ಸವದತ್ತಿ – ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಆತಂಕಪಡುವಂತಾಗಿದೆ..
ಜಾನವಾರುಗಳಿಗೆ ಈಗಾಗಲೇ ತೊಂದರೆ ಆಗಿದ್ದು, ಮುಂದೆ ಯಾವುದೇ ಅನಾಹುತ ಆಗುವ ಮುನ್ನ ಗ್ರಾಮ ಪಂಚಾಯಿತಿಯವರು ಸೂಕ್ತ ಕ್ರಮ ಕೈಗುಳ್ಳುವಂತೆ ಗ್ರಾಮ ಪಂಚಾಯಿತಿ ಗೊರವನಕೊಳ್ಳ ಅಧಿಕಾರಿಗಳಿಗೆ ಗ್ರಾಮಸ್ಥರ ಸಹಿ ಸಂಗ್ರಹಿಸಿ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಓಂಕಾರ ಸಮಗ್ರ ಗ್ರಾಮೀಣ ಸೇವಾ ಸಂಘ (ರಿ) ಅಧ್ಯಕ್ಷ ಸೋಮಯ್ಯ ಪಾಟೀಲ, ರಾಮಚಂದ್ರ ಹುಜರತ್ತಿ, ಶೀವಾನಂದ ಪಾಟೀಲ, ಪರಶುರಾಮ ರಾವುತ, ಉಮೇಶ ರಾವುತ, ಚೇತನ ರಾವುತ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು,

