spot_img
spot_img

ನಿವೃತ್ತ ಶಿಕ್ಷಕರು ಸ್ವಂಯ ಶಿಕ್ಷಕರಾಗಿ ಮರಳಿ ಶಾಲೆಯಲ್ಲಿ ಕಾರ್ಯ ನಿರ್ವಹಿಸಬೇಕು

Must Read

- Advertisement -

ಸಿಂದಗಿ: ನಿವೃತ್ತ ಶಿಕ್ಷಕರು ಸ್ವಯಂ ಸೇವಕ ಶಿಕ್ಷಕರಾಗಿ ತಮ್ಮ ಗ್ರಾಮದಲ್ಲಿ ಮರಳಿ ಸೇವೆ ಮಾಡಲು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಎಸ್ ಟಕ್ಕೆ ವಿನಂತಿಸಿ ಕೊಂಡರು.

ಪಟ್ಟಣದ  ಬಿ ಆರ್ ಸಿ ತರಬೇತಿ ಕೇಂದ್ರದಲ್ಲಿ ಶನಿವಾರ ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕದ ಪರವಾಗಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿ, ಶಿಕ್ಷಕರು ದೇಶ ಕಟ್ಟುವ, ಸೃಜನಶೀಲ ಸಮಾಜವನ್ನು ನಿರ್ಮಿಸುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸ ಸದಾ ಮಾಡುತ್ತಿರಬೇಕು. ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ನೈಜ ಗುರು ಆಗುವರು.

ಶಿಕ್ಷಕರು ನಿವೃತ ಹೊಂದಿದ ಮೇಲೆ ಗ್ರಾಮೀಣ ಭಾಗದಲ್ಲಿ ಇರುವ ಶಾಲೆಗಳಿಗೆ ತರಳಿ ಸ್ವಂಯ ಸೇವಾ ರೂಪದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲು ಮುಂದಾಗಬೇಕು. ನಿವೃತ ಹೊಂದಿರುವ ಶಿಕ್ಷಕರಿಗೆ ಸರಕಾರದಿಂದ ಬರುವ ಸೌಲಭ್ಯಗಳು ಪ್ರಾಮಾಣಿಕವಾಗಿ  ಮುಟ್ಟಿಸಲು ಮುಂದಾಗುವೆ. ಆದ್ದರಿಂದ ನಿವೃತ ಶಿಕ್ಷಕರು ತಮ್ಮ ನಿವೃತ ಜೀವನ ಹಾಗೂ ತಮ್ಮ ಆರೋಗ್ಯ ಕಡೆ ಉತ್ತಮ ಗಮನ ಇರಲಿ ಎಂದರು.

- Advertisement -

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕ ಘಟಕದ ಅಧ್ಯಕ್ಷ ಆನಂದ ಭೂಸನೂರ ಮಾತನಾಡಿ ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ತಮ್ಮ ಶಿಷ್ಯರ ಮನಃ ಪಟಲದಲ್ಲಿ ಸದಾ ನಿಲ್ಲುತ್ತಾರೆ, ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಉತ್ತಮ ಶಿಕ್ಷಕರಿಂದಲೇ ಸಾಧ್ಯವಾಯಿತು ಎಂದರು.

ಮುಖ್ಯಗುರುಮಾತೆ ಶಿಕ್ಷಕರ ಸಂಘದ ಹಿರಿಯ ಪದಾಧಿಕಾರಿ ಶ್ರೀಮತಿ ಎಸ್.ಎಂ.ಚಿಗರಿ ಮಾತನಾಡಿ ಸೇವಾ ನಿವೃತ್ತಿಯ ನಂತರ ನಿರಂತರವಾಗಿ ಸಾಮಾಜಿಕವಾಗಿ ನಿಸ್ವಾರ್ಥ ಸೇವೆಯನ್ನು ಮಾಡಲು ಶಿಕ್ಷಕರು ಮುಂದಾಗಬೇಕು ಎಂದರು. 

ದೇವರಹಿಪ್ಪರಗಿ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಚ್ ವಾಲಿಕಾರ ಮಾತನಾಡಿದರು.

- Advertisement -

ಇದೇ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಎಸ್ ಎಸ್ ಕೆರಿಗೊಂಡ ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘ ಸೇವೆ ಸಲ್ಲಿಸಿ ತಮ್ಮ ಇಳಿ  ವಯೋ ಮಾನದಲ್ಲಿ ಕ್ರಿಯಾತ್ಮಕವಾಗಿ ಚಟುವಟಿಕೆಯಿಂದ ಜೀವನದಲ್ಲಿ ಸದಾ ಹಸನ್ಮುಖಿಯಾಗಿ ಇರಬೇಕು ಎಂದರು.

ದೈಹಿಕ ವಿಶ್ರಾಂತ ಅಧಿಕಾರಿ ಎಸ್ ಎಸ್ ಕೆರಿಗೊಂಡವರಿಗೆ  ವಿವಿಧ ಶಿಕ್ಷಕರ ಸಂಘದವರು ಸನ್ಮಾನಿಸಿ ಗೌರವಿಸಿದರು. ನೂತನ ದೈಹಿಕ ಶಿಕ್ಷಣಾಧಿಕಾರಿ ರಾಠೋಡ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಸಮಾರಂಭದಲ್ಲಿ ಆರ್.ಆರ್.ರಾಠೋಡ. ಎಸ್.ಎಸ್ ಮಾಣಸುಣಗಿ. ಬಿ.ಕೆ.ಶ್ರೀಗಿರಿ. ಡಿ.ಎಂ.ಆಲಮೇಲ. ಎನ್.ಹೆಚ್.ಕಳಾವಂತ. ಟಿ.ಕೆ.ಪತ್ತಾರ. ಎಂ.ಹೆಚ್ ಬಗಲಿ. ಕೆ.ಆರ್.ಲಮಾಣಿ. ವ್ಯಾ.ಕೆ.ಬಶೇಟ್ಟಿ. ಬಿ.ಬಿ.ವಾಲಿಕಾರ. ಎಸ್.ಬಿ. ತಳವಾರ. ಎಸ್.ಎಸ್.ಹೊಸಮನಿ. ಎಸ್.ಬಿ.ದೊಡಮನಿ. ಎಸ್.ಬಿ.ಧೂಳಬಾ. ಕೆ.ಬಿ.ಮಳ್ಳಿ. ಶ್ರೀಮತಿ.ಎಸ್.ಕೆ.ಬಳಗಾನೂರ. ಶ್ರೀಮತಿ.ಬಿ.ವ್ಹಿ.ಗೋಣಿ. ಶ್ರೀಮತಿ ಎಸ್.ಎಸ್.ಕುಂಬಾರ. ಶ್ರೀಮತಿ ಎಸ್.ಡಿ.ಕಟಗಿಘಾಣ. ಶ್ರೀಮತಿ.ಎಸ್.ಎಸ್.ಮಂಗಳೂರ. ಶ್ರೀಮತಿ ಪಿ.ಎಲ್.ಮಾಡ್ಯಾಳ. ಶ್ರೀಮತಿ ವಿಜಯಾ ಎಸ್ ಹೆಚ್ ಸೇರಿದಂತೆ ನಿವೃತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ಶಿಕ್ಷಕರಾದ ಲಕ್ಷ್ಮಣ ಸೊನ್ನ.ರಾಯಪ್ಪ ಇವಣಗಿ. ಎಸ್ ಎಂ ಚಿಗರಿ. ಬಸವರಾಜ ಸೋಮಪೂರ. ಮಹಾಂತೇಶ ಬಾಗೇವಾಡಿ. ಬಸಯ್ಯ ಹಿರೇಮಠ. ಜಯಶ್ರೀ ಭಾಸಗಿ. ಎಸ್ ಎಂ.ಮಸಳಿ. ಜಯಶ್ರೀ ಬೆಣ್ಣಿ. ಸುನಂದಾ ನಾರಾಯಣಕರ. ಬಸಮ್ಮ ಭಜಂತ್ರಿ. ಎಸ್ ಎಸ್ ಹಚಡದ. ಪ್ರಕಾಶ ಅಡಗಲ್ಲ್. ಜಿ ಎಸ್ ಹೊಸಗೌಡರ .ಜಾಕೀರಹುಸೇನ್ ಮನಿಯಾರ. ಸಿ ಎನ್ ಶಿರಕನಹಳ್ಳಿ. ಶಿಕ್ಷಣ ಸಂಯೋಜಕರು ಹಾಗೂ ಬಿ ಆರ್ ಸಿ .ಸಿ ಆರ್ ಪಿ ಸೇರಿಂದಂತೆ ಶಿಕ್ಷಕರು ಭಾಗವಹಿಸಿದರು.

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group