ಸಿಂದಗಿಯ ಹೈವೇ ರಸ್ತೆಯಿಂದ ಡಾ. ಅಂಬೇಡ್ಕರ್ ವೃತ್ತದ ವರೆಗಿನ ರಸ್ತೆ ದುರಸ್ತಿಗೆ ಗದ್ದುಗೆ ಆಗ್ರಹ

Must Read

ಸಿಂದಗಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೫೦ ರಿಂದ ಪಟ್ಟಣಕ್ಕೆ ತಿರುವು ರಸ್ತೆಯಿಂದ ಬಸ್ ಡಿಪೋ ಮಾರ್ಗದಲ್ಲಿರುವ ನಗರದ ಮುಖ್ಯರಸ್ತೆ ಬಸ್ ನಿಲ್ದಾಣ ದಿಂದ ಡಾ. ಅಂಬೇಡ್ಕರ್ ವೃತ್ತದ ವರೆಗಿನ ಜನಸಾಗರದ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕೆಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಬಿ ಗದ್ದುಗೆ ಆಗ್ರಹಿಸಿದ್ದಾರೆ.

ಪಟ್ಟಣದ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದಾಗ ಕಾರ್ಯಕರ್ತರೊಂದಿಗೆ ಮಾತನಾಡಿ, ಈ ಪರಿಸ್ಥಿತಿಯಲ್ಲಿ ಜನರು ಹೇಗೆ ಇರುತ್ತಾರೆ? ಜನಪ್ರತಿನಿಧಿಗಳು ಇದರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲವಾ?ಎಂದು ಬೇಸರ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ಶಾಸಕರಾಗಲಿ ಇದರ ಬಗ್ಗೆ ಗಮನಹರಿಸಿ ರಸ್ತೆ ದುರಸ್ತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿರುವ ಸಂಘಟನೆಗಳೆಲ್ಲ ಒಂದಾಗಿ ಹೋರಾಟಕ್ಕೆ ಮುಂದಾದರೆ ಮಾತ್ರ ಸಿಂದಗಿ ಅಭಿವೃದ್ಧಿ ಆಗಬಹುದು ಎಂದು ಅಭಿಪ್ರಾಯಪಟ್ಟರು. ಅಲ್ಲಲ್ಲಿ ಬರುವ ವೃತ್ತಗಳ ಬಗ್ಗೆ ಗಮನಹರಿಸಿ ಅವುಗಳಿಗೆ ಸೂಕ್ತ ರಕ್ಷಣೆ ಹಾಗೂ ಅಂದ ಚೆಂದಕ್ಕೆ ಗಮನಹರಿಸಲು ಮನವಿ ಮಾಡಿದರು.

ಕರವೇ ಉ ಕ ಸಂಚಾಲಕ ಸತೀಶ್ ಕೌಲಗಿ ಮಾತನಾಡಿ, ಕಳೆದ ಉಪ ಚುನಾವಣೆಯ ನಂತರ ಶಾಸಕ ರಮೇಶ ಭೂಸನೂರ ಅವರು ಪಟ್ಟಣದ ಬಸವೇಶ್ವರ ವೃತ್ತದಿಂದ ಡಾ. ಅಂಬೇಡ್ಕರ್ ವೃತ್ತ ಹಾಗೂ ಮಹಾತ್ಮಾಗಾಂಧಿ ವೃತ್ತ ವರೆಗೆ ಹಾಗೂ ಡಾ. ಅಂಬೇಡ್ಕರ್ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಯವರೆಗೆ ರಸ್ತೆ ಅಗಲಿಕರಣ ಮತ್ತು ಫೂಟ್ ಪಾತ್ ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಿ ತನಗಟ್ಟಿಕೊಂಡಿರುವ ಕಳಂಕದಿಂದ ದೂರ ಮಾಡುತ್ತೇವೆ ಎಂದು ಹೇಳಿ ಕೆಲ ತಿಂಗಳಗಳೇ ಕಳೆದಿವೆ ಈ ರಸ್ತೆ ಕಾಮಗಾರಿಯ ಬಗ್ಗೆ ಕಿಂಚಿತ್ತು ಗಮನ ಹರಿಸಿಲ್ಲ ಕಾರಣ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ವರ್ಷದ ನಿರ್ವಹಣೆ ವೆಚ್ಚದಲ್ಲಿ ರಸ್ತೆ ದುರಸ್ತಿಗೆ ಮುಂದಾಗಬೇಕು ಇಲ್ಲದಿದ್ದರೆ ಕಛೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Latest News

ಮೂಡಲಗಿ : ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡಾಕೂಟ

ಮೂಡಲಗಿ - ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ...

More Articles Like This

error: Content is protected !!
Join WhatsApp Group