spot_img
spot_img

ಓದಿಗೆ ಮಾನವೀಯತೆ ಸ್ಪರ್ಶ ಇರಲಿ: ಕೊನೆಸಾಗರ

Must Read

spot_img
- Advertisement -

ಹುನಗುಂದ: ಇಂದಿನ ಯುವ ಜನಾಂಗ ತೋರಿಕೆಯ ಮೋಹದ ಬಲೆಯಲ್ಲಿ ಸಿಲುಕಿದೆ. ಅವರು ನೈತಿಕ ಮತ್ತು ಮಾನವೀಯ ಮೌಲ್ಯಗಳಿಂದ ವಿಮುಖರಾಗುತ್ತಿದ್ದಾರೆ. ಇದು ತುಂಬಾ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪಿ.ಬಿ.ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಹೇಳಿದರು.

ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಓದಿಗೆ ನಾಗರಿಕ ಮತ್ತು ಮಾನವೀಯತೆಯ ಸ್ಪರ್ಶ ಬೇಕು. ಪಾಲಕರು ಆಕಾಂಕ್ಷೆ ಹಾಗೂ ಶಿಕ್ಷಕರ ಭರವಸೆಗೆ ಚ್ಯುತಿ ಬರದಂತೆ ಕಲಿಕೆ ಇರಲಿ ಎಂದರು.

ಸಿಡಿಸಿ ಉಪಾಧ್ಯಕ್ಷ ಮಹಾಂತೇಶ ಪರೂತಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯೆ ರೇಖಾ ಬ್ಯಾಳಿ ಮಾತನಾಡಿದರು. ಸದಸ್ಯ ಚಂದ್ರಶೇಖರ ಚಟ್ನಿಹಾಳ, ಹುಚ್ಚೇಶ ಕಾಳಹಸ್ತಿಮಠ ಮತ್ತು ರವಿ ಹಳಪೇಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿ ವಾಹಿದ್ ಕಡಿವಾಲ, ವಿಜಯಲಕ್ಷ್ಮಿ ಉಪನಾಳ ಮತ್ತು ಉಪನ್ಯಾಸಕಿ ಛಾಯಾ ಪುರಂದರೆ ಅನಿಸಿಕೆ ಹೇಳಿದರು.

- Advertisement -

ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಸ್ವಾಗತಿಸಿದರು. ಶ್ರೀಧರ ಕಾವಲಿ ವಂದಿಸಿದರು. ಎಚ್.ಟಿ.ಅಗಸಿಮುಂದಿನ ವಾರ್ಷಿಕ ವರದಿ ಓದಿದರು. ಐ.ಎಚ್. ನಾಯಿಕ ಮತ್ತು ವಿದ್ಯಾ ಬೀಳಗಿ ನಿರೂಪಿಸಿದರು. ಸೇವಂತಿ ಬೆಣಗಿ ಪ್ರಾರ್ಥಿಸಿದರು. ಕಾರ್ಯಕ್ರಮ ಮುನ್ನ ಸರಸ್ವತಿ ಪೂಜೆ ನಡೆಯಿತು.
.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group