ಮೂಡಲಗಿ: ಇದು ಬೇಸಿಗೆ ಕಾಲ. ರಾಷ್ಟ್ರೀಯ ಸ್ವಯಂ ಸೇವಾ ಶಿಬಿರಾರ್ಥಿಗಳಿಗೆ ಸಂಘಟಕರು ಹಾಗೂ ಗ್ರಾಮಸ್ಥರು ಶಿಬಿರದ ಅವಧಿಯಲ್ಲಿ ಉತ್ತಮ ಪೌಷ್ಟಿಕ ಆಹಾರ ಉತ್ತಮ ನೀರು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಶಿಬಿರಾರ್ಥಿಗಳ ಸೇವಾ ಕಾರ್ಯಗಳಿಗೆ ನೇರವಾಗಬೇಕು ಎಂದು ತಹಶಿಲ್ದಾರರ ಎಸ್. ವ್ಹಿ. ಬಬಲಿ ಕರೆ ಕೊಟ್ಟರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಿಂದ ದತ್ತು ಗ್ರಾಮ ಖಾನಟ್ಟಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು.
ಮೂಡಲಗಿ ತಾಲೂಕ ಪಶು ಸಂಗೋಪನ ಇಲಾಖೆಯ ಉಪನಿರ್ದೇಶಕರಾದ ಡಾ.ಎಮ್. ಜಿ. ವಿಭೂತಿ ಮಾತನಾಡಿ ರಾಷ್ಟ್ರವನ್ನು ಸದೃಢವಾಗಿ ನಿರ್ಮಾಣ ಮಾಡಲು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸರ್ಕಾರ ರಾಷ್ಟ್ರೀಯ ಸೇವಾ ಯೋಜನೆ ಜಾರಿ ತಂದಿದ್ದು ಈ ಯೋಜನೆಯ ಸದುಪಯೋಗಕ್ಕೆ ಶಾಲಾ ಕಾಲೇಜುಗಳು ಗ್ರಾಮಸ್ಥರು ಸಹಕರಿಸಬೇಕೆಂದು ಅಭಿಪ್ರಾಯಪಟ್ಟರು.
ಹೈನುಗಾರಿಕೆಯನ್ನು ವಿದ್ಯಾರ್ಥಿಗಳು ಒಂದು ಸ್ವಯಂ ಉದ್ಯೋಗವನ್ನಾಗಿಸಿಕೊಳ್ಳಲು ಅವಕಾಶವಿದ್ದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿಕೊಂಡರೆ ನಮ್ಮ ಇಲಾಖೆಯಿಂದ ಮಾರ್ಗದರ್ಶನ ಮಾಡಲಾಗುವುದು ಎಂದರು.
ಅಧ್ಯಕ್ಷ ಪರವಾಗಿ ಮಾತನಾಡಿದ ಪ್ರಾಚಾರ್ಯರಾದ ಜಿ.ವ್ಹಿ. ನಾಗರಾಜ ಏಳು ದಿನಗಳ ಈ ಶಿಬಿರದಲ್ಲಿ ಪರಿಸರ ಸಂರಕ್ಷಣೆ ಹಾಗೂ ಯುವಜನತೆ ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ನಿಯಂತ್ರಣ, ಸಾರ್ವಜನಿಕ ಉಚಿತ ಮಧುಮೇಹ ಮತ್ತು ಕಣ್ಣಿನ ತಪಾಸನೆ ಶಿಬಿರ, ಗ್ರಾಮ ಅಭಿವೃದ್ಧಿ ಮತ್ತು ಸಹಕಾರಿ ಸಂಘಗಳು ಕಾನೂನು ಸಾಕ್ಷರತಾ ಅರಿವು ನೆರವು ಮಹಿಳಾ ಸಬಲೀಕರಣ ಹೀಗೆ ಹತ್ತು ಹಲವು ವಿಷಯಗಳನ್ನು ನಮ್ಮ ಶಿಬಿರದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವನ್ನು ಖಾನಟ್ಟಿಯ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಮಹಾಲಿಂಗಯ್ಯ ಪೂಜೇರಿ ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಖಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಬಸಲಿಂಗವ್ವ ಮುಗಳಖೋಡ ವಹಿಸಿದ್ದರು.
ಮೂಡಲಗಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ಆರ್.ಪಿ. ಸೋನವಾಲ್ಕರ ಸಸಿಗೆ ನೀರು ಎರೆಯುವುದರ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಉದ್ಘಾಟಿಸಿದರು.
ವೇದಿಕೆ ಮೇಲೆ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ಎಸ್. ಎಲ್. ಚಿತ್ರಗಾರ, ಗ್ರಾಮದ ಹಿರಿಯರಾದ ಶಿವನಪ್ಪ ತುಪ್ಪದ, ಶಂಕರ ಡೋಣಿ, ಖಾನಟ್ಟಿ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ರಡ್ಡೇರಟ್ಟಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಗೋಪಾಲ ದರೂರ ಪ್ರಾರ್ಥಿಸಿದರು ಪ್ರಾಚಾರ್ಯ ಜಿ,ವ್ಹಿ ನಾಗರಾಜ ಸ್ವಾಗತಿಸಿದರು ಎನ್ಎಸ್ಎಸ್ ಯೋಜನೆ ಅಧಿಕಾರಿ ಡಾ.ಎಸ್. ಎಲ್. ಚಿತ್ರಗಾರ ಮಾಲಾರ್ಪಣೆ ನೆರವೇರಿಸಿದರು ಶಿಬಿರಾರ್ಥಿಗಳಾದ ಮಲ್ಲಿಕಾರ್ಜುನ ಗಡಾದ, ಕುಮಾರಿ ಪೂಜಾ ಕಂಬಳಿ ಕಾರ್ಯಕ್ರಮ ನಿರ್ವಹಿಸಿದರು, ಕೊನೆಗೆ ಉಪನ್ಯಾಸಕ ಎಲ್.ಪಿ. ಹಿಡಕಲ್ ವಂದಿಸಿದರು.
ಸಮಾರಂಭದಲ್ಲಿ ಪ್ರೊ. ಎಸ್.ಸಿ.ಮಂಟೂರ,ಪ್ರೊ. ಎ ಎಸ್.ಮೀಸಿನಾಯಿಕ, ಪ್ರೊ. ಎಮ್. ಎಸ್. ಕುಂದರಗಿ, ಪ್ರೊ. ವ್ಹಿ. ಜೆ.ಬೈರನಟ್ಟಿ, ಡಾ. ಬಿ.ಎಮ್. ಬರಗಾಲಿ,ಭಾರತಿ ತಳವಾರ, ವಿಷ್ಣು ಬಾಗಡಿ, ಪ್ರೊ. ಪಿ.ಬಿ. ಚೌಡಕಿ, ಪ್ರೊ. ಸಿದ್ದರಾಮ ಸವಸುದ್ದಿ, ಪ್ರೊ. ಸವಿತಾ ಕೊತ್ತಲ, ಪ್ರೊ. ಪ್ರೀತಿ ಬೆಳಗಲಿ. ರಮೇಶ ಖಾನಪ್ಪಗೋಳ,ಕಲ್ಮೇಶ ಇಂಗಳೆ ಮುಂತಾದವರು ಇದ್ದರು.

