ಸೇವಾ ನಿವೃತ್ತಿ, ಗೆಳೆಯರ ಬಳಗದಿಂದ ನಿಡಗುಂದಿಗೆ ಸನ್ಮಾನ

Must Read

ಮೂಡಲಗಿ : ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ್ ಗೂಳಪ್ಪ ನಿಡಗುಂದಿ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರ ಗೆಳೆಯರ ಬಳಗದಿಂದ ಮೂಡಲಗಿಯ ಪ್ರತಿಷ್ಠಿತ ಚೈತನ್ಯ ಕೊ – ಆಪ್ ಸೊಸಾಯಿಟಿ ಸಭಾ ಭವನದಲ್ಲಿ ಸತ್ಕಾರ ಸಮಾರಂಭ ಜರುಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೆಳೆಯರ ಬಳಗದ ಸಿ ಎಮ್ ಹಂಜಿ ಗುರುಗಳು ಮಾತನಾಡಿ, ನಮ್ಮ ಬಳಗದ ಆತ್ಮೀಯ ಸ್ನೇಹಿತರಾದ ಪ್ರಕಾಶ ನಿಡಗುಂದಿ ಅವರು 1980 ರಲ್ಲಿ ರಾಯಬಾಗದಲ್ಲಿ ಕೃಷಿ ಸಹಾಯಕರು ಆಗಿ ಸೇವೆಗೆ ಸೇರಿ ಉತ್ತಮ ಸೇವೆ ಸಲ್ಲಿಸಿ ನಂತರ 2012 ರಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿ ಬಡ್ತಿ ಹೊಂದಿ ಮತ್ತೆ ಕೃಷಿ ಅಧಿಕಾರಿಯಾಗಿ ಸ್ವಂತ ಊರಿಗೆ ವರ್ಗಾವಣೆ ಹಾಗೂ ಬಡ್ತಿ ಹೊಂದಿ 37 ವರ್ಷ ಸುದೀರ್ಘವಾಗಿ ಸಲ್ಲಿಸಿದ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿಷ್ಕಳಂಕ ರಹಿತ ಅವರ ಸೇವೆಯಿಂದ ಎಲ್ಲರ ಅಚ್ಚುಮೆಚ್ಚಿನ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿರುವ ಅವರ ನಿವೃತ್ತಿ ಜೀವನ ಸುಖಮಯ ಆಗಿರಲಿ ಎಂದರು.

ಬಳಗದ ಇನ್ನೋರ್ವ ಅತಿಥಿ ಗಂಗಾಧರ ಬಿಜಗುಪ್ಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಮಾತನಾಡಿ, ರೈತಾಪಿ ವರ್ಗದ ಜನರೊಂದಿಗೆ ಉತ್ತಮ ಭಾಂದವ್ಯ ಹೊಂದಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸ್ನೇಹಿತನ ನಿವೃತ್ತಿ ಜೀವನ ಚೆನ್ನಾಗಿರಲಿ ಎಂದು ಆಶಿಸಿದರು.

ಬಳಗದ ಯಾಕೂಬ್ ಸಣ್ಣಕ್ಕಿ ಮಾತನಾಡಿದರು. ಸಮಾರಂಭದಲ್ಲಿ ಪ್ರಕಾಶ ನಿಡಗುಂದಿ ಹಾಗೂ ಅವರ ಪತ್ನಿ ರಾಜಶ್ರೀ ಅವರನ್ನು ಗೆಳೆಯರ ಬಳಗದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಪ್ರದೀಪ ಲಂಕೆಪ್ಪನವರ,ಮೌನೇಶ ಪತ್ತಾರ, ಬಸವರಾಜ ರಂಗಾಪೂರ, ಮೀರಾಸಾಬ ಕಳ್ಳಿಮನಿ, ಅಶೋಕ ಮೂಡಲಗಿ, ಶಶಿಕಾಂತ ಬಾಗೋಜಿ, ಮಲ್ಲಪ್ಪ ಮುರಗೋಡ, ಶಿವಬಸು ನೇಮಗೌಡರ, ಮಾಹದೇವಿ ಸಣ್ಣಕ್ಕಿ ಕಾಶಿಬಾಯಿ ಬಿಜಗುಪ್ಪಿ ಸೇರಿದಂತೆ ಅನೇಕರಿದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group