ಸಿಂದಗಿ: ಮಂಡಲ ಪಂಚಾಯತಿಯಿಂದ ಎಂಎಲ್‍ಎ ಆಗುವವರೆಗೆ ರಾಜಕಾರಣದ ಅನುಭವ ಉಳ್ಳ ಮಾಜಿ ಶಾಸಕ ರಮೇಶ ಭೂಸನೂರ ಅವರು ರೂ 125 ಕೋಟಿಗಳ ಬಳಕೆಯನ್ನು ದಾಖಲೆ ಸಹಿತ ಪ್ರಚುರಪಡಿಸಿ ಎಂದು ಸವಾಲ ಹಾಕಿದ್ದು ಸ್ವಾಗತಿಸುತ್ತೇನೆ. ಪ್ರತಿಯೊಂದು ವಿಷಯದಲ್ಲಿ ಬಿಜೆಪಿ ಜನರಿಗೆ ಸುಳ್ಳು ಹೇಳುತ್ತ ರಾಜಕಾರಣ ಮಾಡಿದೆ ಈ ನಾಟಕದಿಂದ ಹೊರ ಬಂದು ಈ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸಲು ಮಾರ್ಗದರ್ಶನ ಕೊಡಿ ವಿನಾಕಾರಣ ಜನರಲ್ಲಿ ತಪ್ಪು ಸಂದೇಶ ನೀಡುವುದು ಸರಿಯಲ್ಲ ಅದು ನಿಮ್ಮತನಕ್ಕೆ ಗೌರವ ತರುವುದಲ್ಲ ಎಂದು ಶಾಸಕ ಅಶೋಕ ಮನಗೂಳಿ ಚಾಟಿ ಬಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಅಧಿಕಾರದಲ್ಲಿ ರೂ. 220 ಸಾವಿರ ಕೋಟಿಗಳ ದುಡ್ಡಿಲ್ಲದೆ ಟೆಂಡರ ಕರೆದು ಹೊರೆ ತಂದಿದ್ದಾರೆ ಅದರಿಂದ ಅಭಿವೃದ್ಧಿಗೆ ಅನುದಾನದ ಕೊರತೆಯಾಗಿದೆ ವಿನಃ ಈ ಗ್ಯಾರೆಂಟಿಗಳಿಂದಲ್ಲ. ಮೊನ್ನೆ ನಡೆದ ಬಜೆಟ್‍ನಲ್ಲಿ ಆರ್ಥಿಕ ತಜ್ಞರೆಂದು ಬಿರುದು ಹೊಂದಿದ ಸಿಎಂ ಸಿದ್ದರಾಮಯ್ಯನವರು 5 ಗ್ಯಾರೆಂಟಿಗಳಿಗೆ ರೂ. 5866 ಕೋಟಿಗಳನ್ನು ಮೀಸಲಿಟ್ಟು ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಸಾಮಾಜಿಕ ನ್ಯಾಯದಡಿ ಇಡೀ ದೇಶದಲ್ಲೇ ಮಾದರಿಯಾಗುವಂತೆ ಅನುದಾನ ವಿಂಗಡಣೆ ಮಾಡಿದ್ದಾರೆ. ಅಲ್ಲದೆ ಈ 5 ಗ್ಯಾರೆಂಟಿಗಳಿಂದ ಜನತೆ ಸಂತೋಷ ಪಟ್ಟಿದ್ದಾರೆ ಇದು ಒಂದೇ ಪಕ್ಷಕ್ಕೆ ಸಿಮೀತವಾಗುವಂತೆ ಯೋಜನೆ ರೂಪಿಸಿಲ್ಲ ಎಲ್ಲರು ಈ ಯೋಜನೆಯ ಫಲಾನುಭವಿಗಳೇ ಇದನ್ನು ಅರಿಯದ ಬಿಜೆಪಿಗರು ಸಹಿಸಲಿಕ್ಕಾಗದೆ ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಜನರಲ್ಲಿ ತಪ್ಪ ಸಂದೇಶ ನೀಡಲು ಮುಂದಾಗಿದೆ ಇದನ್ನು ಪ್ರಜ್ಞಾವಂತ ಜನತೆ ಅವಲೋಕನ ಮಾಡುತ್ತಿದೆ. ಕೊರವಾರ ಬ್ಯಾಂಚ್ ನಿರ್ಮಾಣಕ್ಕೆ ರೂ.99.ಕೋಟಿ 66 ಲಕ್ಷ ಮಂಜೂರಾಗಿದೆ ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ. ಲೋಕಸಭಾ ಚುನಾವಣೆಯ ನಂತರ ಗ್ಯಾರೆಂಟಿಗಳು ವಾರಂಟಿಯಾಗುತ್ತವೆ ಎಂದು ಹೇಳಿಕೆ ನೀಡಿದ್ದು ಹಾಸ್ಯಾಸ್ಪದವಾಗಿದೆ ಎಂದರು.
ಬರೀ 9 ತಿಂಗಳ ಅವಧಿಯಲ್ಲಿ ರೂ. 236 ಕೋಟಿ ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿದ್ದೇನೆ ಅವರ ಅವಧಿಯಲ್ಲಿನ ಅನುದಾನ ಎನ್ನುವುದು ಸಾಬೀತು ಪಡಿಸಬೇಕು ಎಂದು ಸವಾಲು ಎಸೆದ ಅವರು, ಕೆರೂರ, ಬಂಟನೂರ, ಗುತ್ತರಗಿ, ಹಂಚಿನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಸೇರ್ಪಡೆ ಮಾಡಿದ್ದು ತಾವು ಎಂದು ಹೇಳುತ್ತಿರುವ ಅವರು ಆದೇಶ ಏಕೆ ಮಾಡಿಸಲಿಲ್ಲ. ನಾನು ದಿನಾಂಕ ಸಮೇತ ಪ್ರಚುರ ಪಡಿಸಿದ್ದೇನೆ. ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಮಂಜೂರು ಆಗಿದ್ದು ಅದನ್ನು ಬೇಗ ಪ್ರಾರಂಭಿಸಿ ಎನ್ನುವ ಮಾರ್ಗದರ್ಶನ ನೀಡಲಿ ಅದನ್ನು ಸ್ವಾಗತಿಸುತ್ತೇನೆ ಆದರೆ ಮಾಜಿ ಶಾಸಕ ರಮೇಶ ಭೂಸನೂರ ಅವರಿಗೆ ಮಂಜುರಾಗಿದ್ದು ಅಸಮಾದಾನವಾಗಿದೆ. ನೆನೆಗುದಿಗೆ ಬಿದ್ದ ಮಿನಿ ವಿಧಾನಸೌದಾಕ್ಕೆ ತಮ್ಮ ಸರಕಾರದಲ್ಲಿ ಇನ್ನೂ ರೂ. 5 ಕೋಟಿ ಮಂಜೂರ ಪಡಿಸಬಹುದಿತ್ತಲ್ಲ ಹಾಗೆ ಏಕೆ ಮಾಡಲಿಲ್ಲ. ಸಿಂದಗಿ ಪುರಸಭೆ 5 ಸಾವಿರ ಮನೆ, ಆಲಮೇಲ ಪಪಂಗೆ 2 ಸಾವಿರ ಮನೆಗಳನ್ನು ತಂದಿದ್ದೇನೆ ಎನ್ನುವ ದಾಖಲೆ ನೀಡಲಿ ಎಂದು ಸವಾಲೆಸೆದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಓಬಿಸಿಯ ಮುಖಂಡ ಎಂ.ಎ.ಖತಿಬ, ಶಿವನಗೌಡ ಬಿರಾದಾರ, ವೈ.ಸಿ.ಮಯೂರ, ಸಂದೀಪ ಚೌರ, ಮಹಿಳಾ ಘಟಕ ಅಧ್ಯಕ್ಷೆ ಜಯಶ್ರೀ ಹದನೂರ, ಅರವಿಂದ ಹಂಗರಗಿ, ಮಹ್ಮದಪಟೇಲ ಬಿರಾದಾರ, ರಾಜಶೇಖರ ಕೂಚಬಾಳ, ಹಾಸೀಂ ಆಳಂದ, ಸುರೇಶ ಮಳಲಿ ಇದ್ದರು.