ಸಿಂದಗಿ: ವಿಜಯಪುರ ಜಿಲ್ಲೆ ವಿಶ್ವಗುರು ಬಸವಣ್ಣನವರು ಜನಿಸಿದ ಪವಿತ್ರ ಕ್ಷೇತ್ರವಾಗಿದ್ದು ಅವರ ಮಹಾಪುತ್ಥಳಿ ಅಮೇರಿಕಾ ದೇಶದಲ್ಲಿಯೂ ವಿಜೃಂಭಿಸಿದೆ ಇಂತಹ ಸಂದರ್ಭದಲ್ಲಿ ವಿಜಯಪುರ ನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಶ್ರೀ ಬಸವೇಶ್ವರ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದರೆ ಸಮಂಜಸವಾಗುವುದು ಕಾರಣ ರಾಜ್ಯಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ, ಪ್ರಥಮವಾಗಿ ಅನುಭವ ಮಂಟಪವನ್ನು ರಚಿಸಿ, ಸಂವಿಧಾನದ ಕಲ್ಪನೆಯನ್ನು ಕೊಟ್ಟವರೇ ವಿಶ್ವಗುರು ಬಸವಣ್ಣನವರ ಹೆಸರು ನಾಮಕರಣ ಮಾಡುವುದು ಅತ್ಯಂತ ಅವಶ್ಯಕ ಮತ್ತು ಸೂಕ್ತ ಇದರಿಂದ ಸರ್ಕಾರಕ್ಕೆ ಶ್ರೇಯಸ್ಸು ಕೊಡುತ್ತದೆ ಇದರಿಂದ ಯಾವುದೆ ಒತ್ತಡಕ್ಕೆ ಮಣಿಯದೇ ವಿಶ್ವಗುರು ಬಸವಣ್ಣನವರ ಹೆಸರಿಡಬೇಕು ಎಂದು ತಾಲೂಕ ವಿಶ್ವಹಿಂದು ಪರಿಷತ್ ಸಹ-ಕಾರ್ಯದರ್ಶಿ ಶಿವಾನಂದ ತಾವರಖೇಡ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವಣ್ಣನ ಹೆಸರಿಡಲು ಮನವಿ
0
574
Previous article
Next article
RELATED ARTICLES