ಸವದತ್ತಿ :ತಾಲೂಕಿನ ಸರ್ಕಾರಿ ಪ್ರಾಥಮಿಕ, ಸರ್ಕಾರಿ ಪ್ರೌಢ ಹಾಗೂ ಸರಕಾರಿ ಪದವಿಪೂರ್ವ ಕಾಲೇಜ್ ಚಿಕ್ಕೊಪ್ಪದಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಸವದತ್ತಿ ತಾಲೂಕಿಗೆ ಪ್ರಥಮ ಹಾಗೂ ಬೆಳಗಾವಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಪೃಥ್ವಿ ಹೋಳಿ ವಿದ್ಯಾರ್ಥಿನಿಯನ್ನು ಇಲಾಖೆಯ ಪರವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ, ಮುರಗೋಡ ಸಮೂಹ ಸಂಪನ್ಮೂಲ ವ್ಯಕ್ತಿ ಮಲ್ಲನ್ನವರ, ರಾಯಲ್ಸ್ ಕ್ಲಬ್ ಬೆಳಗಾವಿ ಯ ಸದಸ್ಯರು ಹಾಗೂ ಉದ್ಯಮಿಗಳಾದ ಜಯರಾಜ ಮೆಟ್ಟಗುಡ ಎಸ್ ಡಿ ಎಮ್ ಸಿ ಸದಸ್ಯರು ಶಿಕ್ಷಕರು ಉಪಸ್ಥಿತರಿದ್ದು ವಿದ್ಯಾರ್ಥಿನಿಯ ಮುಂದಿನ ಶಿಕ್ಷಣ ಕೂಡ ಉನ್ನತ ಮಟ್ಟದಲ್ಲಿ ಸಾಗಲಿ ಎಂದು ಶುಭ ಕೋರಿದರು