ವಿಜಯಪುರ – ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿವಿ ಯಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಹಾಗೂ ಶರಣೆ ಅಕ್ಕಮಹಾದೇವಿಯ ಅರೆಬೆತ್ತಲೆ ಮೂರ್ತಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ವಿವಿ ಕುಲಪತಿಯವರಿಗೆ ಡಾ. ಶಶಿಕಾಂತ ಪಟ್ಟಣ ಅವರು ಮನವಿ ಸಲ್ಲಿಸಿದ್ದಾರೆ.
ಮನವಿಯ ಪೂರ್ಣಪಾಠ ಇಲ್ಲಿದೆ :
ಡಾ.ವಿಜಯಾ ಕೋರಿಶೆಟ್ಟಿ ಗೌರವಾನ್ವಿತ ಕುಲಪತಿಗಳು
ಕರ್ನಾಟಕ ರಾಜ್ಯ ಅಕ್ಕಮಹಾದೇವಿ, ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ, ಇವರಿಗೆ
ವಿಷಯ : ಅಭಿನಂದನಾ ಪತ್ರ ಮತ್ತು ಬಸವ ಅಧ್ಯಯನ ಪೀಠ ಸ್ಥಾಪನೆ ಕುರಿತು ಮನವಿ ಪತ್ರ
ಮಾನ್ಯರೇ
ತಾವು ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿ ಆಗಿ ಆಯ್ಕೆ ಆದದ್ದು ಕರ್ನಾಟಕದ ಅತ್ಯಂತ ಹೆಮ್ಮೆಯ ವಿಷಯ. ನಿಮಗೆ ಬಸವ ಭಕ್ತರ ಪರ ಅನಂತ ಅಭಿಮಾನದ ಅಭಿನಂದನೆಗಳು.
ನಿಮ್ಮ ಈ ಸಾಧನೆ ನಮ್ಮೆಲ್ಲರಿಗೂ ಬಹಳ ಸಂತೋಷವನ್ನುಂಟುಮಾಡಿದೆ. ನಿಮ್ಮ ಪರಿಶ್ರಮ ಮತ್ತು ಸಮರ್ಪಣಾ ಭಾವವು ಈ ಯಶಸ್ಸಿಗೆ ಕಾರಣವಾಗಿದೆ. ನಿಮ್ಮ ಮುಂದಿನ ಕಾರ್ಯಗಳಲ್ಲಿಯೂ ಇದೇ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ.
ತಮ್ಮ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಲು ಪ್ರಾರ್ಥನೆ.
ಅದೇ ರೀತಿ ನಾಡಿನ ಮೊದಲ ಕವಯಿತ್ರಿ ಶರಣೆ ಅಕ್ಕ ಮಹಾದೇವಿ ಇವರ ಅರೆ ಬೆತ್ತಲೆ ಮೂರ್ತಿಯನ್ನು ತಮ್ಮ ವಿಶ್ವ ವಿದ್ಯಾಲಯದ ಆವರಣದಲ್ಲಿ ತೆರುವಗೊಳಿಸಿ
ಅಲ್ಲಿ ಶುಭ್ರ ವಸ್ತ್ರದ ಸೀರೆಯೊಂದಿಗಿನ ಅಕ್ಕ ಮಹಾದೇವಿ ಮೂರ್ತಿಯನ್ನು ಸ್ಥಾಪಿಸಲು ಭಕ್ತಿಯ ಕೋರಿಕೆ.
ಬಸವಣ್ಣನವರು ಇಡೀ ಜಗತ್ತಿನ ಶ್ರೇಷ್ಠ ದಾರ್ಶನಿಕರು ಸಮಾಜ ಸುಧಾರಕರು. ಅವರು ವಿಜಯಪುರ ಜಿಲ್ಲೆಯ ಬಾಗೇವಾಡಿ ಹುಟ್ಟಿದವರು
ಆದರೆ ಅವರ ಹೆಸರಿನಲ್ಲಿ ಬಸವ ಅಧ್ಯಯನ ಪೀಠ ಅಕ್ಕ ವಿಶ್ವ ವಿದ್ಯಾಲಯದ ಆವರಣದಲ್ಲಿ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಕಾರಣ ಈ ಕೂಡಲೇ ತಾವು
ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪಿಸ ಬೇಕೆಂದು ನಾವು ಒತ್ತಾಯ ಪೂರ್ವಕ ಆಗ್ರಹಿಸುತ್ತೇವೆ.
ಇನ್ನೊಂದು ಅತ್ಯಂತ ನೋವಿನ ವಿಷಯವೆಂದರೆ ಅಕ್ಕ ಮಹಾದೇವಿ ವಿಶ್ವದ ಮೊದಲ ವಿಚಾರವಂತೆ ಕವಯಿತ್ರಿ ಅವಳು ಎಲ್ಲಿಯೂ ಬೆತ್ತಲೆ ಬಂದ ಉಲ್ಲೇಖವಿಲ್ಲ
ಇದು ನಾಗರಿಕ ಸಮಾಜದ ಅವಮಾನ ಕಾರಣ ತಾವು ಅರೆ ಬೆತ್ತಲೆಯ ಅಕ್ಕ ಮಹಾದೇವಿ ಮೂರ್ತಿ ತೆರವುಗೊಳಿಸಿ ಅಲ್ಲಿ ಶ್ವೇತ ವಸ್ತ್ರದ ಸೀರೆಯೊಂದಗಿನ ಅಕ್ಕ ಮಹಾದೇವಿ ಮೂರ್ತಿ ನಿಲ್ಲಿಸಲು ಕಳಕಳಿಯ ಮನವಿ
ನಿಮ್ಮ ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ನಮ್ಮ ಶುಭ ಹಾರೈಕೆಗಳು. ಅಕ್ಕನ ಅರಿವು,ವಚನ ಅಧ್ಯಯನ ವೇದಿಕೆಯ ಸಮಸ್ತ ಲಿಂಗಾಯತ ಬಳಗದ ಪರವಾಗಿ ತಮಗೆ ಅಭಿಮಾನದ ಅಭಿನಂದನೆಗಳು..
ವಿಧೇಯಪೂರ್ವಕವಾಗಿ, ಶರಣು
ತಮ್ಮ
ಡಾ ಶಶಿಕಾಂತ ಪಟ್ಟಣ ಅಧ್ಯಕ್ಷರು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ