್ಶಕರಾಗಿ, ಇತಿಹಾಸ ವಿಷಯದಲ್ಲಿ ತಮ್ಮದೇ ಆದ ಚಾಪನ್ನ ಮೂಡಿಸಿದಂತವರು. ಅವರೊಬ್ಬರು ಒಬ್ಬ ಚಿಂತನಾಶೀಲರು ಕೊಟ್ಟ ಕಾರ್ಯವನ್ನು ಹಾಗೂ ಹಿಡಿದ ಕಾಯಕವನ್ನು ಗುಣಾತ್ಮಕವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದಂತವರು ಅವರ ನಿವೃತ್ತಿಯ ಬದುಕು ಉತ್ತಮವಾಗಲಿ ಎಂದು ಹಾರೈಸಿದರು.

ಈ ವೇಳೆ ಡಾ. ಅರವಿಂದ್ ಮನಗೂಳಿ ಅವರಿಗೆ ಸಂಸ್ಥೆಯ ಅಂಗ ಸಂಸ್ಥೆಗಳಾದ ಸಿ. ಎಂ. ಮನಗೂಳಿ ಕಲಾ ಮಹಾವಿದ್ಯಾಲಯ, ಎಚ್. ಜಿ. ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು, ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಕನ್ಯಾ ಪ್ರೌಢಶಾಲೆ, ಎಚ್‌.ಜಿ. ಬಾಲಕರ ಪ್ರೌಢಶಾಲೆ, ಎಚ್‍.ಜಿ. ಪ್ರಾಥಮಿಕ ಶಾಲೆ , ಜೆ ಎಚ್ ಪಟೇಲ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ಅವರು ಪುಸ್ತಕ ಮತ್ತು ಹೂಗುಚ್ಛವನ್ನ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರರಾದ ಬಿ. ಡಿ. ಮಾಸ್ತಿ, ಎ. ಆರ್. ಹೆಗ್ಗನದೊಡ್ಡಿ, ಎಸ್. ಬಿ. ಕುಲಕರ್ಣಿ, ಎಸ್. ಆರ್. ನಾಯಕ, ಸುಭಾಷ್ ಪಾಟೀಲ್, ಎಸ್. ಎ. ಪಾಟೀಲ, ಡಾ. ನಾಗರಾಜ ಮುರಗೋಡ, ಬಿ. ಜಿ. ಮಠ, ಬಿ. ಎಸ್. ಬಿರಾದಾರ, ಎಮ್. ಎನ್. ಅಜ್ಜಪ್ಪ, ಎಸ್. ಪಿ. ಬಿರಾದಾರ, ವಿ. ಬಿ. ಪಾಟೀಲ, ಡಾ. ಅಂಬರೀಶ ಬಿರಾದಾರ, ಎಸ್. ಎ. ಜಾಗೀರದಾರ,ಎಸ್. ಕೆ. ಹೂಗಾರ ಸೇರಿದಂತೆ ವಿವಿಧ ಅಂಗ ಸಂಸ್ಥೆಗಳ ಬೋಧಕ ಬೋಧಕೇತರ ಮತ್ತು ವಿದ್ಯಾರ್ಥಿಯ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group