ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇನ್ನುಂದೆ ‘ಧ್ಯಾನ್ ಚಂದ್ ಖೇಲ್ ರತ್ನ’

0
381

ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಿಸಿರುವ ಕೇಂದ್ರ ಸರ್ಕಾರ ಹಾಕಿ ಆಟದ ದಂತಕತೆ ಧ್ಯಾನ್ ಚಂದ್ ಅವರ ಹೆಸರಿಟ್ಟು ಘೋಷಣೆ ಮಾಡಿದೆ.

ರಾಜಕಾರಣಿಗಳಿಗೂ ಆಟಗಳಿಗೂ ನಂಟು ಬೇಡ ಎಂಬ ಸಂದೇಶ ಸಾರುವ ಈ ಬದಲಾವಣೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹೆಸರನ್ನು ಕ್ರೀಡಾ ಕ್ಷೇತ್ರದ ಅತ್ಯನ್ನತ ಪ್ರಶಸ್ತಿಗೆ ಇಡಲಾಗಿತ್ತು. ಆದರೆ ಯಾವುದೇ ಕ್ರೀಡೆಯಲ್ಲಿ ಸೇರದ ರಾಜೀವ್ ಗಾಂಧಿಯವರ ಹೆಸರಿಟ್ಟಿದ್ದನ್ನು ದೇಶವಾಸಿಗಳು ಕೀಟಲೆ ಮಾಡುವಂತಾಗಿತ್ತು.

ಕೇವಲ ೩ ಓಲಿಂಪಿಕ್ ಗೇಮ್ ಗಳಲ್ಲಿ ೩೩ ಗೋಲುಗಳನ್ನು ಹೊಡೆದು ವಿಕ್ರಮ ಸಾಧಿಸಿದ್ದ ಧ್ಯಾನ್ ಚಂದ್ ಹಾಕಿ ಆಟದ ಮಾಂತ್ರಿಕ ಎನಿಸಿದ್ದರು. ಇವರ ಆಟ ನೋಡಲು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಬಂದಿದ್ದು ಧ್ಯಾನ್ ಚಂದ್ ಜರ್ಮನಿಗೆ ಬಂದರೆ ಕರ್ನಲ್ ಹುದ್ದೆ ಕೊಡುವುದಾಗಿ ಘೋಷಿಸಿದರೂ ನಾನು ಭಾರತದ ಪ್ರಜೆ ಎಂದ ಧ್ಯಾನ್ ಚಂದ್ ಹಿಟ್ಲರ್ ನ ಆಫರ್ ತಿರಸ್ಕರಿಸಿದ್ದರು.

ಇತ್ತ ಜಪಾನ್ ಓಲಿಂಪಿಕ್ ನಲ್ಲಿ ಭಾರತದ ಹಾಕಿ ತಂಡ ಕಂಚಿನ ಪದಕ ಗೆದ್ದು ಬೀಗುತ್ತಿರುವಾಗಲೇ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರಿಗೆ ಈ ಅತ್ಯುನ್ನತ ಗೌರವ ದೊರಕಿದ್ದು ಭಾರತದ ಹಿರಿಮೆ ಹೆಚ್ಚಾದಂತಾಗಿದೆ.

ಇನ್ನು ಅಚ್ಚರಿಯ ನಡೆಯೊಂದರಲ್ಲಿ ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ಈ ಬದಲಾವಣೆಯನ್ನು ಸ್ವಾಗತಿಸುವುದಾಗಿ ಹೇಳಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಿಸಿದ್ದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಆದರೆ ಬಿಜೆಪಿ ನಾಯಕರ ಹೆಸರಿರುವ ಕ್ರೀಡಾಂಗಣಗಳ ಹೆಸರು ಬದಲಿಸಿ ಎಂದು ರಣದೀಪ ಸುರ್ಜೇವಾಲಾ ಟಾಂಗ್ ಕೊಟ್ಟಿದ್ದಾರೆ.