spot_img
spot_img

ಇಂಡಿ ಜಿಲ್ಲೆ ಮಾಡಲು ಜನಾಭಿಪ್ರಾಯ ಸಭೆ: ಸಿಂದಗಿ ಜಿಲ್ಲೆಗೆ ಹೆಚ್ಚಿನ ಒಲವು

Must Read

spot_img
- Advertisement -

ಸಿಂದಗಿ: ಕಂದಾಯ ಇಲಾಖೆಯ ಸೆಕ್ರೆಟೆಡ್ ಆಫೀಸಿನ ಉಲ್ಲೇಖದ ಮೇರೆಗೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕೆನ್ನುವ ಜನಾಭಿಪ್ರಾಯ ಸಂಗ್ರಹ ಮಾಡಲು ಸಭೆ ಕರೆಯಲಾಗಿದೆ.

ಅದಕ್ಕೆ ಸಾಧಕ ಬಾಧಕಗಳನ್ನು ಚರ್ಚಿಸಿ ಅಭಿಪ್ರಾಯ ಮಂಡಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಕಾರಣ ಜ.10ರ ಒಳಗಾಗಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು ಎಂದು ಇಂಡಿ ಉಪವಿಬಾಗಾಧಿಕಾರಿ ಚಂದ್ರಕಾಂತ ಗದ್ಯಾಳ ಹೇಳಿದರು.

ಪಟ್ಟಣದ ತಾಪಂ ಸಭಾ ಭವನದಲ್ಲಿ ನಡೆದ ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಕರೆದ ಜನಾಭಿಪ್ರಾಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

- Advertisement -

ಶಾಸಕ ಅಶೋಕ ಮನಗೂಳಿ ಮಾತನಾಡಿ, ಸರಕಾರದಿಂದ ಬಂದ ವರದಿಯ ಬಗ್ಗೆ ಯಾರಿಗೂ ಸಂಪರ್ಕ ಮಾಡಿಲ್ಲ. ಹಿಂದೆ ಅಖಂಡ ಜಿಲ್ಲೆಯಲ್ಲಿ 15 ತಾಲೂಕುಗಳಿದ್ದವು ಬಾಗಲಕೋಟ ಪ್ರತೇಕ ಜಿಲ್ಲೆಯಾಗಿರುವುದರಿಂದ ಅಭಿವೃದ್ಧಿ ಕುಂಟಿತವಾಗಿತ್ತು ಜೆ.ಎಚ್.ಪಟೇಲ, ಎಚ್.ಡಿ.ಕುಮಾರಸ್ವಾಮಿಯವರು ಮತ್ತೆ ಹಲವು ತಾಲೂಕುಗಳನ್ನು ರಚನೆ ಮಾಡಿರುವುದರಿಂದ ಈ ಜಿಲ್ಲೆಗೆ 13 ತಾಲೂಕುಗಳಾಗಿವೆ ಇವುಗಳಲ್ಲಿ ನೀರಾವರಿ, ರಾಷ್ಟ್ರೀಯ ಹೆದ್ದಾರಿಯಿಂದ ನಾಲ್ಕು ರಾಜ್ಯಗಳ ಸಂಪರ್ಕಕೊಂಡಿಯಾಗಿದೆ ಅದರಲ್ಲೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ, ತುಲನಾತ್ಮವಾಗಿ ನೋಡಿದಾಗ ತಾಲೂಕುಗಳಿಗಿಂತ ಸಿಂದಗಿ ತಾಲೂಕು ಮುಂದಿದೆ ಅದಕ್ಕೆ ಎಸ್ಸಿ, ಡಿವೈಎಸ್ಪಿ, ಆರ್‍ಟಿಓ ಆಫೀಸ್‍ಗಳನ್ನು ಮಂಜೂರು ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ ಆ ಕಾರಣಕ್ಕೆ ಸಿಂದಗಿ ಜಿಲ್ಲೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಅಭಿಮತ ವ್ಯಕ್ತಪಡಿಸಿದರು.  

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಈ ಹಿಂದೆ ಜಿಲ್ಲೆ, ತಾಲೂಕು ರಚನೆಯ ಮಾಡುವಲ್ಲಿ ನಂಜುಂಡಪ್ಪ ಸಮಿತಿ ವರದಿಯಂಥ ಕೆಲವು ಮಹನೀಯರ ಸಮಿತಿಗಳ ವರದಿಗಳನ್ನು ಆಧಾರವಾಗಿಟ್ಟುಕೊಂಡು ಹಲವಾರು ಜನಾಭಿಪ್ರಾಯಗಳನ್ನು ಕ್ರೂಢೀಕರಿಸಿ ಸರಕಾರ ಮಟ್ಟದಲ್ಲಿ ಚರ್ಚಿಸಿ ರಚನೆ ಮಾಡಿದ್ದಾರೆ ಅದ್ಯಾವ ಸಮಿತಿಗಳ ವರದಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಒಮ್ಮೆಲೆ ಜಿಲ್ಲಾ ಕೇಂದ್ರವಾಗಿಸುವ ಅಭಿಪ್ರಾಯ ಕ್ರೂಢೀಕರಣಕ್ಕೆ ಮುಂದಾಗಿರುವುದು ಅಸಂವಿಧಾನಿಕವಾಗಿದೆ.  ಪ್ರತೇಕ ಜಿಲ್ಲೆ ಮಾಡಲು ಮುಂದಾದರೆ ಸಿಂದಗಿಯು ಭೌಗೋಳಿಕವಾಗಿ ಎಲ್ಲದರಲ್ಲಿಯೂ ಮುಂದಿದೆ. ಕಾರಣ ಸಿಂದಗಿಗೆ ಮೊದಲ ಆದ್ಯತೆ ನೀಡಬೇಕೆನ್ನುವ ಚರ್ಚಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದರು.

ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿ, ಈ ಹಿಂದೆ 4 ತಾಲೂಕುಗಳನ್ನು ಸೇರಿಸಿ ಜಿಲ್ಲೆ ಮಾಡಿದ ಉದಾಹರಣೆಯಿದೆ ಈ ತಾಲೂಕಿನಿಂದ ಮೂರು ತಾಲೂಕುಗಳು ವಿಂಗಡಣೆಯಾಗಿವೆ ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ, ತಾಳಿಕೋಟಿ ನಾಲ್ಕು ತಾಲೂಕುಗಳು. ಇದು ತಾರ್ಕಿಕ ಹಂತದವರೆಗೆ ಹೋಗಲಿ. ಸಿಂದಗಿ ಅಭಿವೃದ್ಧಿ ಆಗುವವರೆಗೂ ನಾವ್ಯಾರು ನಿಲ್ಲುವುದು ಬೇಡ. ನಾವೆಲ್ಲರೂ ಸಿಂದಗಿಯನ್ನು ಜಿಲ್ಲೆಯಾಗಬೇಕು ಎಂಬ ಕೂಗನ್ನು ಗಟ್ಟಿಯಾಗಿ ದ್ವನಿ ಸರಕಾರಕ್ಕೆ ಮುಟ್ಟುವರೆಗೂ ನಡೆಯಬೇಕು ಎಂದು ಹೇಳಿದರು. 

- Advertisement -

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಸಿಂದಗಿ ಜನಸಂಖ್ಯೆಯಲ್ಲೂ ಸಿಂದಗಿ ಮುಂದಿದೆ. ವಿವಿಧ ತಾಲೂಕುಗಳನ್ನು ಪರಿಗಣಿಸಿದರೆ ಸಿಂದಗಿಯೇ ಪ್ರಮುಖ ಸ್ಥಾನದಲ್ಲಿದೆ. ಅದಕ್ಕೆ ಸಿಂದಗಿ ಜಿಲ್ಲೆಯಾಗುವ ಎಲ್ಲ ಅರ್ಹತೆಗಳಿವೆ ಎನ್ನುವ ವರದಿಗಳನ್ನು ಸರಕಾರಕ್ಕೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಸಿಎಂ ಮತ್ತು ಡಿಸಿಎಂ ಅವರ ಮೇಲೆ ಒತ್ತಡ ತರುವ ಕಾರ್ಯ ನಾವೆಲ್ಲರೂ ಸೇರಿ ಮಾಡೋಣ. ಎಂದು ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಹ.ಮ.ಪೂಜಾರಿ, ಸಾಹಿತಿ ಡಾ.ಎಂ.ಎಂ.ಪಡಶೇಟ್ಟಿ, ವೈ.ಸಿ.ಮಯೂರ, ಡಾ.ದಸ್ತಗೀರ ಮುಲ್ಲಾ, ರಾಜಶೇಖರ ಕೂಚಬಾಳ,  ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ಅಲ್ಲಾಪುರ, ಶಿಲ್ಪಾ ಕುದರಗೊಂಡ, ಸಂತೋಷ ಮಣಿಗೇರಿ, ಸಾಯಬಣ್ಣ ಪುರದಾಳ, ರಾಕೇಶ ಕಾಂಬಳೆ, ಅಶೋಕ ಸುಲ್ಪಿ ಸೇರಿದಂತೆ ಅನೇಕರು ಮಾತನಾಡಿ, ಸಿಂದಗಿ ತಾಲೂಕು ಜಿಲ್ಲೆಯಾಗುವ ಎಲ್ಲ ಲಕ್ಷಣಗಳಿವೆ. ಸಿಂದಗಿ ಜಿಲ್ಲೆಯನ್ನಾಗಿ ಮಾಡಲು ಬೆಂಗಳೂರು ಮಟ್ಟದವೆರೆಗೂ ಹೋರಾಟ ಮಾಡೋಣ. ಎಲ್ಲ ತಾಲೂಕುಗಳಿಗೂ ಹೋಗಿ ಅಭಿಪ್ರಾಯ ಸಂಗ್ರಹಣೆ ಮಾಡಬೇಕು. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ತಾಪಂ ಇಓ ರಾಮು ಅಗ್ನಿ, ಕಸಾಪ ಅದ್ಯಕ್ಷ ಶಿವಾನಂದ ಬಡಾನೂರ, ಮಾಜಿ ಜಿಪಂ ಉಪಾದ್ಯಕ್ಷ ಸಿದ್ದರಾಮ ಪಾಟೀಲ ವೇದಿಕೆ ಮೇಲಿದ್ದರು.

- Advertisement -
- Advertisement -

Latest News

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲ್ಯಾಪ್‌ಟಾಪ್ ವಿತರಣೆ

ಮೂಡಲಗಿ - ವಿದ್ಯಾರ್ಥಿಗಳಿಗೆ ಕಲಿಯಲು ಇನ್ನಷ್ಟು ಅನುಕೂಲವಾಗಲೆಂದು ಕಿತ್ತೂರು ರಾಣಿ ಚನ್ನಮ್ಮ            ತೋಟಗಾರಿಕಾ ಮಹಾವಿದ್ಯಾಲಯ, ಅರಭಾವಿ, ಸಮಾಜ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group