- Advertisement -
ಬೀದರ – ಕೋಮು ಗಲಭೆ ಅಪರಾಧಿಗಳ ಕೇಸ್ ವಾಪಸ್ ಪಡೆದು ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದು ಕಾಂಗ್ರೆಸ್ ಪಕ್ಷದ ಬುದ್ದಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.
ಹುಬ್ಬಳ್ಳಿ ಗಲಭೆ ಪ್ರಕರಣ ಕೈ ಬಿಡುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಪತ್ರ ಕುರಿತಂತೆ ಮಾತನಾಡಿದ ಅವರು ಬೀದರ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ಗಲಭೆಕೋರರಿಗೆ ಪ್ರಚೋದನೆ ಕೊಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಮೊನ್ನೆ ನಡೆದ ಶಿವಮೊಗ್ಗ ಗಲಭೆ ಎಂದರು
- Advertisement -
ಚುನಾವಣೆಯ ಹೆದರಿಕೆ ನಮಗೆ ಇಲ್ಲ ಬೇಕಾದರೆ ರಾಹುಲ್ ಗಾಂಧಿಯವರು ಬೀದರ ಲೋಕಸಭಾ ಚುನಾವಣೆಗೆ ನನ್ನ ವಿರುದ್ಧ ಸ್ಪರ್ಧೆ ಮಾಡಬೇಕು. ಅವರನ್ನು ಎರಡು ಲಕ್ಷ ಮತದಿಂದ ಸೋಲಿಸುತ್ತೇನೆ ಎಂದರು.
ಅವರಲ್ಲದೆ ರಾಜಶೇಖರ ಪಾಟೀಲ ನಿಲ್ಲಿಸಿ ಇಲ್ಲ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ನನ್ನ ವಿರುದ್ಧ ನಿಲ್ಲಿಸಿ ಎಂದು ಖೂಬಾ ಗುಡುಗಿದರು.
ವರದಿ: ನಂದಕುಮಾರ ಕರಂಜೆ, ಬೀದರ