ಪಂಜಾಬ್ ರೈತರು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ – ಕೋಡಿಹಳ್ಳಿ

Must Read

ಬೀದರ – ಕೇಂದ್ರ ಸರ್ಕಾರ ಮಾಡಿದ ತಪ್ಪಿಗೆ ಪಂಜಾಬ್ ರೈತರು ತಿರುಗೇಟು ಕೊಟ್ಟಿದ್ದಾರೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಪಂಚ ರಾಜ್ಯ ಗಳಲ್ಲಿ ಬಂದಿರುವ ಫಲಿತಾಂಶವನ್ನು ನಾವು ಗೌರವಿಸುತ್ತೇವೆ ಆದರೆ ಕೇಂದ್ರ ಸರ್ಕಾರ ಮಾಡಿದ ತಪ್ಪಿಗೆ ಪಂಜಾಬ್ ರೈತರು ತಿರುಗೇಟು ಕೊಟ್ಟಿದ್ದಾರೆ ಎಂದರು.

ಬೀದರ್ ನ ಗಾಂಧಿಗಂಜ್ ನಲ್ಲಿ ಸುದ್ದಿಗೋಷ್ಠಿ ಮಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಯಾಗಿದೆ ಆದರೂ ಬಿದ್ದೋರಿಗೆ ಮೂಗು ಮಣ್ಣಾಗಿಲ್ಲಾ ಅನ್ನೋದೆ ಉದಾಹರಣೆಯಾಗಬಾರದು ಎಂದು ವ್ಯಂಗ್ಯವಾಡಿದರು.

ಪಂಜಾಬ್ ಅನ್ನು ನಾವು ಮಾಡೆಲ್ ಆಗಿ ತೆಗೆದುಕೊಳ್ಳಲ್ಲ, 2023ಕ್ಕೆ ಕರ್ನಾಟಕವೇ ಒಂದು ಮಾಡೆಲ್ ಆಗುತ್ತೆ, ಕರ್ನಾಟಕದ ಜನ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಇರತ್ತಾರೆ ಅಂದ್ರೆ ಅದು ತಪ್ಪು‌‌‌‌‌… ಯಾಕೆಂದರೆ ಪಂಜಾಬ್ ಜನ ಒಂದು ಫಲಿತಾಂಶ ಕೊಟ್ಟಿದ್ದಾರೆ ಅದಕ್ಕಿಂತಲೂ ಒಳ್ಳೆಯ ಫಲಿತಾಂಶ ಕೊಡಲು ಕರ್ನಾಟಕದ ರೈತರು ತೀರ್ಮಾನ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿರಿ, ಇಲ್ಲದೆ ಇದ್ರೆ ನಮ್ಮಗೂ ರಾಜಕೀಯ ಮಾಡೋಕೆ ಬರುತ್ತೆ, ನಾವು ನಿಮಗೆ ರಾಜಕೀಯ ತೋರಿಸುತ್ತೇವೆ ಎಂದು ಗರಂ ಆದ ಕೋಡಿಹಳ್ಳಿ, ಭೂಸ್ವಾಧೀನ ಕಾಯ್ದೆ ಸೇರಿದಂತೆ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ದಿ. 28 ರಂದು ಬೆಂಗಳೂರಿನಲ್ಲಿ ಬೃಹತ್ ರೈತರ ಸಮಾವೇಶ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group