ಶಾಸಕರು ಸಿದ್ಧು ಜನ್ಮದಿನದ ಸಂಭ್ರಮದಲ್ಲಿ ಬಿಜಿ
ಬೀದರ – ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಮಹಾರಾಷ್ಟ್ರ ಗಡಿ ಪ್ರದೇಶಕ್ಕೆ ಹೊಂದಿರುವ ಗ್ರಾಮಗಳ ಸುತ್ತ ಮುತ್ತ ನಿನ್ನೆ ರಾತ್ರಿ ಯಿಂದ ಮುಂದುವರಿದ ಭಾರೀ ಮಳೆ ತನ್ನ ಅಟ್ಟಹಾಸ ಮೆರೆದಿದೆ.
ಭಾಲ್ಕಿ ತಾಲ್ಲೂಕಿನ ಮೇಹಕರ್, ಅಳವಾಯಿ ಅಟರ್ಗಾ ವಲಯದಲ್ಲಿ ಭಾರೀ ಮಳೆ ಬೀಳುತ್ತಿದೆ. ಮಳೆಯಿಂದಾಗಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದ ಕೆರೆ ಮತ್ತು ಹಲವು ತಗ್ಗು ಪ್ರದೇಶ ತುಂಬಿವೆ.
ಇದರಿಂದ ಗ್ರಾಮಗಳಲ್ಲಿ ನೀರು ನುಗ್ಗಿದ್ದು ಗ್ರಾಮದ ಅಕ್ಕಪಕ್ಕದ ಸೇತುವೆಗಳ ಮೇಲೆಯೂ ನೀರು ಹಾದು ಹೋಗುತ್ತಿದೆ. ಜನರ ಜೀವನ ಅಸ್ತವ್ಯಸ್ತ ವಾಗಿದೆ. ಹೊಲಗಳಲ್ಲಿ ನೀರು ತುಂಬಿ ಬೆಳೆದು ನಿಂತ ಸೋಯಾ,ಉದ್ದು ಎಲ್ಲಾ ಬೆಳೆಗಳು ಹಾಳಾಗಿವೆ ರೈತರು ಕಣ್ಣೀರು ಹಾಕುತ್ತಾ ಇದ್ದಾರೆ. ಭಾಲ್ಕಿ ಕ್ಷೇತ್ರದ ಶಾಸಕರು ಮಾತ್ರ ಸಿದ್ದರಾಮಯ್ಯ ಹುಟ್ಟು ಹಬ್ಬದಲ್ಲಿ ಬಿಜಿಯಾಗಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಮಳೆಯಿಂದ ನೊಂದುಕೊಂಡ ಜನರಿಗೆ ಸಾಂತ್ವನ ಹೇಳುವುದನ್ನು ಬಿಟ್ಟು ವೈಭವದ ಹುಟ್ಟು ಹಬ್ಬದ ಆಚರಣೆಯಲ್ಲಿ ತೊಡಗಿದ್ದು ವಿಪರ್ಯಾಸ. ಇನ್ನು ಮುಂದಾದರೂ ಕ್ಷೇತ್ರದ ಶಾಸಕರಿಗೆ, ಜನಪ್ರತಿನಿಧಿಗಳಿಗೆ ಮಳೆಯ ಅನಾಹುತ ಕಣ್ಣಿಗೆ ಬೀಳುತ್ತದೆಯೋ ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ