ಕನ್ನಡ ಕಿರುತೆರೆಯಲ್ಲಿ ಇದೀಗ ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಉತ್ತಮ ಟಿಆರ್ಪಿ ಪಡೆದು ಕೊಳ್ಳುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಕಳೆದ ಸೀಸನ್ ಗಳಿಗೆ ಹೋಲಿಸಿದರೆ ಕಡಿಮೆ ಪ್ರೇಕ್ಷಕರನ್ನು ಸೆಳೆದರು ಕೂಡ ದಿನೇ ದಿನೇ ತನ್ನ ಟಿಆರ್ಪಿ ಹೆಚ್ಚಿಸಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ, ಹೀಗೆ ಮುಂದುವರೆದರೆ ಕಂಡಿತ ಕಾರ್ಯಕ್ರಮ ಮತ್ತಷ್ಟು ಟಿಆರ್ಪಿ ಪಡೆದುಕೊಂಡು ಯಶಸ್ಸಿನ ಕಾರ್ಯಕ್ರಮಗಳ ಸಾಲಿಗೆ ಸೇರಿಕೊಳ್ಳಲಿದೆ.
ಇನ್ನು ಇಂತಹ ಸಂದರ್ಭದಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತಂದು ಹಾಗೂ ತಮ್ಮದೇ ಆದ ವೈಯಕ್ತಿಕ ಕೆಲಸಕ್ಕೆ ಕನ್ನಡದ ಖ್ಯಾತ ನಟರಾಗಿರುವ ಪುನೀತ್ ರಾಜಕುಮಾರ್ ಅವರು ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ಗಂಟೆಗಳ ಕಾಲ ಕಾಲ ಕಳೆಯಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.ಯಾವುದೇ ಅಧಿಕೃತ ಮಾಹಿತಿ ಇಲ್ಲದೆ ಇದ್ದರೂ ಕೂಡ ಕಿರುತೆರೆಯ ಬಲ್ಲ ಮೂಲಗಳಿಂದ ಹೀಗೊಂದು ಚರ್ಚೆ ನಡೆಯುತ್ತಿದ್ದು, ಪುನೀತ್ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ ವಾದ ಯುವರತ್ನ ಸಿನಿಮಾದ ಪ್ರಮೋಷನ್ ಗೆ ಪುನೀತ್ ರಾಜಕುಮಾರ್ ರವರ ಮನೆಯ ಎಲ್ಲಾ ಸ್ಪರ್ಧಿಗಳ ಜೊತೆ ಕೆಲವೊಂದು ಗಂಟೆಗಳ ಕಾಲ ಇದ್ದು, ತಮ್ಮ ಸಿನಿಮಾ ನೋಡುವಂತೆ ಪ್ರೇಕ್ಷಕರಿಗೆ ಅಲ್ಲಿಂದ ಪ್ರಮೋಷನ್ ಮಾಡಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ. ಹಾಗಿದ್ದರೆ ಯಾರ್ಯಾರು ಪುನೀತ್ ರವರನ್ನು ಮನೆಯಲ್ಲಿ ನೋಡಲು ಇಷ್ಟ ಪಡುತ್ತೀರಾ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.