spot_img
spot_img

ಪರಿಸರ ಸಂರಕ್ಷಣೆ ಮಾಡದಿದ್ದರೆ ಮಾನವ ಜನಾಂಗದ ವಿನಾಶ -ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ

Must Read

- Advertisement -

ಪರಿಸರ ರಕ್ಷಿಸದಿದ್ದರೆ ಭವಿಷ್ಯದಲ್ಲಿ ಮಾನವ ಜನಾಂಗ  ವಿನಾಶದತ್ತ ಸಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ನೇತಾಜಿ ಸುಭಾಷ್ ಚಂದ್ರಭೋಸ್ ಸರ್ಕಾರಿ  ಅನಿವಾಸಿ ವಸತಿ ಶಾಲೆಯಲ್ಲಿ  ನಡೆದ  ಶಾರದಾ ಪೂಜಾ ಹಾಗೂ ಎಂಟನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು, ಮನುಷ್ಯನ ಸ್ವಾರ್ಥದಿಂದಾಗಿ ಪರಿಸರದ ಮಾರಣಹೋಮ ನಡೆದಿದೆ. ಹಲವೆಡೆ ಅತಿವೃಷ್ಟಿ, ಮತ್ತೆ ಕೆಲವೆಡೆ ಅನಾವೃಷ್ಟಿ ಉಂಟಾಗಿ ಮಾನವ ಜೀವನ ಅಪಾಯಕ್ಕೆ ಸಿಲುಕಿದೆ. ಕಾಡು ಪ್ರಾಣಿಗಳು ಆಹಾರ, ನೀರು ಅರಸಿ ಗ್ರಾಮಗಳಿಗೆ ಬರುತ್ತಿವೆ. ಇದರಿಂದಾಗಿ  ಜನರು ಅಪಾಯದ ಸುಳಿಗೆ ಸಿಲುಕಿದ್ದಾರೆ.ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪರಿಸರ ನಾಶದಿಂದ ನಾವು ಸೇವಿಸುವ ಗಾಳಿಯೂ ಸಹ ಕಲುಷಿತವಾಗಿದೆ.ಇದರಿಂದಾಗಿ ಮಾನವನಿಗೆ ಹಲವು ಸಾಂಕ್ರಾಮಿಕ ರೋಗಗಳು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮಕ್ಕಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಮನಗಾಣ ಬೇಕು. ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು, ತಮ್ಮ ತಂದೆ,ತಾಯಿಯ ಜನ್ಮದಿನದಂದು, ಹಿರಿಯರ ವಿವಾಹ ವಾರ್ಷಿಕೋತ್ಸವ ದಿನದಂದು, ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನೆಡಬೇಕು. ಆ ಮೂಲಕ ಪರಿಸರ ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಭೇರ್ಯ ರಾಮಕುಮಾರ್ ಕಿವಿಮಾತು ನುಡಿದರು.

- Advertisement -

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಕೃಷ್ಣ ಅವರು ಮಾತನಾಡಿ, ಮಕ್ಕಳು ಜೀವನದಲ್ಲಿ ಅತಿ ದೊಡ್ಡ ಕನಸುಗಳನ್ನು ಹೊಂದ ಬೇಕು. ಅವುಗಳ ಈಡೇರಿಕೆಗೆ ನಿರಂತರ ಶ್ರಮ ಪಡಬೇಕು.ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು.ಗುರು ಹಿರಿಯರಲ್ಲಿ ಗೌರವ ಹೊಂದಿರಬೇಕು. ಆಶೆ ಆಮಿಷಗಳಿಗೆ ಬಲಿಯಾಗದೆ ವಿದ್ಯಾರ್ಥಿ ಜೀವನವನ್ನು ಬದುಕಿನ ಯಶಸ್ಸಿನತ್ತ ಸಾಗಲು ಬಳಸಿಕೊಳ್ಳಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.

ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಅಶ್ವಿನಿ ಅವರು ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿ ಹೊಂದಿರಬೇಕು. ಆ ಗುರಿಯ ಸಾಧನೆಗೆ ನಿರಂತರ ಯತ್ನ ನಡೆಸಬೇಕು.ಒಮ್ಮೆ ವಿಫಲರಾದರು ಮತ್ತೆ ಸಾಧನೆಗೆ ಮರು ಯತ್ನ ನಡೆಸಬೇಕು. ಆಗ ಮಾತ್ರ ಅವರು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ನುಡಿದರು.

ನೇತಾಜಿ ಅನಿವಾಸಿ ವಸತಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ನಾಗರತ್ನ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಜೀವನದಲ್ಲಿ ಶಿಸ್ತು ಹಾಗೂ ಪ್ರಾಮಾಣಿಕತೆ ಅಳ ವಡಿಸಿಕೊಳ್ಳಬೇಕು.ಆಗ ಮಾತ್ರ ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದು ಕರೆ ನೀಡಿದರು.

- Advertisement -

ಶಿಕ್ಷಕಿ ಭವಾನಿ ಸ್ವಾಗತಿಸಿದರು.ನಿವೃತ್ತ ಪ್ರಿನ್ಸಿಪಾಲರಾದ  ಪುರಂದರ, ಪವನ್, ಸುನಿಲ್, ಹೇಮಾವತಿ, ಕೃಷ್ಣ ವೇದಿಕೆಯಲ್ಲಿ  ಉಪಸ್ಥಿತರಿದ್ದರು.

ನೇತಾಜಿ ಅನಿವಾಸಿ ಶಾಲೆಯ ಶಿಕ್ಷಕರಾದ ಲೀಲಾವತಿ,ಚಂದ್ರಿಕಾ,ಕಲ್ಪನಾ, ಜಗದಾಂಬ, ಅಶಾರಾಣಿ,ಯಶೋದಾ,ರೋಷನ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥತರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group