ಕನ್ನಡ ಚಿತ್ರರಂಗದ ರಾಜಾಕುಳ್ಳ ಎಂದೇ ಪ್ರಸಿದ್ಧರಾಗಿದ್ದ ಹಾಸ್ಯಚಿತ್ರ ನಟ, ನಿರ್ಮಾಪಕ ದ್ವಾರಕೀಶ ನಿಧನರಾಗಿದ್ದಾರೆ.
ಚಿತ್ರರಂಗದ ನಾಯಕ ವಿಷ್ಣುವರ್ಧನ ಅವರ ಆಪ್ತಮಿತ್ರನಾಗಿದ್ದ ದ್ವಾರಕೀಶ ನೂರಾರು ವಿಶಿಷ್ಟ ಚಿತ್ರಗಳಲ್ಲಿ ನಟಿಸಿ, ನಿರ್ಮಿಸಿ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದರು.
೧೯೪೨ ರಲ್ಲಿ ಹುಣಸೂರಿನಲ್ಲಿ ಹುಟ್ಟಿದ ದ್ವಾರಕೀಶ ಅವರಿಗೆ ಹತ್ತು ಜನ ಮಕ್ಕಳು ಐವರು ಗಂಡು ಮಕ್ಕಳು, ಐವರು ಹೆಣ್ಣು ಮಕ್ಕಳು. ವಿಶಿಷ್ಟ, ವಿಶೇಷ ಹಾಸ್ಯ ನಟನಾಗಿದ್ದ ಅವರು ಡಾ. ರಾಜಕುಮಾರ, ಉದಯಕುಮಾರ, ವಿಷ್ಣುವರ್ಧನ ಅವರಲ್ಲದೆ ಇನ್ನೂ ಅನೇಕ ನಾಯಕರ ಜೊತೆ, ನರಸಿಂಹರಾಜು, ಬಾಲಕೃಷ್ಣ ಅವರ ಜೊತೆ ಸಾಮಾಜಿಕ, ಪೌರಾಣಿಕ, ಪತ್ತೇದಾರಿ ಸಹನಟರಾಗಿ ನಟಿಸಿದ್ದಾರೆ. ನೀ ಬರೆದ ಕಾದಂಬರಿ, ಆಫ್ರಿಕಾದಲ್ಲಿ ಶೀಲಾ ದ್ವಾರಕೀಶ ಅವರ ಪ್ರಮುಖ ನಿರ್ದೇಶನದ ಚಿತ್ರಗಳು.
ದ್ವಾರಕೀಶ ಅವರಿಗೆ ೮೩ ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ನಿಧನರಾದರು. ದ್ವಾರಕೀಶ ಅವರ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ.

Must Read
- Advertisement -
- Advertisement -
More Articles Like This
- Advertisement -