ಬೀದರ – ತಮ್ಮ ಗ್ರಾಮವನ್ನು ಹುಲಸೂರು ತಾಲೂಕಿಗೆ ಸೇರಿಸಿದ್ದನ್ನು ವಿರೋಧಿಸಿ ಹುಮನಾಬಾದ್ ತಾಲೂಕಿನ ಘಾಟಬೋರಾಳ ಗ್ರಾಮದ ಸಾವಿರಾರು ಜನರು ಬೀದರ್ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಅಂಬೇಡ್ಕರ್ ವೃತ್ತ, ಭಗತ್ ಸಿಂಗ್ ವೃತ್ತ, ಶಿವಾಜೀ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯತನಕ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಘಾಟಬೋರಾಳ ಗ್ರಾಮವನ್ನು ಹುಲಸೂರ ತಾಲೂಕು ಸೇರ್ಪಡೆಗೆ ವಿರೋಧಿಸಿ ಕಪ್ಪು ಬಾವುಟ ಹಿಡಿದು ಬೃಹತ್ ಪ್ರತಿಭಟನೆ ನಡೆಸಿ ಹಲಗೆ ಬಾರಿಸುತ್ತಾ 50ಕ್ಕೂ ಹೆಚ್ಚು ಕ್ರೋಸರ್ ಗಾಡಿಗಳನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದುನವಿ ನೀಡಿದರು.
ಘಾಟಬೋರಾಳ ಗ್ರಾಮವನ್ನು ಹುಮ್ನಾಬಾದ್ ತಾಲೂಕಿನಲ್ಲೆ ಉಳಿಸಿ ಎಂದು ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿಗೆ ಮನವಿ ಪತ್ರ ಸಲ್ಲಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ