ಬೀದರ್ ನಲ್ಲಿ ಪುನೀತ ರಾಜ್ ಮೆರವಣಿಗೆ

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಪವರ್ ಸ್ಟಾರ್ ಪುನೀತ ರಾಜ್ ಕುಮಾರ್ ಜನ್ಮದಿನದಂದು ಬೀದರ್ ನಲ್ಲಿ ಪುನಿತ ಅಭಿಮಾನಿಗಳು ಅಟೋ ಮೂಲಕ ಹಾಗೂ ಅಪ್ಪುವಿನ ಚಿತ್ರ ಇರುವ ಟೀ ಶರ್ಟ್ ಧರಿಸಿ ಸಂಭ್ರಮದ ಮೆರವಣಿಗೆ ಮಾಡಿದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನ ಹಾಗೂ ಅವರ ಜೈಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಬೀದರ್ ಅಭಿಮಾನಿಗಳು ಅದ್ದೂರಿಯಾಗಿ ಆಟೋಗಳ ಮೇಲೆ ಅವರು ನಟಿಸಿರುವ ಚಲನಚಿತ್ರಗಳ ಫೋಟೋ ಅಳವಡಿಸುವ ಮೂಲಕ ಮೆರವಣಿಗೆ ನಡೆಸಿದರು. ಪ್ರತಿಯೊಬ್ಬ ಯುವಕರು ಜೇಮ್ಸ್ ಚಿತ್ರದ ಟೀಶರ್ಟ್ ಧರಿಸುವ ಮೂಲಕ ಹಾಗೂ ಪ್ರತಿಯೊಬ್ಬರೂ ಕೈಯಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಹಿಡಿದು ಸಂಭ್ರಮಿಸಿದರು. ದಾರಿಯುದ್ದಕ್ಕೂ ಪುನೀತ್ ರಾಜ್ ಕುಮಾರ್ ಅವರಿಗೆ ಜೈಕಾರ ಹಾಕುತ್ತಾ ಅವರಿಗೆ ಗೌರವ ಸಲ್ಲಿಸಿದರು.

ಆದರೆ ಮೆರವಣಿಗೆಯ ಸಂಭ್ರಮದ ಜೊತೆ ಜೊತೆಗೇ ಪುನೀತ್ ಅಗಲಿಕೆ ಎಲ್ಲ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿತ್ತು. ನಿಮ್ಮ ಅಗಲಿಕೆ ನಮಗೆ ಬಹಳ ದುಃಖ ನೀಡಿದೆ ಎನ್ನುತ್ತಾ ಅಭಿಮಾನಿಗಳು ಕಣ್ಣೀರಿಡುತ್ತಾ ಮುಂದೆ ಸಾಗುತ್ತಿದ್ದ ದೃಶ್ಯ ಹೃದಯ ಭಾರ ಮಾಡಿತ್ತು.

ಚಿಕ್ಕ ಮಕ್ಕಳು ವೃದ್ಧರಾದಿಯಾಗಿ ಎಲ್ಲರೂ ಅಪ್ಪುವಿನ ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಂಡು ನಲಿದರು ಅದರ ಹಿಂದೆಯೆ ಅಪ್ಪುವನ್ನು ಸ್ಮರಿಸಿಕೊಂಡು ಕಣ್ಣೀರು ಹಾಕಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group