ಅತ್ಯಾಚಾರಿ ಗಣಿಯಾರನಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಬೇಕು – ನಂದಿನಿ ಸಹಬಾಳ್

Must Read

ಕಲಬುರಗಿ:  ಜಿಲ್ಲೆಯ ಯಡ್ರಾಮಿ ತಾಲೂಕಿನ ಖಾಸಗಿ ಶಾಲೆಯ ಮುಖ್ಯಸ್ಥನಾದ ಹಾಜಿ ಮಲಂಗ್ ಗಣಿಯಾರ ಎರಡು ದಿನಗಳ ಹಿಂದೇ 5 ನೇಯ ತರಗತಿಯ ಮಗುವಿನ ಮೇಲೆ ಅತ್ಯಾಚಾರ ಎಸಗಿದ ನಂತರ ಮಗುವಿಗೆ ಯಾರೊಂದಿಗೂ ಹೇಳದಂತೆ ಬೆದರಿಕೆ ಹಾಕಿದ್ದು ತಿಳಿದು ಬಂದಿದೆ, ಈ ಹೇಯ ಕೃತ್ಯ ಎಸಗಿದ ಅತ್ಯಾಚಾರಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಮಹಿಳಾ ನೌಕರರ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷೆ ನಂದಿನಿ ಸಹಬಾಳ್ ಹೇಳಿದ್ದಾರೆ.

ಅನ್ಯಾಯ ಆದಾಗ ಅದನ್ನು ವಿರೋಧಿಸುವ ಧೈರ್ಯ ಚಿಕ್ಕಮಕ್ಕಳಿಗೆ ಇರುವುದು ವಿರಳ, ಆದರೂ ಅದು ಗೊತ್ತಾದಾಗ ಆ ಆರೋಪಿಗೆ ಶಿಕ್ಷೆ ಆಗಲೇಬೇಕು. ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಅಮಾಯಕ ಮಕ್ಕಳ ಮೇಲೆ ಅತ್ಯಾಚಾರ ಮಾಡುವ ಕ್ರೂರಿಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಬೇಕು. ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಹಾಗೂ ಅತ್ಯಾಚಾರವನ್ನು ನಾವು ಖಂಡಿಸುತ್ತೇವೆ ಅನ್ಯಾಯದ ವಿರುದ್ದ ಧ್ವನಿ ಎತ್ತುತ್ತೇವೆ. ಯಾರಿಗೆ ಅನ್ಯಾಯವಾಗಲಿ ಸಹಿಸಿಕೊಳ್ಳಬೇಡಿ ಅತ್ಯಾಚಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದುಒತ್ತಾಯಿಸುತ್ತೇನೆ ಎಂದು   ನಂದಿನಿ ಸಹಬಾಳ್ ಕರೆ ನೀಡಿರುವರು.

ಈ ಕುರಿತು ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿರುವ ಅವರು ಇಂತಹ ಘಟನೆಗಳು ಯಾವತ್ತೂ ಜರುಗಬಾರದು ಇಂತವರಿಗೆ ಕಠಿಣ ಶಿಕ್ಷೆ ಜರುಗಲೇಬೇಕು ಈ ಕುರಿತು ಹೋರಾಟ ಮಾಡುವುದಾಗಿ ಹೇಳಿರುವರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group