ಮೂಡಲಗಿ: ತಾಲ್ಲೂಕಿನ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ ರೂ.3.88 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಮುನ್ನೆಡಯುತ್ತಲಿದೆ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ಅವರು ತಿಳಿಸಿದರು.
ಸಂಘದ ಪ್ರಗತಿ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು ಸದ್ಯ ಸಂಘವು ರೂ. 78.31 ಕೋಟಿ ದುಡಿಯುವ ಬಂಡವಾಳ, ರೂ. 78.76 ಲಕ್ಷ ಶೇರು ಹಣ, ರೂ. 19.63 ಕೋಟಿ ನಿಧಿಗಳು, ರೂ. 57.88 ಕೋಟಿ ಠೇವುಗಳು, ರೂ.11.56 ಕೋಟಿ ಗುಂತಾವಣಿ ಹೊಂದಿದೆ ಎಂದರು.
ಸಂಘವು ವಿವಿಧ ಕ್ಷೇತ್ರಗಳ ಜನರಿಗೆ ರೂ.65.39 ಕೋಟಿ ಸಾಲವನ್ನು ನೀಡಿದ್ದು, ಶೇ.100ರಷ್ಟು ಸಾಲ ವಸೂಲಾತಿ ಮಾಡಿದೆ. ಅಡಿಟ್‍ದಲ್ಲಿ ‘ಅ’ ಶ್ರೇಣಿಯನ್ನು ಹೊಂದಿದೆ. ಸಂಘವು ರೂ.205 ಕೋಟಿ ಒಟ್ಟು ವಹಿವಾಟು ಮಾಡುವ ಮೂಲಕ ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಗಮನಸೆಳೆದಿದೆ ಎಂದರು.
ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವ ಸೊಸಾಯಿಟಿಯ ಸದಸ್ಯರ ಮಕ್ಕಳಿಗೆ ನಗದು ರೂಪದಲ್ಲಿ ‘ಪ್ರತಿಭಾ ಪುರಸ್ಕಾರ’ ನೀಡಲಾಗುತ್ತಿದೆ ಎಂದು ಬಾಳಪ್ಪ ಬೆಳಕೂಡ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೊಸಾಯಿಟಿಯ ಉಪಾಧ್ಯಕ್ಷ ಶಿವರುದ್ರ ಬಿ. ಪಾಟೀಲ, ನಿರ್ದೇಶಕರಾದ ಬಸಗೌಡ ಪಾಟೀಲ, ಬಸವಣ್ಣೆಪ್ಪ ಗೋರೋಶಿ, ಮಲ್ಲಪ್ಪ ಖಾನಾಪೂರ, ರಾಮಪ್ಪ ದಬಾಡಿ, ಹಣಮಂತ ಪರಕನಟ್ಟಿ, ಸುಭಾಸ ಖಾನಾಪೂರ, ಬಸಪ್ಪ ಹೆಬ್ಬಾಳ, ದುಂಡವ್ವಾ ಕಡಾಡಿ, ಲಕ್ಷ್ಮೀಬಾಯಿ ಕಂಕಣವಾಡಿ, ಪ್ರಕಾಶ ಕಲಾಲ, ಮಹ್ಮದಶಫಿ ಮೋಕಾಶಿ, ಕಲ್ಲೋಳೆಪ್ಪ ತೆಳಗಡೆ ಹಾಗೂ ಪ್ರಧಾನ ವ್ಯವಸ್ಥಾಪಕ ಹಣಮಂತ ಖಾನಗೌಡ್ರ ಇದ್ದರು.