ಮೂಡಲಗಿ ದಿ. ಮೆಥೋಡಿಸ್ಟ್ ಚರ್ಚ್ ನಲ್ಲಿ ಪುನರುತ್ಥಾನ ಹಬ್ಬದ ಆರಾಧನೆ, ಧ್ಯಾನ ಕೂಟ

Must Read

ಮೂಡಲಗಿ: ನಿತ್ಯ ಸನ್ಮಾರ್ಗದ ಜೊತೆ ಯೇಸುವಿನ ನಾಮಸ್ಮರಣೆ ಹೊಂದಿದರೆ ಖಂಡಿತ ನಿಮ್ಮ ಪ್ರಾರ್ಥನೆ ಆ ದೇವನಿಗೆ ಸಲ್ಲಿಕೆಯಾಗಿ ಆತನ ಕೃಪೆಗೆ ಪಾತ್ರರಾಗುವಿರಿ ಎಂದು ಮೈಸೂರಿನ ದೈವ ಸಂದೇಶಕರಾಗಿ ಆಗಮಿಸಿದ ಸ್ಟೀವನ್ ಸುರೇಶ ಹೇಳಿದರು.

ಭಾನುವಾರ ಇಲ್ಲಿನ 70 ವರ್ಷ ಇತಿಹಾಸವಿರುವ ದಿ. ಮೆಥೋಡಿಸ್ಟ್ ಚರ್ಚ್ ನಲ್ಲಿ ಸಭಾಪಾಲಕ ರೆ. ಡೆನಿಯಲ್ ಬಾಬು ಅವರ ನೇತೃತ್ವದಲ್ಲಿ ಶುಭ ಶುಕ್ರವಾರದ ಆರಾಧನೆ ಪ್ರಯುಕ್ತ ಯೇಸುಕ್ರಿಶ್ತನನ್ನು ಶಿಲುಬೆಗೇರಿಸಿದ ಸಂದರ್ಭದಲ್ಲಿ ಶಿಲುಬೆಯ ಮೇಲೆ ಯೇಸು ಆಡಿದ ಏಳು ಮಾತುಗಳ ಕುರಿತಾಗಿ ಸಂದೇಶ ಸಾರಿ ಮಾತನಾಡಿ, ಪ್ರಾರ್ಥನೆ ಎಂಬುದು ಬಹು ಬೆಲೆಯುಳ್ಳದ್ದು ನೀತಿವಂತರಾಗಿ ಜೀವಿಸಿದರೆ ಕೀರ್ತಿ,ಯಶಸ್ಸು ಅವರನ್ನು ಹಿಂಬಾಲಿಸುತ್ತದೆ ಎಂದರು.

ಚರ್ಚ್ ಆವರಣದಲ್ಲಿ ಸಾವಿರಾರು ಭಕ್ತರ ಸಮೂಹದಲ್ಲಿ ಸಂಗೀತ ಕೀರ್ತನೆಗಳಿಂದ ಜಲ್ಲರಿ ಕಿನ್ನರಿಗಳಿಂದ ಹಾಡುಗಳನ್ನು ಹಾಡುತ್ತ ದೇವನಾಮ ಸ್ಮರಣೆ ಮಾಡಿ ಈ ಹಬ್ಬ ಆಚರಿಸಿದರು. ಕಾರ್ಯಕ್ರಮಕ್ಕೆ ಸಹಾಯ ಮಾಡಿದ ದಾನಿಗಳನ್ನು ಸತ್ಕರಿಸಿದರು

ಕಾರ್ಯಕ್ರಮದ ವ್ಯವಸ್ಥಾಪಕರಾದ ಎಮ್‍ವಾಯ್‍ಎಫ್ ಕೂಟದ ಯುವಕರು,ಹಿರಿಯರು ಮತ್ತು ಮುಖಂಡರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜರುಗಿತು.

ಸಂತೋಷ ಗಾಡಿಕಾರ್ ಸ್ವಾಗತಿಸಿ ನಿರೂಪಿಸಿದರು, ಕೆನಾನ ಮೂಡಲಗಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮರೆಪ್ಪ ಮರೆಪ್ಪಗೋಳ, ಪ್ರಭಾಕರ ಬಂಗೆನ್ನವರ, ರವೀಂದ್ರ ಸಣ್ಣಕ್ಕಿ, ಸುಭಾಷ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ಎಮ್ ಡಿ ರಮೇಶ ಸಣ್ಣಕ್ಕಿ, ಶಾಬು ಸಣ್ಣಕ್ಕಿ, ಯಶವಂತ ಮರೆನ್ನವರ, ರಾಜೇಂದ್ರ ಪರಸನ್ನವರ, ಯಶವಂತ ಮೇತ್ರಿ, ಆನಂದ ಬೈಬಲ್, ಮನೋಹರ ಸಣ್ಣಕ್ಕಿ, ಅಶೋಕ ಸಿದ್ಲಿಂಗೆಪ್ಪಗೋಳ ಸಾವಿರಾರು ಭಕ್ತರು ಇದ್ದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group