spot_img
spot_img

ಕನ್ನಡ ನಾಡು-ನುಡಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ಅಪಾಯ- ಡಾ.ಭೇರ್ಯ ರಾಮಕುಮಾರ್

Must Read

- Advertisement -

“ವಿವಾಹ ಜೀವನದಲ್ಲಿ ಯಶಸ್ವಿಯಾಗಲು ಸಪ್ತಪದಿ ಕಾರ್ಯ ಮಾಡುವಂತೆ, ಕನ್ನಡಿಗರೆಲ್ಲರೂ ಕನ್ನಡ ನಾಡು-ನುಡಿಯ ಉಳಿವಿಗೆ ಸಪ್ತಸೂತ್ರಗಳನ್ನು ಪಾಲಿಸುವ ಪ್ರತಿಜ್ಞೆ ಮಾಡಬೇಕೆಂದು ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.

ಕೆ.ಆರ್.ನಗರ ತಾಲ್ಲೂಕಿನ ಅರಕೆರೆ ಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಗತ್ ಸಿಂಗ್ ಯೂತ್‌ ಫೌಂಡೇಶನ್ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ,ಮಕ್ಕಳ ದಿನಾಚರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು‌.

೧೯೦೫ ರಲ್ಲಿ ಕನ್ನಡ ಭಾಷೆ ಮಾತನಾಡುವ ಎಲ್ಲಾ ಪ್ರದೇಶಗಳನ್ನೂ ಒಗ್ಗೂಡಿಸಿ, ಕನ್ನಡ ರಾಜ್ಯ ಮಾಡುವಂತೆ ಆಲೂರು ವೆಂಕಟರಾಯರು ಹೋರಾಟ ಆರಂಭಿಸಿದರು. ಹುಯಿಲಗೋಳ ನಾರಾಯಣರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯು ಕನ್ನಡ ರಾಜ್ಯಹೋರಾಟಗಾರರ ಮನದಾಳದ ಧ್ವನಿಯಾಯಿತು.ಹಿರಿಯ ಕನ್ನಡ ಚಳವಳಿಗಾರ ಡಾ .ರಾಮಮೂರ್ತಿ ಅವರು ರೂಪಿಸಿದ ಕನ್ನಡ ಬಾವುಟ ಹೋರಾಟಗಾರರಿಗೆ ಹುಮ್ಮಸ್ಸು ನೀಡಿತು.ಇದರ ಪರಿಣಾಮವಾಗಿ ೧೯೫೬ ರ ನವಂಬರ್ ೧ ರಂದು ನೂತನ ಮೈಸೂರು ರಾಜ್ಯ ರಚನೆಯಾಯಿತು. ನೂತನ ಮೈಸೂರು ರಾಜ್ಯ ರಚನೆಯಲ್ಲಿ ಕುವೆಂಪು, ಮಾಸ್ತಿ, ಶಿವರಾಮಕಾರಂತ,ಬಿ.ಎಂ.ಶ್ರೀ, ಅ.ನ.ಕೃ ಸೇರಿದಂತೆ ನೂರಾರು ಕವಿಗಳ ಕೊಡುಗೆ ಅಪಾರವಾಗಿದೆ ಎಂದವರು ಹೇಳಿದರು.

- Advertisement -

ಕರ್ನಾಟಕದ ಏಳು ಕೋಟಿ ಜನಸಂಖ್ಯೆಯ ಪೈಕಿ ಸುಮಾರು ಎರಡು ಕೋಟಿಯಷ್ಟು ಜನರು ಗಡಿಜಿಲ್ಲೆಗಳಲ್ಲಿದ್ದು,ನೆರೆಯ ರಾಜ್ಯಗಳಾದ ಕೇರಳ,ಮಹಾರಾಷ್ಟ್ರ, ತಮಿಳ್ನಾಡು ರಾಜ್ಯಗಳ ಭಾಷೆ ಹಾಗೂ ಸಂಸ್ಕೃತಿಯ ಹೇರಿಕೆಗೆ ಒಳಗಾಗಿದ್ದಾರೆ. ಅದೇ ರೀತಿ ರಾಜ್ಯದ ರಾಜಧಾನಿ ಬೆಂಗಳೂರು ಅನ್ಯಭಾಷಿಗರ ಹಾವಳಿಗೆ ತತ್ತರಿಸಿದೆ. ಕೆಲವೇ ವರ್ಷಗಳಲ್ಲಿ ಬೆಂಗಳೂರಿನಿಂದ ಕನ್ನಡ ಭಾಷೆಯೇ ನಾಪತ್ತೆಯಾಗಬಹುದೆಂಬ ಆತಂಕ ಕಾಡುತ್ತಿದೆ.ಅದೇ ರೀತಿ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಅನ್ಯಭಾಷಾ ನೌಕರರ ಸಂಖ್ಯೆ ಮಿತಿಮೀರಿದ್ದು, ಇದರಿಂದ ಗ್ರಾಮೀಣ ಜನರಿಗೆ ಅಪಾರ ತೊಂದರೆ ಉಂಟಾಗುತ್ತಿದೆ ಎಂದವರು ಆತಂಕ ವ್ಯಕ್ತಪಡಿಸಿದರು.

ಎಲ್ಲ ಕನ್ನಡಿಗರೂ ಕನ್ನಡ ಭಾಷೆಯ ಉಳಿವಿಗಾಗಿ ಸಪ್ತಸೂತ್ರಗಳನ್ನು ಅನುಸರಿಸಬೇಕು. ಎಲ್ಲರೂ ಕನ್ನಡವನ್ನೇ ಮಾತನಾಡಬೇಕು. ಕನ್ನಡೇತರರಿಗೆ ಕನಿಷ್ಠ ಒಬ್ಬರಿಗಾದರೂ ಕನ್ನಡ ಕಲಿಸಬೇಕು. ಕನ್ನಡದಲ್ಲಿಯೇ ಸಹಿ ಹಾಕಬೇಕು.ತಮ್ಮ ದಿನನಿತ್ಯದ ಎಲ್ಲ ವ್ಯವಹಾರಗಳನ್ನೂ ಕನ್ನಡದಲ್ಲಿಯೇ ಮಾತನಾಡಬೇಕು. ತಮ್ಮ ಮಕ್ಕಳಿಗೆ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಿಸಬೇಕು.ಕನ್ನಡ ಚಲನಚಿತ್ರ ಗಳನ್ನೇ ನೋಡಬೇಕು.

ಕನ್ನಡ ಗೀತೆಗಳನ್ನೇ ಹಾಡಬೇಕು.ವಿದೇಶ ಯಾತ್ರೆ ಮಾಡುವುದರ ಬದಲು ಕನ್ನಡನಾಡಿನ ಪ್ರಸಿದ್ದ ಕ್ಷೇತ್ರಗಳಿಗೆ ಪ್ರವಾಸ ಮಾಡಬೇಕು.ಕನ್ನಡ ಪತ್ರಿಕೆಗಳನ್ನು ಹಾಗೂ ಪುಸ್ತಕಗಳನ್ನು ಕಡ್ಡಾಯವಾಗಿ ಓದಬೇಕು.ಈ ಎಲ್ಲಾ ಸೂತ್ರಗಳನ್ನೂ ಅಳವಡಿಸಿಕೊಂಡರೆ ಕನ್ನಡ ನಾಡು-ನುಡಿ ನೂರಾರು ವರ್ಷ ಉಳಿಯುತ್ತದೆ ಎಂದು ಭೇರ್ಯ ರಾಮಕುಮಾರ್ ಕರೆನೀಡಿದರು.

- Advertisement -

ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಜಾಗೃತಿ, ನೇತ್ರದಾನ, ರಕ್ತದಾನ, ಆರೋಗ್ಯ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯು ಅತ್ಯಂತ ಜನಪರ ಕೆಲಸ ನಿರ್ವಹಿಸುತ್ತಿದೆ ಸಾರ್ವಜನಿಕರು ಇಂತಹ ಸಂಸ್ಥೆಗಳನ್ನು ಬೆಂಬಲಿಸಬೇಕೆಂದವರು ನುಡಿದರು.

ಮೈಸೂರಿನ ರೇಡಿಯಂಟ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ವಿಶಾಲ್,ಶಾಲಾ ಮುಖ್ಯೋಪಾಧ್ಯಾಯಿನಿ ಮರಿಯಾ,ಗ್ರಾಮಪಂಚಾಯ್ತಿ ಸದಸ್ಯರಾದ ಬಲರಾಂ,ಯೋಗೇಶ್ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ಮಂಜುರಾಜ್ ಅವರು ಮಕ್ಕಳ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು.ಭಗತ್ ಸಿಂಗ್ ಫೌಂಡೇಶನ್ ನ ಅಧ್ಯಕ್ಷರಾದ ಹೆಚ್.ಎಸ್.ಯೋಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಪ್ರಾರ್ಥಿಸಿದರು.

ಚೆಲುವನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೃಷ್ಣಯ್ಯ ಸ್ವಾಗತಿಸಿದರು.ಸಂಸ್ಥೆಯ ಪ್ರದಾನ ಕಾರ್ಯದರ್ಶಿ ರಕ್ಷಿತ್ ನಿರೂಪಣೆ . ಸ್ವಾಮಿಗೌಡ ವಂದಿಸಿದರು.ಫೌಂಡೇಶನ್ ಪದಾಧಿಕಾರಿಗಳಾದ ಧರ್ಮ ಹೊಸೂರು,ಪಾಣಿತ್ ವಕೀಲರು ನಟರಾಜ್ ಮುಳ್ಳೂರು,ರಾಜೇಶ್,ಶಿವು
ಸುದೀಪ್ ,ತೇಜು,ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಭಗತ್ ಸಿಂಗ್ ಯೂತ್ ಫೌಂಡೇಶನ್ ಹಾಗೂ ಮೈಸೂರಿನ ರೇಡಿಯಂಟ್ ಆಸ್ಪತ್ರೆ ಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಈ ಆರೋಗ್ಯ ಶಿಬಿರದಲ್ಲಿ ೧೪೫ ಜನರಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸಲಹೆ ನೀಡಲಾಯಿತು. ೩೦ ಜನರಿಗೆ ಉಚಿತವಾಗಿ ಇ.ಸಿ.ಜಿ ಮಾಡಲಾಯಿತು. ೭೫ ಶಾಲಾ ಮಕ್ಕಳ ರಕ್ತಪರೀಕ್ಷೆ ಮಾಡಲಾಯಿತು. ಗ್ರಾಮೀಣ ಪ್ರದೇಶದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರವು ಯಶಸ್ವಿಯಾಯಿತು.

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group