spot_img
spot_img

ನಿಪ್ಪಾಣಿಯಲ್ಲಿ ಮಂಗಳಾ ಮೆಟಗುಡ್ಡ ಪ್ರಚಾರ ಕಾರ್ಯ

Must Read

spot_img

ನಿಪ್ಪಾಣಿ – ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಸ್ಥಾನದ ಅಭ್ಯರ್ಥಿ ಶ್ರೀಮತಿ ಮಂಗಳಾ ಮೆಟಗುಡ್ಡ ಅವರು ಇಂದು ಗಡಿನಾಡು ನಿಪ್ಪಾಣಿ ಯ ಕೆಎಲ್ಇ ಪದವಿ ಮಹಾವಿದ್ಯಾಲಯದಲ್ಲಿ ತಮ್ಮ ಕಸಾಪ ಚುನಾವಣೆಯ ಪ್ರಚಾರ ಕಾರ್ಯ ಕೈಗೊಂಡರು.

ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ತಿಳಿಸಿ ತಾವು ಮಾಡಿದ ಕೆಲಸ ಕಾರ್ಯಗಳನ್ನು ಸವಿಸ್ತಾರವಾಗಿ ತಿಳಿಸಿದರು.

ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷರಾದ ಮೋಹನ ಪಾಟೀಲ ಅವರು ತಮ್ಮ ಅವಧಿಯಲ್ಲಿನ ಹಲವಾರು ರೀತಿಯ ಕೆಲಸ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು. ಕಿತ್ತೂರು ಕರ್ನಾಟಕ ನಾಮಕರಣದ ಎಲ್ಲಾ ಮಾಹಿತಿಯಿದೆ ಶ್ರಮದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು ವಿದ್ಯಾಸಂವರ್ಧಕ ಮಂಡಳದ ಆಡಳಿತ ಮಂಡಳಿಯ ನಿರ್ದೇಶಕರಾದ ಅಪ್ಪಟ ಕನ್ನಡ ಪ್ರೇಮಿಗಳಾದ ಸಂಜೆಯ ಮುಳವಾಡೆ ಅವರು ಗಡಿನಾಡಿನ ಕನ್ನಡ ಹೋರಾಟಗಾರ ಸುನೀಲ್ ಪಾಟೀಲ, ಗಡಿನಾಡಿನ ಪ್ರತಿಷ್ಠಿತ ವಿದ್ಯಾಸಂವರ್ದಕ ಮಂಡಳದ ಕ್ರಿಯಾಶೀಲ ಸಿಇಒ ಸಿದ್ದು ಪಾಟೀಲ,ನಿಪ್ಪಾಣಿಯ ಕನ್ನಡ ಮನೆತನದ ವಾರಸುದಾರರಾದ ಡಾಕ್ಟರ್ ಚಂದ್ರಕಾಂತ ಕುರಬೆಟ್ಟಿ, ಕೆಎಲ್ಇ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಮ್ ಎಚ್ ಹುರುಳಿ, ನಿಪ್ಪಾಣಿ ತಾಲೂಕಿನ ಕಸಾಪ ಅಧ್ಯಕ್ಷೆ ಸೌ.ವಿದ್ಯಾವತಿ ಜನವಾಡೆ, ಗಡಿನಾಡು ಕನ್ನಡ ಬಳಗದ ಅಧ್ಯಕ್ಷರಾದ ಮಹಾದೇವ ಬರಗಾಲೆ, ಉಪಾಧ್ಯಕ್ಷರಾದ ವಾಯ್ ಬಿ ಹಂಡಿ, ಪುರಾಣಿಕಮಠ ಸರ್, ಖಜ್ಜನ್ನವರ ಸರ್ ಕಸಾಪ ಮತದಾರರು ಕನ್ನಡ ಪ್ರೇಮಿಗಳು ಈ ಸಂದರ್ಭದಲ್ಲಿ ಹಾಜರಿದ್ದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸೌ ಮಂಗಳಾ ಮೆಟಗುಡ್ಡ ಅವರಿಗೆ ಬೆಂಬಲವನ್ನು ವ್ಯಕ್ತ ಪಡಿಸಿದರು.

ಗಡಿಭಾಗದಲ್ಲಿ ಕಸಾಪದಿಂದ ಮುಂದಿನ ದಿನಗಳಲ್ಲಿ ಯಾವ ಯಾವ ವಿಶೇಷ ಸವಲತ್ತುಗಳನ್ನು ಒದಗಿಸಬೇಕು ಎಂಬ ಹಲವಾರು ಮಾತುಗಳನ್ನು ಅವರು ತಿಳಿಸಿದ್ದಾರೆ ಕಾರ್ಯಕ್ರಮವನ್ನು ರಾವ್ ಸಾಹೇಬ್ ಜನವಾಡೆ ನಿರ್ವಹಿಸಿದರು.

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!