ಪಂಜಾಬ ಚುನಾವಣೆ ಗೆಲುವು: ಸಿಂದಗಿಯಲ್ಲಿ ಆಮ್ ಆದ್ಮಿ ಸಂಭ್ರಮ

Must Read

ಸಿಂದಗಿ: ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ಗುರುವಾರ ಸಂಜೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮದ್ದು ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.

ಆಮ್ ಆದ್ಮಿ ಪಕ್ಷದ ತಾಲೂಕಾಧ್ಯಕ್ಷ ಶಬ್ಬೀರಪಟೇಲ ಬಿರಾದಾರ ಮಾತನಾಡಿ, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಪಂಜಾಬ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಒಂದು ಪ್ರಚಂಡ ಬಹುಮತದಿಂದ ಸುಮಾರು 92 ಕ್ಕಿಂತ ಜಾಸ್ತಿ ಸ್ಥಾನಗಳನ್ನು ಜಯ ಗಳಿಸಿ ಒಂದು ಇತಿಹಾಸ ಸೃಷ್ಟಿಸಿದೆ. ಗೋವಾದಲ್ಲಿ ಕೂಡ 2 ಸ್ಥಾನಗಳಲ್ಲಿ ಜಯ ಗಳಿಸಿ ಸುಮಾರು 7% ಮತ ತೆಗೆದುಕೊಂಡಿದೆ. ಯಾವ ರೀತಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ಶಿಕ್ಷಣ, ವೈದ್ಯಕೀಯ ಮತ್ತು ಹತ್ತಾರು ಐತಿಹಾಸಿಕ ಕೆಲಸಗಳನ್ನು ಮಾಡಿ ದೆಹಲಿಯ ಜನತೆಗೆ ಒಂದು ರುಚಿ ತೋರಿಸಿದ್ದಾರೆ ಅದೇ ರೀತಿ ಪಂಜಾಬ್ ಜನತೆ ಕೂಡ ಒಂದು ರುಚಿ ನೋಡಲಿಕ್ಕೆ ಸಿದ್ಧರಾಗಿದ್ದಾರೆ ಎಂದರು.

ವಿಜಯೋತ್ಸವದಲ್ಲಿ ಆಮ್ ಆದ್ಮಿ ಪಕ್ಷದ ಅಶೋಕ ಕೋರಳ್ಳಿ, ಸಿದ್ದಾರಾಮ ವರಕೇರಿ, ಮಹೇಬೂಪಟೇಲ ಎಚ್. ಪಾಟೀಲ, ಶಂಕರಲಿಂಗ ಚಿನಮಳ್ಳಿ, ಜಾವೇದ ಮನಿಯಾರ, ಮಲಕಪ್ಪ ಕುರನಳ್ಳಿ ಇತರು ಉಪಸ್ಥಿತರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group