ಕಾರ್ಗಿಲ್ ವಿಜಯ ಸ್ಮರಣೆಯಿಂದ ಧೈರ್ಯಪರಂಪರೆಯ ಮುನ್ನಡೆ –   ಸಹ ಕುಲಪತಿ ಫಾ.ಡಾ.ಲಿಜೋ ಪಿ ಥಾಮಸ್ 

Must Read

ಬೆಂಗಳೂರು –  ಭಾರತದ ವೀರಯೋಧರ ಸಾಹಸ, ವಿಜಯ, ತ್ಯಾಗ, ಬಲಿದಾನಗಳನ್ನು ಕಾರ್ಗಿಲ್ ವಿಜಯೋತ್ಸವದ ದಿನದಂಸು ಸ್ಮರಣೆ ಮಾಡುವುದು ಎಂದರೆ ಧೈರ್ಯದ ಪರಂಪರೆಯ ಮುನ್ನಡೆಯಂತೆ ಎಂದು ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದ ಸಹ ಕುಲಪತಿ ಫಾ.ಡಾ.ಲಿಜೋ ಪಿ ಥಾಮಸ್ ಅಭಿಪ್ರಾಯಪಟ್ಟರು.

ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದ ಎನ್‌ಸಿಸಿ ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ “ಕಾರ್ಗಿಲ್ ವೀರರಿಗೆ ಗೌರವ ಸಮರ್ಪಣೆ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಚರಿತ್ರೆಯಲ್ಲಿ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಸೈನಿಕರು ದೇಶರಕ್ಷಣೆಗಾಗಿ ನಡೆಸಿದ ಹೋರಾಟವು ಸಾಹಸಮಯವಾದದ್ದು. ನಮ್ಮ ಸೈನಿಕರ ಶೌರ್ಯ, ಸಾಹಸ, ತ್ಯಾಗ, ಬದ್ಧತೆ, ಬಲಿದಾನಗಳು ಸದಾ ಸ್ಮರಣೀಯವಾದುವು. ರಾಷ್ಟ್ರಕ್ಕೆ ನಮ್ಮ ಸೈನಿಕರು ನೀಡದ ನಿಸ್ವಾರ್ಥ ಸೇವೆ ಹಾಗೂ ಅವರ ಸೇವಾ ಮನೋಭಾವವು ಪ್ರೇರಣಾದಾಯಕವಾದುದು. ಈ ಮೂಲಕ ಇಂದಿನ ಯುವ ಸಮುದಾಯವು ದೇಶಭಕ್ತಿಯ ಪ್ರಜ್ಞೆಯನ್ನು ಮೂಡಿಸಿಕೊಳ್ಳಲಿ ಮತ್ತು ನಮ್ಮ ಸೈನಿಕರ ತ್ಯಾಗಗಳನ್ನು ಎಂದಿಗೂ ಮರೆಯದಿರಲಿ ಎಂದು ತಿಳಿಸಿದರು.

ಕೆಜೆಯು ಎನ್.ಸಿ.ಸಿ ಘಟಕದ ವತಿಯಿಂದ ವೀರಯೋಧ ಕ್ಯಾಪ್ಟನ್ ವಿಕ್ರಮ್ ಬತ್ರಾ ಮತ್ತು ಇತರ ಕಾರ್ಗಿಲ್ ವೀರರ ಕಥೆಯನ್ನು ಚಿತ್ರಿಸುವ “ಆಪರೇಷನ್ ವಿಜಯ್: ದಿ ಫೈನಲ್ ಪೀಕ್” ಎಂಬ ನಾಟಕ ಪ್ರದರ್ಶನದ ಮೂಲಕ ಹೃದಯಸ್ಪರ್ಶಿ ಗೌರವ ಸಲ್ಲಿಸಲಾಯಿತು.

ಧೈರ್ಯ ಮತ್ತು ಗೌರವದ ಮನೋಭಾವದಿಂದ ತುಂಬಿದ ದೇಶಭಕ್ತಿಯ ನೃತ್ಯವು ಆಕರ್ಷಣೀಯವಾಗಿತ್ತು.
ಸಮಾರಂಭದಲ್ಲಿ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದ ಹಣಕಾಸು ಆಡಳಿತಾಧಿಕಾರಿ ಫಾ. ಜೈಸ್ ವಿ ಥಾಮಸ್, ಕುಲಸಚಿವರಾದ ಡಾ. ಅಲೋಷಿಯಸ್ ಎಡ್ವರ್ಡ್, ಅಕಾಡೆಮಿಕ್ ಡೀನರಾದ ಡಾ. ಕ್ಯಾಲಿಸ್ಟಸ್ ಜೂಡ್, ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಹಾಗೂ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಕಾರ್ಯಕ್ರಮ ಸಂಯೋಜಕರು ಮತ್ತು ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group