spot_img
spot_img

ಚಿತ್ರ ಕಲಾವಿದೆ ಪ್ರೀತಿ ಹೆಚ್.ಪಿ. ಅವರ ಪ್ರಕೃತಿ ಚಿತ್ರಣ

Must Read

- Advertisement -

ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಚಿತ್ರಕಲೆಯ ಸವಿಯ ಸವಿದವನಿಗೇ ಗೊತ್ತು. ಸಮುದ್ರದ ದಡದಲ್ಲಿ ನಿಂತು ಒಂದು ಬೊಗಸೆ ಸಮುದ್ರದ ನೀರನ್ನು ಎತ್ತಿ ಹಿಡಿದು ನೋಡಿ ನನ್ನ ಬೊಗಸೆಯಲ್ಲ್ಲಿಇರುವುದೇ ಇದೇ ಸಮುದ್ರ ಎಂದು ಕೂಗಿಕೊಂಡಂತೆ.  ಹೀಗೆ ಚಿತ್ರಕಲೆಯ ಆಳ ಆಗಲ ವಿಸ್ತಾರವಾದುದು. ಸಾಗರದಾಳದಲ್ಲಿ ತಿಮಿಂಗಲಗಳು ಇರುವಂತೆಯೇ ಮೀನುಮರಿಗಳು ಇರುತ್ತವೆಯಷ್ಟೇ. ಅಪೂರ್ವ ಚಿತ್ರಕಲಾ ಜಗತ್ತಿನಲ್ಲಿ ಹಾಸನದ ಚಿತ್ರ ಕಲಾವಿದೆ  ಪ್ರೀತಿ  ಹೆಚ್ ಪಿ  ಅವರು ಕಲೆಯ ತಿಮಿಂಗಿಲಗಳ ಸಾಗರದಲ್ಲಿ ಈಜಲು ಹೊರಟ ಸಾಹಸಿ ಮೀನು.

ಕಲಾವಿದೆ ಪ್ರೀತಿ ಹೆಚ್. ಪಿ. ರವರು ಪುಟ್ಟಸ್ವಾಮಿ ರತ್ನ ದಂಪತಿಗಳ ಮಗಳಾಗಿ ಡಿಸೆಂಬರ್ 14ರಂದು ಹಾಸನ ತಾಲೂಕಿನಲ್ಲಿ ಜನಿಸಿದ್ದು ಬಾಲ್ಯದಿಂದಲೂ ಚಿತ್ರ ಕಲೆಯ ಬಗ್ಗೆ ಅಪಾರ ಆಸಕ್ತಿ ಮತ್ತು  ಪ್ರೀತಿ ಉಳ್ಳವರು. ತಮ್ಮ ಪ್ರಾಥಮಿಕ  ಪ್ರೌಢಶಾಲೆ ಯನ್ನು ಹಾಸನ ತಾಲೂಕಿನಲ್ಲಿ ಮುಗಿಸಿ ತದನಂತರ ಚಿತ್ರಕಲಾ ಅಭ್ಯಾಸಕ್ಕಾಗಿ ಹಾಸನದ ಶಾಂತಲಾ ಚಿತ್ರಕಲಾ ಶಾಲೆಗೆ ಸೇರಿ ತಮ್ಮ ಡಿಪ್ಲೊಮೊ ಪದವಿಯನ್ನು  ಪೂರ್ಣ ಗಳಿಸುತ್ತಾರೆ. ಕಲಾ ಕ್ಷೇತ್ರದಲ್ಲಿ  ಅಪಾರ ಆಸಕ್ತಿ ಉಳ್ಳವರಾಗಿ  ಶಿಕ್ಷಣದ ಸಮಯದಲ್ಲಿ  ಅನೇಕ ವಿಷಯಗಳು ಮಾದ್ಯಮ ತಂತ್ರಗಾರಿಕೆಯ ಬಗ್ಗೆ  ಉಪನ್ಯಾಸಕರಿಂದ ಜ್ಞಾನ ವನ್ನು ಪಡೆಯುತ್ತಾರೆ.  ಜಲವರ್ಣ ತೈಲವರ್ಣ ಅಕ್ರಿಲಿಕ್ ಮಾಧ್ಯಮವನ್ನು ಸುಲಲಿತವಾಗಿ ಬಳಸುವ ಇವರ ಕೈಚಳಕ ದಿಂದ ಅನೇಕ  ಸಂಪ್ರದಾಯ ಚಿತ್ರಗಳು, ಭಾವಚಿತ್ರಗಳು ,  ಪ್ರಾಣಿಪಕ್ಷಿ , ಅಲಂಕಾರಿಕ ಚಿತ್ರಗಳು ಮತ್ತು ಆನೇಕ ಚಿತ್ರಕಲಾಕೃತಿಗಳು ಮೂಡಿಬಂದಿದೆ. ಇವುಗಳಲ್ಲಿ ಪ್ರಕೃತಿ ಚಿತ್ರ ಕಲಾಕೃತಿಗಳು ನೈಜವಾಗಿ ಚಿತ್ರಿಸುವ ಮೂಲಕ ಅದರ ಅಂದವನ್ನು ಮತ್ತು ಆಕರ್ಷಣೆಯನ್ನು ಹೆಚ್ಚುಗೊಳಿಸುವ ಕುಶಲ ಕಲೆಗಾರಿಕೆಯಲ್ಲಿ ಹಿಡಿತ ಸಾಧಿಸುವಲ್ಲಿ ಇವರ ಗಮನ ಕೇಂದ್ರೀಕೃತ. ಇವರು ಈ ಕಲಾಕೃತಿಗಳಲ್ಲಿ ಬಳಸುವ ಬಣ್ಣಗಳ ಬಳಕೆ ಮಿಶ್ರ ಬಣ್ಣಗಳ ಹೊಂದಾಣಿಕೆಯು ಇವರ ಚಿತ್ರವನ್ನು ಇವರ ಚಿತ್ರಗಳ ಅಂದವನ್ನು ಹೆಚ್ಚಿಸಿ   ನೋಡುಗನನ್ನು ಮತ್ತಷ್ಟು ಮುದ ನೀಡುವುದರ ಜತೆಗೆ ಒಂದು ಸುಂದರ  ಚಿತ್ರ ಲೋಕದ ಅನುಭವ ನೀಡುತ್ತದೆ. ಪ್ರಾರಂಭದ ದಿನಗಳಲ್ಲಿ ಚಿತ್ರಕಲಾ ಕ್ಷೇತ್ರ ಕಲಾವಿದೆಗೆ ಹೊಸದೆಂದು ತೋರಿದರು ತದನಂತರದ ದಿನಗಳಲ್ಲಿ ತಮ್ಮ ಹೊಸ ಹೊಸ ಆಲೋಚನೆ ಪ್ರಾಯೋಗಿಕ ಚಿಂತನೆಗಳಿಂದಾಗಿ ತಮ್ಮ ಕಲಾಪ್ರೌಢಿಮೆಯನ್ನು ಬೆಳೆಸಿಕೊಂಡಿದ್ದಾರೆ.

- Advertisement -



ಇವರಿಗೆ ತಮ್ಮ ಕಲಾ ವಿದ್ಯಾರ್ಥಿ ಜೀವನದಲ್ಲಿ ಬೋಧಿಸಲ್ಪಡುವ ವಾಸ್ತು ಚಿತ್ರಣ, ಪ್ರಕೃತಿ ಚಿತ್ರಣ, ಸ್ಮರಣ ಚಿತ್ರಣ ಮುಂತಾದ ವಿಷಯಗಳಲ್ಲಿ ಅತೀವ ಆಸಕ್ತಿ ಮತ್ತು ಶ್ರದ್ಧೆ ಇದ್ದ ಕಾರಣ ಮೂಲ ವಿಷಯಗಳಲ್ಲಿ ಹೆಚ್ಚಿನ ಗ್ರಹಿಕೆ ತಮ್ಮ ಮುಂಬರುವ ಬೆಳವಣಿಗೆಗೆ ಪೂರಕ ಎಂಬುದನ್ನು ಪ್ರೀತಿ ಅರಿತಿದ್ದಾರೆ. ಅದುದರಿಂದ ಶಿಕ್ಷಕರಾಗಿ ಮಕ್ಕಳಿಗೆ ಬೋಧಿಸುವ ಸಂದರ್ಭದಲ್ಲಿ ಸಹ ಮಕ್ಕಳಿಗೆ ಈ ಅಂಶವನ್ನು ಮನದಟ್ಟು ಮಾಡಿಕೊಡುತ್ತಾರೆ.

     

ವೈಯಕ್ತಿಕವಾಗಿ ಸೌಮ್ಯ ಮತ್ತು ಮುಜುಗರದ ಸ್ವಭಾವ ಉಳ್ಳವವಾದುದ್ದರಿಂದ ತಮ್ಮಷ್ಟಕ್ಕೆ ತಾವು ಕಲಾಕೃತಿಯನ್ನು ರಚಿಸುತ್ತಾ ತಾವೇ ಕಲಾಕೃತಿಯ ಭಾವನಾತ್ಮಕ ಅನುಭವವನ್ನು ಪಡೆಯುತ್ತಾ ಸಂತೃಪ್ತರಾಗುವುದಾಗಿ ತಿಳಿಸುತ್ತಾರೆ. ಆದರೆ ಕಲಾಕೃತಿಗಳು ಈಗಿನ ಸಂದರ್ಭದಲ್ಲಿ ತಮ್ಮಗಷ್ಟಕ್ಕೆ ಅಲ್ಲದೆ ಸಮಾಜದ ಜೊತೆ ಬೆರೆತು ಸಾಮಾಜಿಕ ಅಂಕುಡೊಂಕುಗಳನ್ನು ಸರಿಪಡಿಸುವ ಜವಾಬ್ದಾರಿಯು ಕಲಾವಿದರದ್ದಾಗಿರುತ್ತದೆ. ಕಾರಣ ಪ್ರತಿ ಕಲಾವಿದನು ತನ್ನ ಕಲಾಕೃತಿಗಳಲ್ಲಿ ಸಾಮಾಜಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವೆನ್ನುತ್ತಾರೆ ನನಗೆ ಮೇಡಂ ಬಗ್ಗೆ ಮಾಹಿತಿ ಒದಗಿಸಿದ ಕಲಾವಿದ ಚಂದ್ರಕಾಂತ್ ನಾಯರ್.   

- Advertisement -

ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಚಿತ್ರಕಲಾ ಮೇಳಗಳು ಮತ್ತು ಚಿತ್ರಕಲಾ ಪ್ರದರ್ಶನ ಸ್ಪರ್ಧೆಗಳಲ್ಲಿ ಬಾಗವಹಿಸಿ ಅನೇಕ  ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ.   ಚಿತ್ರಕಲೆ ಅಲ್ಲದೆ ರಂಗಮಂಟಪ ಅಲಂಕಾರ ಮತ್ತು  ವಿವಾಹ ಶುಭ ಸಮಾರಂಭ ಗಳಿಗೆ ಅಲಂಕಾರಿಕವಾಗಿ ಕೊಬ್ಬರಿ ಕೆತ್ತನೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ವಿಶೇಷ. ಈ ಕರಕುಶಲ ಕಲೆಗೆ  ಬೇಕಾದ ತಾಳ್ಮೆ ಈ ಕೊಬ್ಬರಿ ಕೆತ್ತನೆ ಕೆಲಸಕ್ಕೆ ಅಗತ್ಯ. ಅದು ಮೇಡಂ ಅವರಿಗಿದೆ.

ಕಲಾಕ್ಷೇತ್ರ ದಲ್ಲಿ ತಾವು ಬೆಳೆಯುವುದಲ್ಲದೆ ಜೊತೆಗೆ ತಮ್ಮ ಕಲೆಯನ್ನು ಬೆಳೆಸುವ ಉದ್ದೇಶ ಹೊಂದಿದ್ದಾರೆ. ನಗರದ ಅನೇಕ  ಪ್ರತಿಷ್ಠಿತ ಶಾಲೆಗಳಲ್ಲಿ ಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಾ ಸಾವಿರಾರು ಮಕ್ಕಳಿಗೆ ಅವರಲ್ಲಿನ ಆಸಕ್ತಿ ಮತ್ತು ಕೌಶಲ್ಯ ಬೆಳವಣಿಗೆಗೆ  ಉತ್ತೇಜನ ನೀಡುವುದರ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣ  ಪೂರೈಸುವಲ್ಲಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ನಗರದ  ಎಸ್ ಆರ್ ಎಸ್ ಪ್ರಜ್ಞಾ ಶಾಲೆಯಲ್ಲಿ ಕಲಾಶಿಕ್ಷಕಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಗೊರೂರು ಅನಂತರಾಜು, ಹಾಸನ. 

ಮೊ: 9449462879.

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group