Homeಸುದ್ದಿಗಳುಹಳ್ಳೂರ ಬಸವೇಶ್ವರ ಕೋ ಆಪ್ ಕ್ರೆ ಡಿಟ್ ಸೊಸಾಯಿಟಿಗೆ 72.18 ಲಕ್ಷ ರೂ. ಲಾಭ

ಹಳ್ಳೂರ ಬಸವೇಶ್ವರ ಕೋ ಆಪ್ ಕ್ರೆ ಡಿಟ್ ಸೊಸಾಯಿಟಿಗೆ 72.18 ಲಕ್ಷ ರೂ. ಲಾಭ

ಹಳ್ಳೂರ- ಗ್ರಾಮದ ಪ್ರತಿಷ್ಠಿತ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ ಬ್ಯಾಂಕ್ ಕಳೆದ 31ವರ್ಷಗಳಿಂದ ಒಳ್ಳೆ ರೀತಿಯಲ್ಲಿ ವ್ಯವಹಾರ ನಡೆಸಿ ಗ್ರಾಹಕರ ಜೊತೆ ಸಂಬಂಧವನ್ನಿಟ್ಟು ಹೆಚ್ಚು ಉಳಿತಾಯ ಮಾಡಿ ಬ್ಯಾಂಕ್ ಸಾರ್ವಜನಿಕ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆಯೆಂದು ಬಸವೇಶ್ವರ ಕೊ ಆಪ್ ಕ್ರೆ. ಸೊಸಾಯಿಟಿ ಅಧ್ಯಕ್ಷ ಶಂಕ್ರಯ್ಯ ಹಿರೇಮಠ ಹೇಳಿದರು.

ಅವರು ಮಂಗಳವಾರದಂದು ಶ್ರೀ ಬಸವೇಶ್ವರ ಬ್ಯಾಂಕಿನ ಸಭಾ ಭವನದಲ್ಲಿ ನಡೆದ ಮಾರ್ಚ್ ಅಂತ್ಯದ ಸಂಘದ ಪ್ರಗತಿ ನೋಟದ ಸಭೆಯಲ್ಲಿ ಮಾತನಾಡಿ 2025ನೇ ಮಾರ್ಚ ಅಂತ್ಯದಲ್ಲಿ ಒಟ್ಟು 72.18 ಲಕ್ಷ ರೂ ಲಾಭವನ್ನು ಗಳಿಸಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ವ್ಯವಹಾರ ನಡೆಸುವ ಬ್ಯಾಂಕ್ ಇದಾಗಿದ್ದು. ಸೊಸಾಯಿಟಿಯು 2025 ಮಾರ್ಚ್ ಅಂತ್ಯಕ್ಕೆ ರೂ, 90.56 ಲಕ್ಷ ಶೇರು ಬಂಡವಾಳ ಹೊಂದಿದ್ದು. ಒಟ್ಟು ನಿಧಿಗಳು 4ಕೋಟಿ ಲಕ್ಷ, 35 ಕೋಟಿ ರೂ ಸಂಘದ ಠೇವು ಸಂಗ್ರಹಿಸಿ,ಇತರ ಬ್ಯಾಂಕ್ ಗಳಲ್ಲಿ ಸಂಘದ ಠೇವು 12 ಕೋಟಿ 81 ಲಕ್ಷ ಹೊಂದಿದ್ದು, ಒಟ್ಟು ಸಾಲಗಳು 24 ಕೋಟಿ 29 ಲಕ್ಷ, 24.29 ಕೋಟಿ ಸಾಲಗಳನ್ನು ಗ್ರಾಹಕರಿಗೆ ವಿತರಿಸಿದ್ದು, ಒಟ್ಟು 42 ಕೋಟಿ ರೂ ಸಂಘದಿಂದ ದುಡಿಯುವ ಬಂಡವಾಳ, ಮಾರ್ಚ್ ಮುಕ್ತಾಯಕ್ಕೆ ಬ್ಯಾಂಕ್ ವು 72 ಲಕ್ಷ 18ಸಾವಿರ ಉಳಿತಾಯ ಮಾಡಿ ಲಾಭದಾಯಕವಾಗಿದೆ ಸಂಘವು ಸತತವಾಗಿ ಷೇರುದಾರರಿಗೆ 3 ವರ್ಷಗಳಿಂದ 20% ಲಾಭಾಂಶ ವಿತರಿಸುತ್ತಾ ಬಂದಿದೆಯೆಂದು ಹೇಳಿದರು.

ಶ್ರೀ ಬಸವೇಶ್ವರ ಕೋ ಆಪ್ ಕ್ರೆ ಸೊಸಾಯಿಟಿ  ಮುಖ್ಯ ಕಾರ್ಯ ನಿರ್ವಾಹಕರಾದ ಕೆಂಪಣ್ಣ ಹುಬ್ಬಳ್ಳಿ ಮಾತನಾಡಿ, ಗ್ರಾಮದಲ್ಲಿ ಸನ್ 1994 ರಲ್ಲಿ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯು ಸ್ಥಾಪನೆಯಾಗಿ ಉತ್ತಮ ರೀತಿಯ ವ್ಯವಹಾರ ನಡೆಸಿ ಸುಸಜ್ಜಿತ ಸ್ವಂತ ಕಟ್ಟಡ ಹೊಂದಿದ್ದು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವಲ್ಲಿ ಯಶಸ್ವಿ ಹೊಂದಿ ಬ್ಯಾಂಕ್ ಪ್ರಗತಿ ಪಥದತ್ತ ಸಾಗುತ್ತಿದೆ. ಬ್ಯಾಂಕ್ ನಲ್ಲಿ ಎನ್ ಇ ಎಫ್ ಟಿ ಹಾಗೂ ಎಸ್ ಎಂ ಎಸ್, ಮತ್ತು ಐ ಎಫ್ ಎಸ್  ಸಿ ಕೋಡ್ ಸೌಲಭ್ಯವಿ ರುತ್ತದೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿರೆಂದು ಹೇಳಿದರು.

ಈ ಸಮಯದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಹಣಮಂತ ತೇರದಾಳ, ನಿರ್ದೇಶಕರಾದ ನಿಂಗಪ್ಪ ಸುಣದೋಳಿ, ಬಸಪ್ಪ ಸಂತಿ, ಶಂಕರ ಬೋಳನ್ನವರ, ಕುಮಾರ ಲೋಕನ್ನವರ, ಮಹೇಶ ನಾಶಿ, ಅಪ್ಪಾಸಾಬ ಮುಜಾವರ, ಬಸವರಾಜ ಚನ್ನಾಳ, ನಿರ್ಮಲಾ ಕುಲಕರ್ಣಿ, ಕಸ್ತೂರಿ ನಿಡೋಣಿ, ಗಣಪತಿ ದಾಸರ ಸಿಬ್ಬಂದಿಗಳಾದ ಕ್ಯಾಶಿಯರ್ ರಾಮಣ್ಣ ಸುಣದೋಳಿ, ಶ್ರೀಶೈಲ ತಳವಾರ, ರಮೇಶ ಸಂತಿ, ಲಕ್ಷ್ಮಣ ದಾಸರ, ಸಿದ್ದಯ್ಯ ಹಿರೇಮಠ, ಸಿದ್ದು ಪಾಲಬಾಂವಿ ಸೇರಿದಂತೆ ಸದಸ್ಯರಿದ್ದರು.

ವರದಿ: ಮುರಿಗೆಪ್ಪ ಮಾಲಗಾರ

RELATED ARTICLES

Most Popular

error: Content is protected !!
Join WhatsApp Group