ನೀರಿನ ಸದ್ಬಳಕೆ ನಮ್ಮೆಲ್ಲರ ಜವಾಬ್ದಾರಿ – ಈರಣ್ಣ ಕಡಾಡಿ

Must Read

ಬೆಳಗಾವಿ: ಸಕಲ ಜೀವಿಗಳ ಬದುಕಿನಲ್ಲಿ ನೀರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ಶುದ್ದ ಕುಡಿಯುವ ನೀರು ಜನರ ಆರೋಗ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಶುದ್ದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವುದು ಮತ್ತು ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದರು.

ಬುಧವಾರ ಆ-20ರಂದು ಬೆಳಗಾವಿ ದಂಡು ಮಂಡಳಿ (ಕಂಟೋನಮೆಂಟ್) ಸಿಬ್ಬಂದಿ ವರ್ಗದವರ ವಸತಿ ಗೃಹ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಈ ಜಗತ್ತಿನಲ್ಲಿ ಬದುಕುವ ಪ್ರತಿಯೊಂದು ಜೀವರಾಶಿಗೂ ಗಾಳಿ, ಬೆಳಕಿನಂತೆ ಶುದ್ದ ಕುಡಿಯುವ ನೀರು ಅತ್ಯಂತ ಅವಶ್ಯಕವಾಗಿದೆ. ಇದರಿಂದ ಸಾಕಷ್ಟು ರೋಗರುಜಿನಗಳನ್ನು ತಡೆಗಟ್ಟಿ, ಆರೋಗ್ಯ ಪೂರ್ಣ ಬದುಕು ಸಾಗಿಸಲು ಕುಡಿಯುವ ನೀರು ಅತ್ಯಮೂಲ್ಯ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ನೀರು ಭಗವಂತ ಕೊಟ್ಟ ಪ್ರಸಾದ ಎಂದು ಭಾವಿಸಿ ಅದನ್ನು ಹಿತವಾಗಿ ಮಿತವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

ಬೆಳಗಾವಿ ದಂಡು ಮಂಡಳಿ ಅಧ್ಯಕ್ಷ, ಬ್ರಿಗೇಡಿಯರ್ ಜೈದೀಪ ಮುಖರ್ಜಿ, ಸಿಇಒ ರಾಜೀವ ಕುಮಾರ, ನಾಮನಿರ್ದೇಶಕ ಸದಸ್ಯ ಸುಧೀರ ತುಪ್ಪೆಕರ, ಸಹಾಯಕ ಅಭಿಯಂತರ ಸತೀಶ ಮನ್ನೂರಕರ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Latest News

ಡಾ.ಮಹಾಂತೇಶ ಬೀಳಗಿ ಯುವಕರಿಗೆ ಸ್ಫೂರ್ತಿ – ಮೌಲಾಲಿ ಆಲಗೂರ

ಸಿಂದಗಿ: ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ...

More Articles Like This

error: Content is protected !!
Join WhatsApp Group