ಬೀದರ್ ಪೊಲೀಸರ ಮೇಲೆ ನಂಬಿಕೆ ಇಲ್ಲ, ಪ್ರಕರಣ ತನಿಖೆ SIT ಮಾಡಲಿ ಎಂದು ಒತ್ತಾಯ.
ಬೀದರ – ಬೀದರ್‌ನಲ್ಲಿ ಲವ್ ಜಿಹಾದ್ ಬದಲಾಗಿ ಬಲಾತ್ಕಾರ ಜಿಹಾದ್ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮುಸ್ಲಿಂ ಶಿಕ್ಷಕನೊಬ್ಬ 30-40 ಹಿಂದೂ ಧರ್ಮದ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಆರೋಪಿ ಶಿಕ್ಷಕ ಬೇರೊಬ್ಬರ ಜೊತೆ ಮಾತನಾಡಿದ ಆಡಿಯೋ ಬಿಡುಗಡೆಯಾಗಿದೆ ಇದೇ ರೀತಿ ಹಲವಾರು ಆಡಿಯೋ ವಿಡಿಯೋ ಗಳಿವೆ ಈ ಪ್ರಕರಣವನ್ನು ಎಸ್ ಆಯ್ ಟಿ ತನಿಖೆಗೆ ವಹಿಸಬೇಕು ಎಂದು ಆಗ್ರಹ ಮಾಡಿದರು.
ಬೀದರ್‌ನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರ ಆರೋಪಿಯ ಮೊಬೈಲ್ ತೆಗೆದುಕೊಂಡಾಗ ಎಲ್ಲಾ ಕೇಸ್ ಬಹಿರಂಗವಾಗಿದೆ.
3-4 ಬಾಲಕಿಯರಿಗೆ ಈ ರೀತಿ ಮಾಡಿದ್ದೇನೆ ಎಂದು ಆಡಿಯೋದಲ್ಲಿ ಆರೋಪಿ ಹೇಳಿದ್ದಾನೆ. ಆರೋಪಿ ಮೊಬೈಲ್‌ನಲ್ಲಿ ಎಲ್ಲಾ ಸಾಕ್ಷ್ಯಗಳು ಇವೆ. 3-4 ವಿದ್ಯಾರ್ಥಿನಿಯರ ಬೆತ್ತಲೆ ಪೋಟೊಗಳು, 40-50 ವಿದ್ಯಾರ್ಥಿನಿಯ ಜೊತೆ ಅಶ್ಲೀಲ ಚಾಟಿಂಗ್ ಇದೆ.
40 ಸಾವಿರಕ್ಕೂ ಅಧಿಕ ಪೊಟೋಗಳಿವೆ, ಹೀಗಾಗಿ ಈ ಪ್ರಕರಣವನ್ನು ಎಸ್‌ಐಟಿಗೆ ನೀಡಬೇಕು ಎಂದು ಆಗ್ರಹಿಸಿದರು.
ಆರೋಪಿ ಶಿಕ್ಷಕನನ್ನ ವಶಕ್ಕೆ ಪಡೆದು ಸಂಪೂರ್ಣ ವಿಚಾರಣೆ, ತನಿಖೆ ನಡೆಸಿದರೆ ಸತ್ಯ ಬಹಿರಂಗ ಆಗುತ್ತದೆ. ಬಲಾತ್ಕಾರ ಜಿಹಾದ್ ಹಿಂದೆ ವಿದೇಶಿ ಶಕ್ತಿಗಳು ಇರುವ ಕೈವಾಡ ಇರುವ ಶಂಕೆಯಿದೆ. ಧರ್ಮಸ್ಥಳ ಬುರುಡೆ ಪ್ರಕರಣವನ್ನ ಎಸ್‌ಐಟಿಗೆ ಕೊಡ್ತಾರೆ, ಅದೇ ರೀತಿ ಈ ಪ್ರಕರಣವನ್ನು SITಗೆ ಕೊಡಬೇಕು ಎಂದರು.
ಬಿಜೆಪಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ್, ಸಿದ್ದು ಪಾಟೀಲ್ ಹಾಗು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ

