ಪುಸ್ತಕಗಳು ಸಂಸ್ಕೃತಿಯ ಪ್ರತೀಕ. ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಅರಿಯಬೇಕಾದರೆ ಸಾಹಿತಿಗಳು ಬರೆದ ಪುಸ್ತಕಗಳನ್ನ ಓದಬೇಕೆಂದು ಜ್ಞಾನಭಾರತಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ರಾಮಚಂದ್ರ ಹೆಗಡೆಯವರು ಹೇಳಿದರು.
ಎಂ ಜಿ ವ್ಹಿ ಸಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಂಭ್ರಮದ ದಿನದಂದು ಡಾ. ಪ್ರಕಾಶ ನರಗುಂದ ಹಾಗೂ ಎಚ್. ಜಿ.ಪಾಟೀಲ ಅವರು ಸಂಪಾದಿಸಿದ ಶೋಧನೆ ಸಂಶೋಧನೆ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಡಾ. ಪ್ರಕಾಶ ನರಗುಂದ ಅವರು ಈಗಾಗಲೇ ಕನ್ನಡ ಸಾಹಿತ್ಯದ ಅನೇಕ ಪ್ರಕಾರದ ಕೃತಿಗಳನ್ನು ಕನ್ನಡ ನಾಡಿಗೆ ನೀಡಿದ್ದಾರೆ ಎಂದು ಶೋಧನೆ ಸಂಶೋಧನೆ ಈ ಕೃತಿಯಲ್ಲಿ ನಾಡಿನ ಪ್ರಭುದ್ಧ ಲೇಖಕರ ಲೇಖನಗಳನ್ನು ತರಿಸಿ ಅವುಗಳೆಲ್ಲವನ್ನು ಸಂಗ್ರಹಿಸಿ ಮೌಲ್ಯಯುತ ಕೃತಿ ಮಾಡಿದ್ದಾರೆ. ತಾವು ಬೆಳೆಯುವ ಜೊತೆಗೆ ಇತರರನ್ನು ಬೆಳೆಸುವ ಗುಣ ಪ್ರಕಾಶ ಅವರದು. ಇಂತಹ ಮೌಲ್ಯಯುತ ಪುಸ್ತಕಗಳನ್ನು ಖರೀದಿ ಮಾಡಿ ಓದಿದರೆ ಬರಹಗಾರನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಕಥೆ, ಕವನ, ಕಾದಂಬರಿ, ನಾಟಕ ಮುಂತಾದವುಗಳನ್ನು ಮಕ್ಕಳು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ಕೃತಿಯ ಒಡಲಾಳದಲ್ಲಿರುವ ಪ್ರತಿಯೊಂದು ಲೇಖಗಳನ್ನು ಓದಿ ಅರ್ಥೈಸಿಕೊಳ್ಳಬೇಕು. ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಜಿ. ವ್ಹಿ ಸಿ ವಿದ್ಯಾ ಪ್ರಸಾರಕ ವಿಸ್ವಸ್ಥ ನಿಧಿಯ ಕಾರ್ಯದರ್ಶಿಗಳಾದ ಅಶೋಕ ತಡಸದ ಅವರು ಉದ್ಘಾಟನೆ ಮಾಡಿ, ಈ ಕನ್ನಡ ನಾಡಿನಲ್ಲಿ ಅನೇಕ ಮಹಾನ್ ಪುರುಷರು, ಸಾಹಿತಿಗಳು, ಬರಹಗಾರರು ಇದ್ದಾರೆ ಅವರ ಕೃತಿಗಳನ್ನು ತೆಗೆದುಕೊಂಡು ಓದಬೇಕು. ಕನ್ನಡ ನುಡಿ,ಜಲ, ನೆಲ ಮುಂತಾದವುಗಳ ಬಗ್ಗೆ ಅಭಿಮಾನವಿರಬೇಕು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎ ಬಿ ಕುಲಕರ್ಣಿಯವರು ಕನ್ನಡ ರಾಜ್ಯೋತ್ಸವದ ಮಹತ್ವ ಮತ್ತು ಅದರ ಪರಂಪರೆಯ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು, ಮುಳುಗುಂದ, ಮಾಮನಿ, ಸಿಂಪಿ ಮುಂತಾದ ಪ್ರಾಧ್ಯಾಪಕರ ನಂತರ ಸುಮಾರು ವರ್ಷಗಳ ನಂತರ ಮಹಾವಿದ್ಯಾಲಯದಲ್ಲಿ ಪುಸ್ತಕಗಳು ಲೋಕಾರ್ಪಣೆಯಾಗಿರಲಿಲ್ಲ. ಡಾ. ಪ್ರಕಾಶ ನರಗುಂದವರು ಬಂದ ನಂತರ ತಾವು ವರ್ಷಕ್ಕೊಂದರಂತೆ ಕೃತಿಗಳನ್ನು ಬರೆದು ಪ್ರತಿ ವರ್ಷಕ್ಕೊಮ್ಮೆ ಬಿಡುಗಡೆಗೊಳ್ಳುತ್ತಿರುವುದು ಸಂತೋಷದ ಸಂಗತಿ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಎನ್. ಎಸ್. ಪೋಲೇಸಿ ಅವರು ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ ನರಗುಂದ ಅವರು ಮಾತನಾಡುತ್ತ ಕನ್ನಡ, ಕನ್ನಡಿಗ, ಕರ್ನಾಟಕ ಈ ಮೂರು ವಿಷಯಗಳ ಮೇಲೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾಗಿದೆ. ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿ ದಿನವೂ ಕೂಡ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನವಿರಬೇಕಾಗಿದೆ. ಕರ್ನಾಟಕ ಏಕೀಕರಣಕ್ಕೆ ದುಡಿದ ಅನೇಕ ಸಾಹಿತಿಗಳ ಬಗ್ಗೆ ಸ್ಮರಣೆ ಮಾಡುವುದು ಅತಿ ಅವಶ್ಯಕ ಎಂದರು.
ಕಾರ್ಯಕ್ರಮದ ವೇದಿಕೆ ಮೇಲೆ ಡಾ. ಎಂ ಆಯ್ ಬಿರಾದಾರ, ಡಾ. ಎ ಎ ಮುಲ್ಲಾ, ಎಚ್. ಜಿ. ಪಾಟೀಲ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಕುಮಾರ ಸಂಗಮೇಶ ರಾಥೋಡ, ವಂದನಾರ್ಪಣೆ ಕುಮಾರಿ ಶ್ವೇತಾ ಬಿರಾದಾರ ಕಾರ್ಯಕ್ರಮ ನಿರೂಪಣೆಯನ್ನು ಕುಮಾರ ಎಂ ಎ ಓಕಳಿ ಮಾಡಿದರು.

