ಗೋಕಾಕ: ದೇಶದಲ್ಲಿ ಅಸಂಖ್ಯಾತ ಸಮುದಾಯಗಳಿದ್ದರೂ ಸಹ ನಾವೆಲ್ಲರೂ ಒಂದೇ ಭಾರತೀಯರು ಎಂಬ ಭಾವನೆ ಮೂಡುವಲ್ಲಿ ಧಾರ್ಮಿಕತೆಯ ಶಕ್ತಿ ಅಡಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ನಲ್ಲಾನಟ್ಟಿ ಗ್ರಾಮದ ಗದಾಡಿ ತೋಟದ ಶ್ರೀ ಕರೆಮ್ಮದೇವಿ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಡಿ ನಿರ್ಮಿಸಿರುವ ಸಮುದಾಯ ಭವನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಯುಗಾದಿ ಹಬ್ಬ ಹಿಂದುಗಳಿಗೆ ಹೊಸ ವರ್ಷದ ಮೊದಲ ದಿನ ಈ ದಿನ ಏನೇ ಕಾರ್ಯ ಮಾಡಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದುಕೊಂಡು ರೈತರು ತಮ್ಮ ಹೊಲಗಳಲ್ಲಿ ನೇಗಿಲು ಹೊಡೆಯುವ ಮೂಲಕ ಮುಂದಿನ ಕೃಷಿ ಕಾರ್ಯ ಚಟುವಟಿಕೆಗಳಿಗೆ ಹೆಜ್ಜೆಯಿಡುತ್ತಾರೆ ಅದೇ ರೀತಿ ಈ ದಿನ ಸಮುದಾಯ ಭವನವನ್ನು ಉದ್ಘಾಟಿಸುವ ಮೂಲಕ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಮದ ಕರೆಮ್ಮಾದೇವಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿರುವುದು ಈ ಭಾಗದ ಭಕ್ತರಿಗೆ ಅನುಕೂಲವಾಗಲಿದೆ. ಇಂತಹ ಮಹತ್ಕಾರ್ಯಕ್ಕೆ ಗ್ರಾಮದ ಜನರು ಕೈಜೋಡಿಸಿ ಶ್ರದ್ದಾಭಕ್ತಿಯಿಂದ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದಾಗ ಮಾತ್ರ ದೇವಸ್ಥಾನದ ಅಭಿವೃದ್ಧಿ ಆಗಲು ಸಾಧ್ಯ ಎಂದರು.
ನಲ್ಲಾನಟ್ಟಿ ಗ್ರಾಮವನ್ನು ಸಂಸದರ ಆದರ್ಶ ಗ್ರಾಮವನ್ನಾಗಿಸಲು ರಸ್ತೆ, ಶೌಚಾಲಯ, ಕುಡಿಯುವ ನೀರು, ಶಾಲೆಗಳಿಗೆ ಮೂಲಭೂತ ಸೌಲಭ್ಯ, ದೇವಸ್ಥಾನಗಳ ಅಭಿವೃದ್ಧಿಗೆ ನೀಡುತ್ತಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ನಲ್ಲಾನಟ್ಟಿ ಗ್ರಾಮವನ್ನು ಜಿಲ್ಲೆಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರ ಸಹಾಯ ಸಹಕಾರ ಅಗತ್ಯವಾಗಿದೆ ಎಂದು ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಈ ಸಂದರ್ಭದಲ್ಲಿ ಕೆಆರ್‌ಐಡಿಎಲ್ ಕಾರ್ಯಪಾಲಕ ಅಭಿಯಂತರಾದ ರೇಣುಜೋತ್ಯಿ ನಾರಾಯಕರ, ದಶರಥ ಪಾಟೀಲ, ಬಸಪ್ಪ ಗದಾಡಿ, ಮುದಕಪ್ಪ ಗದಾಡಿ, ಗಂಗಪ್ಪ ಗದಾಡಿ, ಲಗಮಣ್ಣ ಕುಳ್ಳೂರ, ಮಲ್ಲಪ್ಪ ಪೂಜೇರಿ, ಮಾರುತಿ ಮೆಳವಂಕಿ, ಪ್ರಕಾಶ ಜಾಗನೂರ, ರಂಗಪ್ಪ ಕುಳ್ಳೂರ, ರಾಮಚಂದ್ರ ಕುಳ್ಳೂರ, ದಶರಥ ಗದಾಡಿ, ಪಂಚಾಯತ ಅಭಿವೃದ್ದಿ ಅಧಿಕಾರಿ ಗಣೇಶ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.