spot_img
spot_img

ಅಪ್ಪು ಜನಸೇವೆ ಬಣ್ಣಿಸಲು ಪದಗಳೇ ಸಾಲದು

Must Read

- Advertisement -

ಬೆಂಗಳೂರು – ಎಲ್ಲರ ನೆಚ್ಚಿನ ಅಪ್ಪು, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ 47ನೇ ಜನ್ಮದಿನ ಇಂದು. ಇದೇ ಮೊದಲ ಬಾರಿಗೆ ರಾಜನಿಲ್ಲದೆ ವಿಶ್ವದೆಲ್ಲೆಡೆ ಹುಟ್ಟುಹಬ್ಬ ಆಚರಿಸಲಾಯಿತು. ಇಂದೇ ಪುನೀತ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ತೆರೆಗಪ್ಪಳಿಸಿದ್ದು ಅಭಿಮಾನಿಗಳಲ್ಲಿ ಸಂತಸವನ್ನು ಇಮ್ಮಡಿಗೊಳಿಸಿದೆ.

ನಗರದ ಬನಶಂಕರಿಯ ಕತ್ತರಿಗುಪ್ಪೆ ಸಮೀಪ ಇರುವ ಚೆನ್ನಮ್ಮನ ಕೆರೆ ಅಚ್ಚಕಟ್ಟುವಿನಲ್ಲಿ ಇರುವ ವೃತ್ತದಲ್ಲಿ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ – ಅಪ್ಪು ಅಭಿಮಾನಿಗಳಾದ ಗ್ರೀನ್ ಬಾಯ್ಸ್ ತಂಡದ ಆನಂದ್, ಮಧು , ಹರೀಶ್ , ರಾಜು , ರವಿ ಲಕ್ಕಿ , ದರ್ಶನ್ , ಮೋಹನ್ ಗೌಡ , ಮರಿ ಸ್ವಾಮಿ ಇನ್ನೂ ಮೊದಲಾದವರು ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಪೂಜಾ ಕುಣಿತ:

- Advertisement -

ಚನ್ನಪಟ್ಟಣದ ಆದಿಶಕ್ತಿ ದೇವತೆಯ ಪೂಜಾ ಕುಣಿತದ ಜೊತೆ ಜೊತೆಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಾದ ಗ್ರೀನ್ ಬಾಯ್ಸ್ ತಂಡದ ರವರ ಕೋರಿಕೆಯಂತೆ ಪುನೀತ್ ರಾಜ್ ಕುಮಾರ್ ಭಾವಚಿತ್ರ ವನ್ನು ದೇವಿಯ ಹಿಂಭಾಗದಲ್ಲಿ ಕಾಣುವಂತೆ ಚನ್ನಪಟ್ಟಣದ ಸುಭಾಷ್ , ನಾಗೇಶ್ ಅವರು ಪೂಜಾ ಕುಣಿತ ನಡೆಸಿಕೊಟ್ಟರು.

ನವಚೈತನ್ಯ ಕನ್ನಡ ಗೆಳಯರ ಬಳಗದಿಂದ ಅನ್ನದಾನ

ನಗರದ ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯ ದತ್ತಾತ್ರೆಯ ನಗರದಲ್ಲಿ ಇರುವ ನವಚೈತನ್ಯ ಕನ್ನಡ ಗೆಳಯರ ಬಳಗದಿಂದ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ 47ನೇ ಜನ್ಮದಿನ ಆಚರಣೆ ಪ್ರಯುಕ್ತ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಹಾಗು ನಗರದಾದ್ಯಂತ ಸಂಗೀತ ಕಾರ್ಯಕ್ರಮ, ವಸ್ತು ಪ್ರದರ್ಶನ ಸೇರಿದಂತೆ ಅಪ್ಪು ಸ್ಮರಣೆಗಾಗಿ ಹಲವಾರು ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು .

- Advertisement -

ಜೇಮ್ಸ್” – ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಚಿತ್ರ:

ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಕೊನೆಯ ಚಿತ್ರ ಜೇಮ್ಸ್ ಚಲನಚಿತ್ರವು ಜಗತ್ತಿನಾದ್ಯಂತ 5 ಭಾಷೆಗಳಲ್ಲಿ 4 ಸಾವಿರ ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ ” ಕರ್ನಾಟಕ ರತ್ನ ಪ್ರಶಸ್ತಿ ” – ಅಭಿಮಾನಿಗಳು ಸಂತಸ:

ಸದ್ಯದಲ್ಲೇ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು ಅದಕ್ಕೆ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಾದ ಗ್ರೀನ್ ಬಾಯ್ಸ್ ತಂಡ ಹಾಗು ” ನವಚೈತನ್ಯ ಕನ್ನಡ ಗೆಳಯರ ಬಳಗದವರು ಸಂತಸ ವ್ಯಕ್ತಪಡಿಸಿದ್ದಾರೆ.


ಚಿತ್ರ: ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group